ನ.೨೩ ರಿಂದ ಕೊಪ್ಪಳದಲ್ಲಿ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ

  ಜಿಲ್ಲಾಡಳಿತ, ಜಿ.ಪಂ., ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ನ.೨೩ ರಿಂದ ಸರಕಾರಿ ನೌಕರರ ಕ್ರೀಡಾಕೂಟಗಳು ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿವೆ ಎಂದು ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮಣ್ಣನವರ ತಿಳಿಸಿದ್ದಾರೆ. 
ಜಿಲ್ಲೆಯ ನಾಲ್ಕು ತಾಲೂಕುಗಳ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ಕ್ರೀಡಾಪಟುಗಳು ಹಾಗೂ ಸಂಗೀತ, ನೃತ್ಯ ಕಲಾವಿದರು ಕ್ರೀಡಾಕೂಟದಲ್ಲಿ ಆಸಕ್ತಿಯಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪರಿಚಯಿಸಿಕೊಳ್ಳಬಹುದಾಗಿದೆ. ಅಲ್ಲದೇ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡು ಜಿಲ್ಲೆಯ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಬೆಳಗಿಸಿ ಜಿಲ್ಲೆಗೆ ಕೀರ್ತಿ ತರಬೇಕೆಂದು ಅವರು ತಿಳಿಸಿದ್ದಾರೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ನೌಕರ ಕ್ರೀಡಾಪಟುಗಳು ಹಾಗೂ ಸಂಗೀತ ನೃತ್ಯ ಸ್ಪರ್ಧಿಗಳು, ಗುಂಪು ಆಟಗಳ ಸ್ಪರ್ಧಿಗಳು ತಮ್ಮ ತಂಡವನ್ನು ನ.೨೦ ರೊಳಗಾಗಿ ತಮ್ಮ ಹೆಸರನ್ನು ತಮ್ಮ ತಾಲೂಕು ಘಟಕದ ಅಧ್ಯಕ್ಷರ ಮುಖಾಂತರ ಕೊಪ್ಪಳ ಜಿಲ್ಲೆಯ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಲ್ಲಿ ಹೆಸರನ್ನು ನೊಂದಾಯಿಸಬಹುದಾಗಿದೆ. ಅಥವಾ ಹೆಚ್ಚಿನ ಮಾಹಿತಿಗಾಗಿ ಶಿವಪ್ಪ ಜೋಗಿ-೯೯೧೬೩೩೨೩೬೫, ಬಸವರಾಜ ಪಲ್ಲೇದ್ -೯೯೬೪೪೬೮೦೮ ಹಾಗೂ ಎನ್.ಎಸ್.ಪಾಟೀಲ್-೯೯೮೦೮೫೨೭೩೫ ಇವರನ್ನು ಸಂಪರ್ಕಿಸಬಹುದಾಗಿದೆ. 
೪೫ ವರ್ಷದೊಳಗಿನ ಪುರುಷರಿಗೆ ಕ್ರೀಡಾ ಸ್ಪರ್ಧೆಗಳು : ಅಥ್ಲೆಟಿಕ್ಸ್ – ೧೦೦ ಮೀ, ೨೦೦ ಮೀ, ೪೦೦ ಮೀ, ೧೫೦೦, ಓಟ, ಲಾಂಗ ಜಂಪ್, ಹೈಜಂಪ್, ಶಾಟ್‌ಪುಟ್, ತಟ್ಟೆ ಎಸೆತ, ಜಾವಲಿನ್ ಎಸೆತ, ೪*೧೦೦ ಮೀ. ರಿಲೇ, ಕುಸ್ತಿ ವೇಟ್ ಲಿಫ್ಟಿಂಗ್, ಪವರ ಲಿಫ್ಟಿಂಗ್, ಗುಂಡು ಎಸೆತ, ಉತ್ತಮ ದೇಹದಾರ್ಢ್ಯ ಸ್ಪರ್ಧೆ ಜರುಗಲಿವೆ. ಗುಂಪು ಆಟಗಳು – ಬಾಡ್ಮಿಂಟನ್, ಟೇಬಲ್ ಟೆನಿಸ್, ವಾಲಿಬಾಲ್, ಕಬಡ್ಡಿ, ಶೆಟಲ್ ಬ್ಯಾಡ್ಮಿಂಟನ್, ಕ್ರಿಕೆಟ್, ಚೆಸ್, ಕೇರಂ. ೪೫ ವರ್ಷ ಮೇಲ್ಪಟ್ಟ ಪುರುಷರಿಗೆ : ಅಥ್ಲೆಟಿಕ್ಸ್ – ೧೦೦ ಮೀ, ೨೦೦ ಮೀ, ೪೦೦ ಮೀ, ೮೦೦ ಮೀ. ಓಟ, ತಟ್ಟೆ ಎಸೆತ, ಗುಂಡು ಎಸೆತ. ಗುಂಪು ಆಟಗಳು – ಶೆಟಲ್ ಬಾಡ್ಮಿಂಟನ್, ಟೇಬಲ್ ಟೆನಿಸ್, ಟೆನಿಸ್.
