ವೀರಣ್ಣ ಮಡಿವಾಳರ,ಸಂಗಮೇಶ್ ಮೆಣಸಿನಕಾಯಿಗೆ ಅರಳು ಸಾಹಿತ್ಯ ಪ್ರಶಸ್ತಿ

ಪತ್ರಕರ್ತ ಮಿತ್ರ, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಬೆಳಗಾವಿ ಹಿರಿಯ ವರದಿಗಾರ ಸಂಗಮೇಶ್ಮೆಣಸಿನಕಾಯಿ ಅವರಿಗೆ ೨೦೧೧ನೇ ಸಾಲಿನ ಅರಳು ಸಾಹಿತ್ಯ ಪ್ರಶಸ್ತಿ ಲಭಿಸಿದೆ.
ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರು ಮಹಾನಗರ ಸಂಸ್ಥೆ ನೀಡುವ ಪ್ರಶಸ್ತಿಯಿದು. ಸಂಗಮೇಶ್ ಅವರಎಲ್ಲಿ ಜಾರಿತೋ ಮನವು ಎನ್ನುವ ಕಾದಂಬರಿಗೆ ಈ ಪ್ರಶಸ್ತಿ ಬಂದಿದೆ.  ವೀರಣ್ಣ ಮಡಿವಾಳರಿಗೆ ಕಾವ್ಯಕ್ಕೆ ಪ್ರಶಸ್ತಿ ದೊರೆತಿದೆ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನವೆಂಬರ್ ೨೨ ರ ಮಂಗಳವಾರ  ಬೆಳಗ್ಗೆ ೧೦ಕ್ಕೆ ನಡೆಯುವ ಸಮಾರಂಭದಲ್ಲಿ ಸಂಗಮೇಶ್ ಪ್ರಶಸ್ತಿ ಸ್ವೀಕರಿಸುವರು. ಇದೇ ವೇಳೆ ಹಿರಿಯ ಸಂಶೋಧಕ ಎಂ.ಎಂ.ಕಲ್ಬುರ್ಗಿ ಅವರಿಗೂ ನೃಪತುಂಗ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

Leave a Reply