ಕೆಪಿಟಿಸಿಎಲ್ ಮತ್ತು ಎಸ್ಕಾಂ ವಿದ್ಯುತ್ ಗುತ್ತಿಗೆ ನೌಕರರ ರಾಜ್ಯಮಟ್ಟದ ಪ್ರತಿಭಟನಾ ಪ್ರದರ್ಶನ.

ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಲ್ಲಿ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಾವಿರಾರು ಗುತ್ತಿಗೆ ಕಾರ್ಮಿಕರು ಹಲವಾರು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿರುವರು. ಈ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಇಂಧನ ಸಚಿವರು ಕೂಡಲೇ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿ ದಿನಾಂಕ : ೨೩.೦೭.೨೦೧೫ ರಂದು ರಾಜ್ಯಮಟ್ಟದ ಪ್ರತಿಭಟನಾ ಪ್ರದರ್ಶನವನ್ನು ಅಂದು ಬೆಳಿಗ್ಗೆ ೧೧-೩೦ ಕ್ಕೆ ಕಾವೇರಿ ಭವನ ಬೆಂಗಳೂರಿನಲ್ಲಿ ಎಐಯುಟಿಯುಸಿ ಮತ್ತು ಎಐಪಿಎಫ್ ಗೆ ಸೇರ್ಪಡೆಗೊಂಡಿರುವ ಕೆಪಿಟಿಸಿಎಲ್ ವಿದ್ಯುತ್ ವಿತರಣಾ ಗುತ್ತಿಗೆ ಕಾರ್ಮಿಕರ ಸಂಘ ಹಾಗೂ ಕರ್ನಾಟಕ ವಿದ್ಯುತ್ ಸರಬರಾಜು ಕಂಪನಿಗಳ ಗುತ್ತಿಗೆ ನೌಕರರ ಸಂಘಗಳು ಜಂಟಿಯಾಗಿ ಹಮ್ಮಿಕೊಂಡಿವೆ. ಹೊರ ಗುತ್ತಿಗೆ ಮೂಲಕ ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಲ್ಲಿ, ಖಾಯಂ ಹುದ್ದೆಗಳ ಜಾಗದಲ್ಲಿ ಗುತ್ತಿಗೆ ನೌಕರರು ಪುಡಿಗಾಸಿಗೆ ಕೆಲಸ ಮಾಡುತ್ತಿದ್ದು, ಕನಿಷ್ಠ ಸೌಲಭ್ಯಗಳಿಂದ ವಂಚಿತಗೊಂಡಿರುವರು. ಕ್ರೂರ ಗುತ್ತಿಗೆ ಪದ್ಧತಿಯಿಂದ ಆಗುತ್ತಿರುವ ಅನ್ಯಾಯ, ಶೋಷಣೆಗೆ ಒಳಗಾಗಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿರುವರು. ಇದೀಗ ರಾಜ್ಯದಲ್ಲಿ ಕೆಪಿಟಿಸಿಎಲ್‌ನಲ್ಲಿ ೧೩೦೦ ಕಿರಿಯ ಸ್ಟೇಷನ್ ಪರಿಚಾರಕ ಹುದ್ದೆ ಹಾಗೂ ಎಸ್ಕಾಂಗಳಲ್ಲಿ ೫೦೦೦ ಕಿರಿಯ ಮಾರ್ಗದಾಳು ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಈ ನೇಮಕಾತಿಯಲ್ಲಿ ಇದುವರೆಗೂ ಕೆಲಸ ಮಾಡಿದ ಗುತ್ತಿಗೆ ನೌಕರರಿಗೆ ನೇಮಕಾತಿಯಲ್ಲಿ ಆಧ್ಯತೆ ನೀಡದೇ ಅನ್ಯಾಯ ಮಾಡಲಾಗಿದೆ. ಆದ್ದರಿಂದ ಈ ನೌಕರರಿಗೆ ಸೇವಾ ಭದ್ರತೆ ನೀಡುತ್ತಾ ವೇತನ ಹಾಗೂ ಇತರೆ ಸೌಲಭ್ಯಗಳನ್ನು ಉತ್ತಮಪಡಿಸಿ, ನೆಮ್ಮದಿಯ ಜೀವನ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಸಂಘಗಳು ಜಂಟಿಯಾಗಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಪ್ರತಿಭಟನಾ ಪ್ರದರ್ಶನವನ್ನು ಯಶಸ್ವಿಗೊಳಿಸಬೇಕೆಂದು ಎಲ್ಲಾ ವಿದ್ಯುತ್ ನೌಕರರಿಗೆ ಈ ಮೂಲಕ ಕರೆ ನೀಡುತ್ತೇವೆ.
