You are here
Home > Koppal News > ಯಾವ ಪ್ರವಾಧಿಯು ಸಮಾಜದ ಕೇಡನ್ನು ಬಯಸಿ ಧರ್ಮವನ್ನು ಸ್ಥಾಪಿಸಲಿಲ್ಲ, -ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮಿಜೀ

ಯಾವ ಪ್ರವಾಧಿಯು ಸಮಾಜದ ಕೇಡನ್ನು ಬಯಸಿ ಧರ್ಮವನ್ನು ಸ್ಥಾಪಿಸಲಿಲ್ಲ, -ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮಿಜೀ

ಹೊಸಪೇಟೆ-ಯಾವ ಪ್ರವಾಧಿಯು ಸಮಾಜದ ಕೇಡನ್ನು ಬಯಸಿ ಧರ್ಮವನ್ನು ಸ್ಥಾಪಿಸಲಿಲ್ಲ, ಎಲ್ಲಾ ಧರ್ಮದ ಗುರಿ ಮತ್ತು ಉದ್ದೇಶ ಕೇವಲ ಸಮಾಜದ ಉದ್ಧಾರ ಎಂದು ಗದಗ-ಬಿಜಾಪುರ ಶ್ರೀರಾಮಕೃಷ್ಣಾಶ್ರಮದ ಅಧ್ಯಕ್ಷ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮಿಜೀ ತಿಳಿಸಿದರು.
    ಅವರು ನಗರದ ಲ್ಲಿಂದು ಲೋಕನಾಯಕ ಜಯಪ್ರಕಾಶ ನಾರಾಯಣ ಸರ್ವೋದಯ ಟ್ರಸ್ಟ್‌ನ  ನವೀಕೃತ ಜೆ.ಪಿ.ಭವನದ ಉದ್ಘಾಟನೆ ಹಾಗೂ ಬಳ್ಳಾರಿ ರಸ್ತೆಯ ಸರ್ದಾರ್ ಪಟೇಲ್ ಹೈಸ್ಕೂಲಿನ ಆವರಣದಲ್ಲಿ ಆಯೋಜಿಸಿದ್ದ ‘ಸರ್ವಧರ್ಮ ಸಮಭಾವ ಸಮಾವೇಶ’ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಪ್ರತಿಯೊಬ್ಬರು ಸುಖದ ಹಿಂದೆ ಓಡುತ್ತಿದ್ದೇವೆ , ಜೀವನದಲ್ಲಿ ಸಾರ್ಥಕತೆ ಸಿಗುವುದು ಎಲ್ಲಿ? ಸುಖ-ದುಃಖ ಎಂದರೇನು? ಜೀವನದ ಅರ್ಥವೇನು ಎನ್ನುವ ಜಿಜ್ಞಾಸೆಯನ್ನು ಮಾಡಬೇಕು, ಭೌತಶಾಸ್ತ್ರ, ರಸಾಯನಶಾಸ್ತ್ರದೊಂದಿಗೆ ಜೀವನಶಾಸ್ತ್ರದ ಅಧ್ಯಯನವು ಅತಿ ಅವಶ್ಯ, ದುಃಖ ಬರುವುದು ರೋಧಿಸುವದಕ್ಕಲ್ಲ ಬದಲಿಗೆ ಮಲಗಿರುವ ಬುದ್ಧಿ ಮತ್ತು ಮನಸ್ಸನ್ನು ಎಚ್ಚರಗೊಳಿ ಸುವುದಕ್ಕೆ, ಕಣ್ಣೀರು, ಬಡತನ, ಕ್ರೌರ್ಯ ಇವುಗಳನ್ನು ಕಿತ್ತೊಗೆದು ಪುನರಾವರ್ತನೆ ಯಾಗದಂತೆ ಎಚ್ಚರವಹಿಸಿ, ನಮ್ಮಲ್ಲಿರುವ ದಾನವನನ್ನು ಅಳಿಸಬೇಕು, ನಮ್ಮ ಧರ್ಮವೇ ಶ್ರೇಷ್ಟ ಎನ್ನುವ ಧೋರಣೆಯು ನಿಲ್ಲಬೇಕು, ಅನಂತ ಎನ್ನು ವುದು ಯಾರ ನಿಲುವಿಗೂ  ನಿಲುಕುವುದಲ್ಲ, ಸತ್ಯದ ಬಗ್ಗೆ ಅರಿತು ಪರೀಕ್ಷಿಸಿ ಧಾರ್ಮಿಕ ವಿಚಾರಗಳನ್ನು ಒಪ್ಪಿ ಕೊಳ್ಳುವ ಮನಸ್ಥಿತಿ ನಿರ್ಮಾಣವಾಗ ಬೇಕು, ಧರ್ಮ ಜಗತ್ತಿಗೆ ತಾಯಿಯಾಗಬೇಕಿತ್ತ್ತು ದುರಾದೃಷ್ಟವಶಾತ್ ಇಂದೂ ಏನೋ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ಈ ಸಂದರ್ಭದಲ್ಲಿ ಶಿವಮೊಗ್ಗದ     ಸದ್ಗುರು ದಿವ್ಯಾಶ್ರಮದ ಶ್ರೀ ಬ್ರಹ್ಮಾನಂದ ತೀರ್ಥ ಭಿಕ್ಷು, ಸುಕ್ಷೇತ್ರ ನಂದಿಪುರದ ಶ್ರೀಮಹೇಶ್ವರ ಸ್ವಾಮಿಗಳು, ಕರ್ನೂಲಿನ ಪೀರ್‌ಕಾದ್ರಿ ಡಾ.