fbpx

ಶಿವರಾಜ ತಂಗಡಗಿ ಮೇಲೆ ಅಪಪ್ರಚಾರ ನಿಲ್ಲಿಸಲಿ_ಭೋವಿ

ಕೊಪ್ಪಳ, ಜು.೧೯. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಿರುದ್ಧ ಅನಾವಶ್ಯಕವಾಗಿ ಅಪಪ್ರಚಾರ ಮಾಡುತ್ತಿದ್ದು ಅದನ್ನು ನಿಲ್ಲಿಸಬೇಕು ಹಾಗೂ ಸಂಪುಟದಿಂದ ಕೈಬಿಡಬಾರದು ಎಂದು ಕೊಪ್ಪಳ ಜಿಲ್ಲಾ ಶ್ರೀ ಸಿದ್ಧರಾಮೇಶ್ವರ ಭೋವಿ ವಡ್ಡರ ಕ್ಷೇಮಾಇಭಿವೃದ್ಧಿ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಸಾಹಿತ್ಯ ಭವನದ ಮುಂದೆ ಸೇರಿದ ನೂರಾರು ಜನರು ಅಲ್ಲಿಂದ ಜಿಲ್ಲಾಧಿಕಾರಿ ಕಛೇರಿವರೆಗೆ ಪ್ರತಿಭಟನೆ ಮೂಲಕ ತೆರಳಿ ಪ್ರಭಾರ ಜಿಲ್ಲಾಧಿಕಾರಿ ಗೋವಿಂದರೆಡ್ಡಿಯವರಿಗೆ ಮನವಿ ಸಲ್ಲಿಸಿತು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಿರುದ್ಧ ಅನಾವಶ್ಯಕವಾಗಿ ಗೂಬೆ ಕೂರಿಸುತ್ತಿರುವದರ ವಿರುದ್ಧ ಹಾಗೂ ಅನಾವಶ್ಯಕವಾಗಿ ಒಬ್ಬ ದಲಿತ ನಾಯಕನ ಕುರಿತು ಅಪಪ್ರಚಾರ ಮಾಡಿ ಪರಿಶ್ರಮದಿಂದ ಬಂದಿರುವ ಅಧಿಕಾ

ರವನ್ನು ಕಿತ್ತುಕೊಳ್ಳುವ ಕುತಂತ್ರಕ್ಕೆ ಕಡಿವಾಣ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒತ್ತಾಯಿಸಲಾಗಿದೆ.

ರಾಜ್ಯದಲ್ಲಿ ಭೋವಿ ಸಮುದಾಯ ದೊಡ್ಡ ಸಂಖ್ಯೆಯಲ್ಲಿದ್ದು, ಅವರ ಧ್ವನಿಯಾಗಿ ಇರುವ ಏಕೈಕ ಶಾಸಕರಿಗೆ ಸಚಿವ ಸ್ಥಾನ ನೀಡಿರುವದು, ಸಿದ್ದರಾಮಯ್ಯನವರ ಸಾಮಾಜಿಕ ಸಮತೋಲನ ಹಾಗೂ ನ್ಯಾಯವಾಗಿದೆ, ಆದರೆ ಅದನ್ನು ಸಹಿಸದ ಕೆಲವರು ಸುಖಾಸುಮ್ಮನೆ ನಾಗರಾಜ ತಂಗಡಗಿಯವರ ಭೂ ವಿವಾದದಲ್ಲಿ ಸಚಿವರ ಹೆಸರನ್ನು ಹಾಳು ಮಾಡುವ ಷಡ್ಯಂತ್ರ ಹೆಣೆಯಲಾಗಿರುವದನ್ನು ಸಮುದಾಯ ತೀವ್ರವಾಗಿ ಖಂಡಿಸುತ್ತದೆ ಎಂದು ಭೋವಿ ಸಮಾಜದ ಜಿಲ್ಲಾ ಕಾರ್ಯದರ್ಶಿ ಬಸವರಾಜ ಭೋವಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.
ಅಲ್ಲದೇ ನಾಗರಾಜ ತಂಗಡಗಿಯವರ ಭೂ ವಿವಾದ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯದ ತೀರ್ಪಿಗೆ ಎಲ್ಲರೂ ಬದ್ಧರಾಗಿರುವದು ಸರಿ, ಆದರೆ ಅದಕ್ಕೂ ಮುಂಚೆ ಕೆಲವು ಸಂಘಟನೆಗಳು ವಜಾ ಮಾಡಲು, ರಾಜಿನಾಮೆ ಪಡೆಯಲಿ ಎಂದು ಪ್ರತಿಭಟನೆ ಮಾಡುತ್ತಿರುವದು ಶೋಚನೀಯ ಸಂಗತಿಯಾಗಿದೆ. ಹಿಂದಿನ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ವರ್ಗಾವಣೆ ಸಹಜ ಪ್ರಕ್ರಿಯೆಯಾಗಿದೆ, ಅದನ್ನು ರಾಜಕೀಯ ಉದ್ದೇಶಕ್ಕೆ ದುರುಪಯೋಗ ಪಡಿಸಿಕೊಳ್ಳುವದನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಸತ್ಯಪ್ಪ ಭೋವಿ, ಭೀಮಪ್ಪ ಪಾಟೀಲ, ಜಿಲ್ಲಾ ಸಂಚಾಲಕ ನಿಂಗಪ್ಪ ಸುಣಗಾರ, ಬಸವರಾಜ ಭೋವಿ, ಮಾಜಿ ನಗರಸಭೆ ಸದಸ್ಯ ರಾಮಣ್ಣ, ನ್ಯಾಯವಾದಿ ಬಸವರಾಜ, ಎಂ.ಆರ್. ವೆಂಕಟೇಶ ಮುನಿರಾಬಾದ್, ವೆಂಕಟೇಶ ವಡ್ಡರ, ವೆಂಕಟೇಶ ಕಂಪಸಾಗರ, ರಾಮಣ್ಣ ಹುಣಸಿಹಾಳ, ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಗಾಳೆಪ್ಪ ಗಂಗಾವತಿ, ಲಕ್ಷ್ಮಣ ಯಲಬುರ್ತಿ ಕುಷ್ಟಗಿ, ನಾಗಪ್ಪ ಚಿಕ್ಕೊಪ್ಪ ಯಲಬುರ್ಗಾ, ಸುಂಕಪ್ಪ ಭೋವಿ, ಪರಶುರಾಮ ನಾಗರಾಳ, ಸುಂಕಪ್ಪ ಮಾಲಗಿತ್ತಿ, ವಿ. ಹನುಮಂತಪ್ಪ, ನಿಂಗಪ್ಪ ಸುಣಗಾರ ಅನೇಕರು ನೇತೃತ್ವವಹಿಸಿದ್ದರು.
Please follow and like us:
error

Leave a Reply

error: Content is protected !!