 ೪೫ ವರ್ಷದೊಳಗಿನ ಮಹಿಳೆಯರಿಗೆ ಕ್ರೀಡಾ ಸ್ಪರ್ಧೆಗಳು : ಅಥ್ಲೆಟಿಕ್ಸ್ – ೧೦೦ ಮೀ, ೨೦೦ ಮೀ, ೮೦೦ ಮೀ. ಓಟ, ಲಾಂಗ ಜಂಪ್, ಹೈಜಂಪ್, ಶಾಟ್‌ಪುಟ್, ತಟ್ಟೆ ಎಸೆತ, ಜಾವಲಿನ್ ಎಸೆತ, ೪*೧೦೦ ಮೀ. ರಿಲೇ, ೪*೪೦೦ ಮೀ. ರಿಲೇ.
ಗುಂಪು ಆಟಗಳು – ಟೇಬಲ್ ಟೆನಿಸ್ (ಸಿಂಗಲ್ ಮತ್ತು ಡಬಲ್ಸ್), ಶೆಟಲ್ ಬ್ಯಾಡ್ಮಿಂಟನ್ (ಸಿಂಗಲ್ ಮತ್ತು ಡಬಲ್ಸ್), ಕೇರಂ, ಟೆನ್ನಿಕ್ವಾಯಿಟ್ (ಸಿಂಗಲ್ಸ್ ಮತ್ತು ಡಬಲ್ಸ್) ಬಾಲ್ ಬ್ಯಾಡ್‌ಮಿಂಟನ್. ೪೫ ವರ್ಷ ಮೇಲ್ಪಟ್ಟ ಮಹಿಳೆಯರಿಗೆ : ಅಥ್ಲೆಟಿಕ್ಸ್ – ೧೦೦ ಮೀ, ೪೦೦ ಮೀ, ೮೦೦ ಮೀ. ಓಟ, ತಟ್ಟೆ ಎಸೆತ,ಶಾಟ್‌ಪುಟ್  ಗುಂಪು ಆಟಗಳು – ಶೆಟಲ್ ಬಾಡ್ಮಿಂಟನ್, ಕೇರಂ, ಟೆನ್ನಿಕ್ವಾಯಿಟ್ (ಸಿಂಗಲ್ಸ್).
ಸಾಂಸ್ಕೃತಿಕ ಸ್ಪರ್ಧೆಗಳು : ಹಿಂದುಸ್ಥಾನಿ ಸಂಗೀತ : ಮೌಖಿಕ ಶಾಸ್ತ್ರೀಯ ಅವಧಿ ೧೦ ನಿಮಿಷ, ಕರ್ನಾಟಕ ಸಂಗೀತ : ಶಾಸ್ತ್ರೀಯ ಸಂಗೀತ, ಅವಧಿ ೧೦ ನಿಮಿಷ, ನೃತ್ಯ ಶಾಸ್ತ್ರೀಯ, ಜಾನಪದ, ಕಥಕ್, ಭರತನಾಟ್ಯ, ಮಣಿಪುರಿ : ಅವಧಿ ೧೦ ನಿಮಿಷ, ವಾದ್ಯ ಸಂಗೀತ : ಸ್ಟ್ರಿಂಗ್, ವಾದ್ಯಗಳು-ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ ವಿಂಡ್ ವಾದ್ಯಗಳು : ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ, ಹಿಂದುಸ್ಥಾನಿ ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ ಪರಕೇಶನ್ ವಾದ್ಯಗಳು : ಜನರಲ್ ಲಘು ಶಾಸ್ತ್ರೀಯ (೫ ನಿಮಿಷಗಳು ಮಾತ್ರ), ಜಾನಪದ ಗೀತೆ, ಕರಕುಶಲ ವಸ್ತು ಪ್ರದರ್ಶನ, ಕಿರು ನಾಟಕ-೪೫ ನಿಮಿಷಗಳು.
ನಿಯಮಗಳು : ಸ್ಪರ್ಧಾಳುಗಳು ತಮ್ಮ ಇಲಾಖೆಯಿಂದ ಜನ್ಮ ದಿನಾಂಕದೊಂದಿಗೆ ತಮ್ಮ ಗುರುತಿನ ಪತ್ರ ತರುವುದು, ಕ್ರೀಡಾಪಟುಗಳು ನಿಯಮಗಳಿಗೆ ಬದ್ಧರಾಗಿರಬೇಕು, ರಾಜ್ಯ ಮಟ್ಟದ ನೌಕರರ ಕ್ರೀಡಾಕೂಟವು ಡಿ.೨೮, ೨೯, ೩೦ ರಂದು ಬೆಳಗಾವಿಯಲ್ಲಿ ನಡೆಯಲಿದ್ದು, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು, ಗುಂಪು ಆಟಗಳಲ್ಲಿ ಪ್ರಥಮ ಸ್ಥಾನ ಪಡೆದವರು ಮಾತ್ರ ಭಾಗವಹಿಸಲು ಅರ್ಹರಿರುತ್ತಾರೆ. ಕ್ರೀಡಾಕೂಟದಲ್ಲಿ ಭಾವಹಿಸುವ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಸೌಲಭ್ಯವಿದ್ದು, ನೌಕರರು ಕ್ರೀಡಾಕೂಟವನ್ನು ಯಶಸ್ವಿಗೊಳಿಸುವಂತೆ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ್  ಮನವಿ ಮಾಡಿದ್ದಾರೆ.
Please follow and like us:
error