ಸಯ್ಯದ್‌ಶಹ ಮೊಹಮ್ಮದ್ ಇಸ್ಮಾಯಿಲ್, ಮುನಿರಾಬಾದ್‌ನ ಕ್ರೈಸ್ತ ಗುರು ಫಾದರ್ ಅಮಲ್‌ರಾಜ್, ಹೊಸಪೇಟೆಯ ಗೀತಾಶ್ರಮದ ಸುಮೇದಾನಂದ ಸ್ವಾಮೀಜಿ,  ಸಿಕ್ ಧರ್ಮಗುರು ನಿರ್ಮಲ್ ಸಿಂಗ್ ಮಾತನಾಡಿದರು, ಹಂಸಾಂಬ ಆಶ್ರಮದ ಮಾತಾಜೀ, ಹೊಸಪೇಟೆಯ ನಡೆದಾಡುವ ಗಾಂಧಿ ಜೆ.ಪಿ. ಭವನದ ಅಧ್ಯಕ್ಷ ಕೆ.ನಾರಾ ಯಣ ಭಟ್, ಅಂಜುಮನ್‌ನ ಸತ್ತಾರ್‌ಸೇಠ್, ದ.ಕ.ಜಿಲ್ಲೆ ಚಾರ್ಮಾಡಿ ಘಾಟ್‌ನ  ಅಸನಬ್ಬ, ಸಿರಾಜುದ್ದೀನ್, ವಿಕಾಸ ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ್ ಚ.ಹಿರೇಮಠ್, ಭೂಪಾಳ ರಾಘವೇಂದ್ರ ಶೆಟ್ಟಿ,  ಜೆ.ಎಸ್.ಡಬ್ಲ್ಯುನ ಬಾಲಾಜಿ ಪ್ರಸನ್ನ ಬಂಡ್ರಿ, ಆಂಜನೇ ಯಲು , ಕಿಲೋಸ್ಕರ್‌ನ ಆರ್.ವಿ.ಗುಮಾಸ್ತೆ,  ಪ್ರಭಾಕರ ಶೆಟ್ಟಿ ಹನುಮಂತರಾಯ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
    ಬಳ್ಳಾರಿ ರಸ್ತೆಯಲ್ಲಿ ರುವ ಸುಮಾರು ೪೦ ಲಕ್ಷ  ರೂ ವೆಚ್ಚದಲ್ಲಿ ನವೀಕೃತ ಗೊಂಡಿರುವ ಜೆ.ಪಿ. ಭವನವನ್ನು ಶ್ರೀ ನಿರ್ಭಯಾ ನಂದ ಸ್ವಾಮೀಜಿಗಳು ಲೋಕಾರ್ಪಣೆ ಗೊಳಿಸಿದರು. ಸಭೆಯ ಆರಂಭದಲ್ಲಿ ನೇಪಾಳದಲ್ಲಿ ಭೂಕಂಪನದಲ್ಲಿ ಸಾವನಪ್ಪಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು, ಬೆಳಿಗ್ಗೆ ಗಾಂಧೀಜಿ ವೃತ್ತದಿಂದ ಜೆ.ಪಿ.ಭವನದವರೆಗೆ ವಿವಿಧ ಧರ್ಮಗಳ ವಿಶ್ವ ಸಂದೇಶಗಳ ಫಲಕಗಳೊಂದಿಗೆ ಮೌನ ಮೆರವಣಿಗೆ ನಡೆಯಿತ್ತು. ಟ್ರಸ್ಟ್‌ನ ಅಧ್ಯಕ್ಷ  ಕೆ.ನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಸರ್ವೋದಯ ಪ್ರಾರ್ಥನೆ ಕು.ಅಕ್ಷತಾಳಿಂದ, ಯು.ರಾಘವೇಂದ್ರ ರಾವ್ ಸ್ವಾಗತಿಸಿದರು, ಎಸ್.ಜಿ. ಕಾಂಚನ್ ವಂದಿಸಿದರು, ಪಾಂಡುರಂಗ ನಿಕ್ಕಂ ನಿರ್ವಹಿಸಿದರು,    
    ವೇದಾಂತ, ವಿಜ್ಞಾನ ಮತ್ತು ಆಧ್ಯಾತ್ಮವು ಜಗತ್ತಿನ ಅದ್ಭುತ ಶಕ್ತಿಗಳು, ವೇದಾಂತ ಮತ್ತು ವಿಜ್ಞಾನವನ್ನು ಸಮತೋಲನಗೊಳಿಸಬೇಕು, ಆಧ್ಯಾತ್ಮವಿಲ್ಲದ ವಿಜ್ಞಾನ ಮುಂದೊಂದು ದಿನ ಸಮಾಜಕ್ಕೆ ಕೆಡುಕನ್ನುಂಟು ಮಾಡುವುದು,  ಎಲ್ಲಾ ಧರ್ಮದವರು ಭೇದಗಳನ್ನು ಬದಿಗಿರಿ ಇಂದು ಸರ್ವ ಧರ್ಮ ಸಮಾವೇಶದಲ್ಲಿ ಪಾಲ್ಗೊಂಡಿರುವುದು  ಹಲವು ವರ್ಷಗಳ ಸಂಕಲ್ಪವೊಂದು ಈಡೇರಿದಂತಾಗಿದೆ.

Leave a Reply

Top