You are here
Home > Koppal News > ಕುಲಾಂತರಿ ತಳಿಗಳು – ಸರಕಾರದ ನೀತಿ

ಕುಲಾಂತರಿ ತಳಿಗಳು – ಸರಕಾರದ ನೀತಿ

ಕೈಗನ್ನಡಿ ಪತ್ರಿಕಾ ಬಳಗ ಹಾಗೂ ಕನ್ನಡನೆಟ್.ಕಾಂ ಇ-ದಿನಪತ್ರಿಕಾಬಳಗದ ಸಂಯೋಜನೆಯಲ್ಲಿ ” ಕುಲಾಂತರಿ ತಳಿಗಳು – ಸರಕಾರದ ನೀತಿ ” ವಿಚಾರ ಸಂಕಿರಣ ಕಾರ್ಯಕ್ರಮ ಅಧ್ಯಕ್ಷತೆ : ಶ್ರೀ ಕರಡಿ ಸಂಗಣ್ಣ ಜನಪ್ರಿಯ ಶಾಸಕರು,ಕೊಪ್ಪಳ ಮುಖ್ಯ ಅತಿಥಿಗಳು ಹಾಗೂ ವಿಷಯ ಮಂಡನೆ : ವಿ.ಗಾಯತ್ರಿ ಸಂಪಾದಕರು “ಸಹಜ ಸಾಗುವಳಿ” ಪತ್ರಿಕೆ ಬೆಂಗಳೂರು ಸ್ಥಳ : ತಾಲೂಕ ಪಂಚಾಯತ ಸಭಾ ಭವನ,ಕೊಪ್ಪಳ ದಿನಾಂಕ : ೧೧-೪-೨೦೧೦ ರವಿವಾರ ಬೆಳಿಗ್ಗೆ ೧೦-೩೦ ಗಂಟೆಗೆ ಮಾನ್ಯರೇ, ಭಾರತದ ಕೃಷಿ ಪರಂಪರೆಗೆ ಸಾವಿರಾರು ವರ್‍ಷಗಳ ಇತಿಹಾಸವಿದೆ. ಈ ಪರಂಪರೆಯ ಮೂಲಕ ನಮ್ಮ ಜನಪದರು ಅನಕ್ಷರಸ್ಥರಾದ ರೈತಾಪಿಗಳು ಪ್ರಕೃತಿಯ ಎಲ್ಲವನ್ನೂ ಬೆರಗುಗಣ್ಣಿನಿಂದ ನೋಡುತ್ತಾ , ಎಲ್ಲಕ್ಕೂ ದೈವಿಕಲ್ಪನೆಯನ್ನು ಕೊಟ್ಟು ತಮ್ಮ ಬದುಕಿಗೆ ಒಗ್ಗಿಸಿಕೊಂಡವರು. ಪ್ರಕೃತಿಯ ಜೀವಜಲ ನೀರನ್ನು ಶಿವನ ಜಡೆಯಲ್ಲಿ ಪ್ರತಿಷ್ಠಾಪಿಸಿ ಗಂಗೆಯೆಂದು ಕರೆದರು. ಅದೇ ನೀರು ಜಡೆಯಿಂದ ಧುಮುಕಿದಾಗ ಮಳೆರಾಯ ಎಂದು ಸಂಭೋಧಿಸಿ ಪುರಷನನ್ನಾಗಿಸಿದರು. ಮಳೆ – ಇಳೆಯನ್ನು ಸೃಷ್ಟಿಸಿದಾಕ್ಷಣ ಗಂಗೆ,ತುಂಗೆ, ಕಾವೇರಿ ಎಂದು ಸ್ತ್ರೀ ರೂಪದಲ್ಲಿ ಆರಾಧಿಸಿದರು. ಪ್ರಕೃತಿಯನ್ನು ಜೀವಜಲವನ್ನು ಅರ್ಥೈಸಿಕೊಂಡು ತಮ್ಮ ಬದುಕನ್ನು ರೂಪಿಸಿಕೊಂಡ ರೈತಾಪಿ ವರ್ಗಗಳ ತಲೆಯ ಮೇಲೆ ಕುಲಾಂತರಿ ತಳಿಗಳೆಂಬ ತೂಗ ಗತ್ತಿ ನೇತಾಡುತ್ತಿದೆ. ಆ ಬಗ್ಗೆ ಮುಕ್ತವಾಗಿ ಮಾತನಾಡೋಣ ಬನ್ನಿ..

Leave a Reply

Top