ಶಿಕ್ಷಕರ ವೇತನ:ಅಪಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆ.

 ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ೨ತಿಂಗಳ ವೇತನವಿಲ್ಲದಿರುವ ಸಮಸೆಯನ್ನು ಬಗೆಯರಿಸುವಂತೆ ಒತ್ತಾಯಿಸಿ ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ಅಪಾರ ಜಿಲ್ಲಾಧಿಕಾರಿಗಳಾದ ಸುರೇಶ್ ಹಿಟ್ನಾಳರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
    ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಶಿಕ್ಷಕರುಗಳಿಗೆ ಕಳೇದ ಜನೇವರಿ ಹಾಗೂ ಪೆಬ್ರವರಿ ತಿಂಗಳ ವೇತವಿಲ್ಲದ ಕಾರಣ ಜೀವನ ನಿರ್ವಹಿಸುವುದ ಕಷ್ಟಕರವಾಗಿದೆ.ಪ್ರತಿ ವರ್ಷ ಯಾಕೇ ಇಂತಹ ಸಮಸ್ಯೆಯಾಗುತ್ತಿದೆ.ಸಮಸ್ಯೆಗಳಿಗೆ ಕಾರಣರಾಗುವರ ವಿರುದ್ದ ಕ್ರಮ ಕೈಗೊಂಡು ಶೀಘ್ರವೇ ವೇತನ ಬಿಡುಗಡೆಗೊಳಿಸುವಂತೆ ಮನವಿ ಮಾಡಲಾಯಿತು.
  ಇದಕ್ಕೆ ಸ್ಪಂಧಿಸಿದ ಅಪಾರ ಜಿಲ್ಲಾಧಿಕಾರಿಗಳಾದ ಸುರೇಶ ಹಿಟ್ನಾಳ್ ಮಾತನಾಡಿ,ಶಿಕ್ಷಕರ ವೇತನ ವಿಚಾರ ಈಗ ನನ್ನ ಗಮನಕ್ಕೆ ಬಂದಿದ್ದು ಆದಷ್ಟು ಬೇಗನೆ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿದರು.
  ಈ ಸಂದರ್ಭದಲ್ಲಿ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಮನಿ,ಶಿಕ್ಷಕರಾದ ವಿರುಪಾಕ್ಷಪ್ಪ ಬಾಗೋಡಿ, ವಿರೇಶ ನಿಡಗುಂದಿ,ರಾಮಣ್ಣ ರಕರೆಡ್ಡಿ,ನಾಗಪ್ಪ ನರಿ,ಶ್ರೀನಿವಾಸ್‌ರಾವ್ ಕುಲಕರ್ಣಿ,ಗುರುರಾಜ ಕಟ್ಟ ಮುಂತಾದವರು ಹಾಜರಿದ್ದರು.
Please follow and like us:

Related posts

Leave a Comment