ಬೇಡಿಕೆಗಳು :-
೧.    ಕೆಪಿಟಿಸಿಎಲ್‌ನಲ್ಲಿ ಸುಮಾರು ೧೩೦೦ ಕಿರಿಯ  ಸ್ಟೇಷನ್ ಪರಿಚಾರಕ ಹುದ್ದೆ ಹಾಗೂ ಎಸ್ಕಾಂಗಳಲ್ಲಿ ೫೦೦೦ ಕಿರಿಯ ಮಾರ್ಗದಾಳು ಹುದ್ದೆಗಳ ನೇಮಕಾತಿಯಲ್ಲಿ ಗುತ್ತಿಗೆ ನೌಕರರಿಗೆ ಆದ್ಯತೆ ನೀಡಬೇಕು.
೨.    ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಲ್ಲಿ ಹೊರ ಗುತ್ತಿಗೆಯನ್ನು ರದ್ದುಪಡಿಸಿ, ನೇರ ಗುತ್ತಿಗೆಯಲ್ಲಿ ಆ ನೌಕರರ ಸೇವೆಯನ್ನು ವಿಲೀನಗೊಳಿಸಬೇಕು.
೩.    ವಿದ್ಯುತ್ ಗುತ್ತಿಗೆ ನೌಕರರ ಸೇವೆಯನ್ನು ಖಾಯಂಗೊಳಿಸಬೇಕು. ಅದಕ್ಕಾಗಿ ಸೇವಾ ನಿಯಮಗಳಿಗೆ ಸೂಕ್ತ ತಿದ್ದುಪಡಿ ಮಾಡಬೇಕು. ಅಲ್ಲಿಯವರೆಗೂ;
೪.    ವಿದ್ಯುತ್ ಗುತ್ತಿಗೆ ನೌಕರರಿಗೆ ಜೀವನ ಯೋಗ್ಯ ವೇತನ ಕನಿಷ್ಠ ರೂ.೧೫,೦೦೦/- ನಿಗಧಿಪಡಿಸಬೇಕು.
೫.    ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು.
೬.    ವಿದ್ಯುತ್ ಗುತ್ತಿಗೆ ನೌಕರರಿಗೆ ಬೋನಸ್, ಇ.ಎಸ್.ಐ., ರಜೆ, ಪಿ.ಎಫ್., ರಾತ್ರಿಪಾಳೆಯ ಭತ್ಯೆ ಹಾಗೂ ಇತರೆ ಸೌಲಭ್ಯಗಳನ್ನು ಖಚಿತಪಡಿಸಬೇಕು.
೭.    ವಿದ್ಯುತ್ ಗುತ್ತಿಗೆ ನೌಕರರ ವೇತನವನ್ನು ಕಾಲಕಾಲಕ್ಕೆ ಪರಿಷ್ಕರಿಸಬೇಕು.
೮.    ವಿದ್ಯುತ್ ಗುತ್ತಿಗೆ ನೌಕರರನ್ನು ಸೇವೆಯಿಂದ ವಜಾಗೊಳಿಸಬಾರದು. ಗುತ್ತಿಗೆದಾರರು ಬದಲಾದರೂ ಅವರ ಸೇವೆ ಮುಂದುವರೆಯಬೇಕು.
೯.    ನಿಗಧಿತ ವೇತನಕ್ಕಿಂತ ಕಡಿಮೆ ವೇತನ ನೀಡಿ ಅನ್ಯಾಯ ಮಾಡುವುದನ್ನು ನಿಲ್ಲಿಸಬೇಕು. ನೌಕರರ ಬ್ಯಾಂಕ್ ಖಾತೆಗೆ ವೇತನ ಪಾವತಿಸಬೇಕು.
೧೦.    ನೇಮಕಾತಿ ಮಾಡುವಾಗ  ಗುತ್ತಿಗೆ ನೌಕರರಿಗೆ ಶೇ.೫೦%ರಷ್ಟು ಹುದ್ದೆಗಳನ್ನು ಮೀಸಲಿಟ್ಟು, ಭರ್ತಿ ಮಾಡಿಕೊಳ್ಳಬೇಕು. ಅದಕ್ಕಾಗಿ ಅವರ ಸೇವಾ ಅವಧಿಯನ್ನು ಪರಿಗಣಿಸಬೇಕು. ನೇಮಕಾತಿ ಸಂದರ್ಭದಲ್ಲಿ ವಯೋಮಿತಿ ಹಾಗೂ ಇತರೆ ನಿಬಂಧನೆಗಳನ್ನು ಸಡಿಲಗೊಳಿಸಬೇಕು.
Please follow and like us:
error

Related posts

Leave a Comment