ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಗಣರಾಜ್ಯೋತ್ಸವದ ಆಶಯ: ಜಿ.ಎಸ್. ಗೋನಾಳ

 ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ,ಕೊಪ್ಪಳ.ಇದರಲ್ಲಿ ಅಧ್ಯಕ್ಷರಾದ  ಜಿ.ಎಸ್. ಗೋನಾಳ ಇವರು ಧ್ವಜಾರೋಹಣ ನೇರವೇರಿಸುವದರೊಂದಿಗೆ ೬೬ನೇ ಗಣರಾಜ್ಯೋತ್ಸವ ಆಚರಿಸಲಾಯಿತು.       ಇದೇ ದಿನ ಭಾರತ  ಸಂವಿಧಾನ ಜಾರಿಗೆ ಬಂದ ಶುಭದಿನ . ಈ ದಿನ ಭಾರತದ ಎಲ್ಲ ಪ್ರಜೆಗಳಿಗೂ ಹಕ್ಕು ಮತ್ತು ಕರ್ತವ್ಯಗಳು ಸಮಾನವಾಗಿ ಹಂಚಿಕೆಯಾದ ಶುಭದಿನ.    ಸಹಕಾರಿ ರಂಗವು ಸಂವಿಧಾನತ್ಮಕವಾಗಿ ಬೆಳೆಯಲು ಅನುಕೂಲಕರವಾಯಿತು.  ಸಹಕಾರಿ ಕ್ಷೇತ್ರದಲ್ಲಿ ಪ್ರತಿಯೊಬ್ಬರ ತ್ಯಾಗ ಮನೋಭಾವನೆ ಅತೀ ಮುಖ್ಯವಾದುದು.  ಯಾವರೀತಿ ಭಾರತದ ಸ್ವಾತಂತ್ರ್ಯಕ್ಕಾಗಿ ನಮ್ಮ ಎಲ್ಲ ದೇಶ ಭಕ್ತರು ಸರ್ವ ತ್ಯಾಗಗಳಿಂದ ದೇಶಕ್ಕೆ ಸ್ವತಂತ್ರ ದೊರಕಿಸಿ ಕೊಟ್ಟರೊ, ಅದೇ ರೀತಿ ಸಹಕಾರ ರಂಗದಲ್ಲಿ ತ್ಯಾಗ ಮನೋಭಾವನೆಯಿಂದ ಸಹಕಾರಿಯು ಹೆಮ್ಮರವಾಗಿ ಬೆಳಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.       
ಇದೇ ಸಂದರ್ಭದಲ್ಲಿ ನಿರ್ದೇಶಕರಾದ ಸಂಗಪ್ಪ ವಕ್ಕಳದ,  ಮಾತನಾಡಿ ಸರ್ವರೂ ಸಮಭಾವದಿಂದ ಸಮಪಾಲಿನಿಂದ ಬಾಳಲು ಈ ಗಣರಾಜ್ಯೋತ್ಸವವು ಕಾರಣವಾಯಿತು ಎಂದು ಹೇಳಿದರು.  ಇನ್ನೊಬ್ಬ ನಿರ್ದೇಶಕರಾದ ಚಂದ್ರಕಾಂತ ಸಿಂಗಟಾಲೂರವರು ಮತ್ತು ವೆಂಕನಗೌಡ ಮೇಟಿಯವರು  ಇವರು ಟ್ರಿನಿಟಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳಿಗೆ ನೋಟಬುಕ್ ಮತ್ತು ಪೆನ್ ವಿತರಿಸಿದರು. ನಿರ್ದೇಶಕರಾದ ದೇವಪ್ಪ ಅರಕೇರಿಯವರು, ಬಿ. ಶರಣಪ್ಪ ವಕೀಲರು, ವಿ.ಎಲ್. ಹಿರೇಗೌಡ್ರ, ವಿ.ಜಿ.ಯತ್ನಳ್ಳಿ, ವಿಜಯಲಕ್ಷ್ಮೀ ಶರಣಗೌಡ್ರ ಬದರಿನಾಥ ಹೊಂಬಾಳಿ, ಬದರಿನಾಥ ಪುರೋಹಿv,ಜಾಕೀರಹುಸೇನ ಕಿಲ್ಲೇದ ಹಾಜರಿದ್ದರು.
ಈ ಸಮಾರಂಭಕ್ಕೆ   ಕಾರ್ಯದರ್ಶಿಯವರಾದ ಬಸವರಾಜ ರಾಮದುರ್ಗ,ಸಹಾಯಕ ವಂಕರಡ್ಡಿ ಕೆಂಚರಡ್ಡಿ, ಪಿಗ್ಮಿ ಏಜಂಟರಾದ ಯಂಕರಡ್ಡಿ,ದೇವರಡ್ಡಿ. ವೀರೇಶ ಅಳವಂಡಿ, ಬಸವರಾಜ ಅಂಗಡಿ(ತಳಕಲ) ಇವರು ಉಪಸ್ಥಿತರಿದ್ದರು. ಹಿರಿಯ ಸಹಕಾರಿಗಳಾದ ಸಂಗಮೇಶ ಡಂಬಳರು ಪ್ರಾಸ್ತಾವಿಕವಾಗಿ ಮಾತನಾಡಿದರು ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು.  ಕಾರ್ಯಕ್ರಮ ನಿರೂಪಣೆಯನ್ನು ಕಾರ್ಯದರ್ಶಿ ಬಸವರಾಜ ರಾಮದುರ್ಗ ಇವರು ನಡೆಸಿಕೊಟ್ಟರು ಎಂದು ಅಧ್ಯಕ್ಷರಾದ ಜಿ.ಎಸ್.ಗೋನಾಳರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
Please follow and like us:

Related posts

Leave a Comment