ಲಯನ್ಸ್ ಕ್ಲಬ್ ವತಿಯಿಂದ ಮದರ್ ತೆರೆಸಾ ಹುಟ್ಟುಹಬ್ಬ ಆಚರಣೆ

 ಕೊಪ್ಪಳ ಲಯನ್ಸ್ ಕ್ಲಬ್ ವತಿಯಿಂದ ಮದರ್ ತೆರೆಸಾ ಹುಟ್ಟುಹಬ್ಬ ಆಚರಣೆಯನ್ನು ಕುಷ್ಟಗಿ ರಸ್ತೆಯ ಸಮೂಹ ಸಾಮರ್ಥ್ಯ ಸಂಸ್ಥೆಯಲ್ಲಿ ವಿಕಲಚೇತನ ಮಕ್ಕಳ ಜೊತೆ ಆಚರಿಸಲಾಯಿತು.
ವಿಕಲಚೇತನ ಮಕ್ಕಳೊಂದಿಗೆ ಕೇಕ್ ಕತ್ತರಿಸಿ, ಹಂಚಿ ಮದರ್ ತೆರೆಸಾ ಹುಟ್ಟುಹಬ್ಬಕ್ಕೆ ಚಾಲನೆ ನೀಡಲಾಯಿತು. ನಂತರ ಎಲ್ಲ ವಿಕಲ ಚೇತನ ಮಕ್ಕಳಿಗೆ ಹಣ್ಣು, ಹಂಪಲು, ಬ್ರೆಡ್-ಬಿಸ್ಕಿಟ್, ಸಿಹಿ ವಿತರಿಸಲಾಯಿತು. ಮದರ್ ತೆರೆಸಾ ಜೀವನ, ಸಂದೇಶ ಮತ್ತು ನಿಸ್ವಾರ್ಥ ಸೇವೆ ಕುರಿತಾದ ವಿಶೇಷ ವಿಡಿಯೋ ಪ್ರಾತ್ಯಕ್ಷಿಕೆಯನ್ನು ಲಯನ್ಸ್ ಕ್ಲಬ್ ಕಾರ್ಯದರ್ಶಿ ಲಯನ್ ಲಲಿತ್ ಜೈನ್ ಪ್ರದರ್ಶಿಸಿದರು.
ಮದರ್ ತೆರೆಸಾ ಹುಟ್ಟುಹಬ್ಬವನ್ನು ಆಚರಿಸುವ ಲಯನ್ಸ್ ಕ್ಲಬ್‌ನ ಆಹ್ವಾನವನ್ನು ಸ್ವಾಗತಿಸಿ, ತಮ್ಮ ಸಂಸ್ಥೆಯ ಎಲ್ಲ ಕಾರ್ಯ, ಯೋಜನೆಗಳನ್ನು ಆರಂಭದಲ್ಲಿ ಸಮೂಹ ಸಾಮರ್ಥ್ಯ ಸಂಸ್ಥೆಯ ನಿರ್ದೇಶಕರಾದ ಹಂಪಣ್ಣ ಬಣಕಾರ ಮತ್ತು ಎಚ್.ಎನ್. ಬಸಪ್ಪ ಸಭೆಗೆ ತಿಳಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಶ್ರೀನಿವಾಸ ಗುಪ್ತಾ ಮಾತನಾಡಿ ಸಮೂಹ ಸಾಮರ್ಥ್ಯ ಸಂಸ್ಥೆಯ ಕಾರ್ಯಗಳನ್ನು ಶ್ಲಾಘಿಸಿದರು. ಲಯನ್ಸ್ ಕ್ಲಬ್ ಒಂದು ನಿಸ್ವಾರ್ಥ ಸೇವೆಯಾಗಿದ್ದು, ಸಮೂಹ ಸಾಮಥ್ಯೃ ಸಂಸ್ಥೆಯೂ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ. ನಿಸ್ವಾರ್ಥದಿಂದ ಕೆಲಸ ಮಾಡಿ, ಬಡವರ, ದೀನರ ಸೇವೆ ಮಾಡಿದ ಮದರ್ ತೆರೆಸಾರರ ಜೀವನ ನಮಗೆಲ್ಲ ಆದರ್ಶಪ್ರಾಯವಾಗಿದ್ದು, ದೈಹಿಕ ನ್ಯೂನ್ಯತೆಗಳು, ಅಂಗವಿಕಲತೆಯನ್ನು ಮೀರಿ ಸಾಧನೆ ಮಾಡುವ ನಿಟ್ಟಿನಲ್ಲಿ ಸಮೂಹ ಸಾಮರ್ಥ್ಯ ಸಂಸ್ಥೆಯು ವಿಕಲಚೇತನರ ಪಾಲಿಗೆ ಆಶಾಕಿರಣವಾಗಿದೆ ಎಂದು ನುಡಿದರು.
ಲಯನ್ ಪ್ರೊ. ಎಂ.ಎಸ್. ದಾದಮಿ ಸಮೂಹ ಸಾಮರ್ಥ್ಯ ಸಂಸ್ಥೆಯ ಕಾರ್ಯಗಳನ್ನು ಶ್ಲಾಘಿಸಿದರು ಮತ್ತು ಇಂತಹ ಸಂಸ್ಥೆಯ ಕುರಿತಾಗಿ ಜಾಗೃತಿಯನ್ನು ಮೂಡಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಲಯನ್ ಬಸವರಾಜ್ ಬಳ್ಳೊಳ್ಳಿ, ಲಯನ್ ಪ್ರಭು ಹೆಬ್ಬಾಳ, ಲಯನ್ ಪರಮೇಶಪ್ಪ ಕೊಪ್ಪಳ, ಲಯನ್ ಮಹೇಶ ಮಿಟ್ಟಲಕೋಡ, ಲಯನ್ ನಂದಕಿಶೋರ ಸುರಾಣಾ, ಲಯನ್ ಸುರೇಶ ಸಂಚೇತಿ, ಲಯನ್ ಅರವಿಂದ ಅಗಡಿ, ಲಯನ್ ಚಂದ್ರಕಾಂತ ತಾಲೆಡಾ, ಲಯನ್ ವೀರೇಶ ಹತ್ತಿ, ಲಯನ್ ಗುರುರಾಜ ಹಲಗೇರಿ, ಸಮೂಹ ಸಾಮರ್ಥ್ಯ ಸಂಸ್ಥೆಯ ಪ್ರಭಾಕರ, ಅಶೋಕ ಹಡಪದ, ಫಲಾನುಭವಿ ಮಕ್ಕಳು, ಪಾಲಕರು ಮತ್ತು ಸಂಸ್ಥೆಯ ನೌಕರರು ಉಪಸ್ಥಿತರಿದ್ದರು.
ಲಯನ್ ವೆಂಕಟೇಶ ಶ್ಯಾನ್‌ಭಾಗ್ ಕಾರ್ಯಕ್ರಮ ನಿರೂಪಿಸಿದರು, ಲಯನ್ಸ್ ಕ್ಲಬ್ ಕಾರ್ಯದರ್ಶಿ ಲಯನ್ ಲಲಿತ್ ಜೈನ್ ವಂದನಾರ್ಪಣೆ ಮಾಡಿದರು .
Please follow and like us:
error