ಮೇ.೦೬ ರಂದು ನೂತನ ದೇವಾಲಯದ ಉದ್ಘಾಟನೆ ಹಾಗೂ ಶ್ರೀ ಕಾಳಿಕಾದೇವಿ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ

 ತಾಲೂಕಿನ ಭಾಗ್ಯನಗರದ ಕದಂಬ ನಗರದ ೭ನೇ ವಾರ್ಡ್‌ನಲ್ಲಿ ವಿಶ್ವಕರ್ಮ ಸೇವಾ ಸಮಿತಿಯಿಂದ ನೂತನ ದೇವಾಲಯದ ಉದ್ಘಾಟನೆ ಹಾಗೂ ಶ್ರೀ ಕಾಳಿಕಾದೇವಿ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಮೇ.೦೬ ರಂದು ಬೆಳಿಗ್ಗೆ ೬.೩೪ ರಿಂದ ೮.೨೪ ರವರೆಗೆ ಜರುಗಲಿದೆ. 
ಶ್ರೀ ಕಾಳಿಕಾದೇವಿ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಮೇ.೦೪ ರಂದು ಶ್ರೀ ಕಾಳಿಕಾದೇವಿ ಮೂರ್ತಿ ಮೆರವಣಿಗೆ ಮತ್ತು ಆವಾಹಿತ ದೇವತಾ ಸ್ಥಾಪನಾ, ಪೂಜನ, ಮೇ.೦೫ ರಂದು ಗರ್ಭಗುಡಿಯ ವಾಸ್ತು ಶಾಂತಿ ಸರ್ಪಿಕರಣ, ಮೇ.೦೬ ರಂದು ಪ್ರತಿಷ್ಠಾ ಹೋಮ ಪೂರ್ಣಾಹುತಿ, ಮಹಾಮಂಗಳಾರತಿ, ಬಿಂಬದರ್ಶನ, ಗೋದರ್ಶನ, ಕದಳಿಖೇದನ, ಬಲಿಹರಣ, ಮಹಾಪ್ರಸಾದ  ಕಾರ್ಯಕ್ರಮಗಳು ಜರುಗಲಿವೆ.  
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೊಪ್ಪಳ ಶ್ರೀ ಸಿರಸಪ್ಪಯ್ಯ ಸ್ವಾಮಿಗಳು, ಮುದ್ದಾಬಳ್ಳಿಯ ಗುರುನಾಥ ಸ್ವಾಮಿಗಳು, ಗಿಣಿಗೇರಿಯ ನರಸಿಂಹಸ್ವಾಮಿ ದಿವಾಕರ ಸ್ವಾಮಿಗಳು, ಲೇಬಗೇರಿಯ ನಾಗಮೂರ್ತೆಂದ್ರ ಸ್ವಾಮಿಗಳು, ಕಾತರಕಿ-ಗುಡ್ಲಾನೂರಿನ ವಿರುಪಾಕ್ಷಯ್ಯ ಸ್ವಾಮಿಗಳು ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಕಾಳಿಕಾ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ವಿಶ್ವಕರ್ಮ ಸೇವಾ ಸಮಿತಿಯ ಅಧ್ಯಕ್ಷರಾದ ವೀರಪ್ಪ ಅಕ್ಕಸಾಲಿಗರ, ಕಾರ್ಯದರ್ಶಿ ವೀರೇಶ ಪತ್ತಾರ ಹಾಗೂ ಸರ್ವ ಸದಸ್ಯರು   ತಿಳಿಸಿದ್ದಾರೆ. 

Leave a Reply