ನುಡಿದಂತೆ ನಡಿಯುವೆ : ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ ೧೫ : ಕ್ಷೇತ್ರದ ಗಿಣಿಗೇರಾ ಗ್ರಾಮದಲ್ಲಿ ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸನ್ಮಾನವು ನನ್ನ ನೈತಿಕ ಹೊಣೆಯನ್ನು ಹೆಚ್ಚಿಸಿದ್ದು ಕಾಂಗ್ರೆಸ ಪಕ್ಷದ ಚುನಾವಣ ಪ್ರಣಾಳಿಕೆಯ ತತ್ವದ ಅಡಿಯಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಕೊಪ್ಪಳ ಕ್ಷೇತ್ರದ ಎಲ್ಲಾ ಗ್ರಾಮಗಳ ಸರ್ವಾಂಗಿಣ ಅಭಿವೃದ್ಧಿಯೆ ಗುರಿಯಾಗಿದ್ದು ಗ್ರಾಮಗಳ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಜನ ಸಾಮಾನ್ಯರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುವೆನು. ಗಿಣಿಗೇರಾ ಗ್ರಾಮವು ಕೈಗಾರಿಕೆಗಳಿಂದ ಶೀಗ್ರ ಅಭಿವೃದ್ಧಿಹೊಂದುತ್ತಿದ್ದು ಈ ಗ್ರಾಮಕ್ಕೆ ಶುದ್ಧ ಕುಡಿಯುವನೀರು, ಸುಸಜ್ಜಿತ ಪ್ರಾಥಮಿಕ ಆರೋಗ್ಯಕೇಂದ್ರ, ರಸ್ತೆ, ಚರಂಡಿ ಹಾಗೂ ಬರುವ ದಿನಗಳಲ್ಲಿ ಪದವಿ ಕಾಲೇಜು ಹಾಗೂ ಡಿಪ್ಲೋಮಾ ಕಾಲೇಜುಗಳನ್ನು ಪ್ರರಂಭಿಸಲು ಆಧ್ಯತೆ ನೀಡುವೆನು ಈ ಭಾಗದ ಬಹುದಿನಗಳ ಬೇಡಿಕೆಯಾದ “ಟ್ರಕ್‌ಟರ್ಮಿನಲ್” ಕೊಪ್ಪಳ ಮತ್ತು ಗಿಣಿಗೇರಿ ಗ್ರಾಮಗಳ ಮದ್ಯೆ ಪ್ರಾರಂಭಿಸಲು ಯೋಜನೆಯನ್ನು ಶೀಗ್ರವೇ ಕೈಗೊಳ್ಳಲಾಗುವುದು, ಬಡವರ, ರೈತರ, ದಿನದಲಿತರ ಸಮಸ್ಯೆಗಳಗೆ ಸಂಪೂರ್ಣವಾಗಿ ಸ್ಪಂದನೆ ಮಾಡುತ್ತೆನೆ, ಅಭಿವೃದ್ಧಿಯ ಕಾರ್ಯಗಳಿಗೆ ಎಲ್ಲಾ ವರ್ಗದ ಜನರು ಕೈಜೋಡಿಸಬೇಕೆಂದು ಕರೆ ನೀಡಿದರು.

ಕುಡಿಯುವ ನೀರಿನ ಒವರ್‌ಹೆಡ್ ಟ್ಯಾಂಕ್ ಕಾಮಗಾರಿಗೆ ಚಾಲನೆ
 ಜಿಲ್ಲಾ ಪಂಚಾಯತಿಯ ಕುಡಿಯುವ ನೀರಿನ ಓ.ಖ.W.ಆ.P ಯೋಜನೆ ಅಡಿಯಲ್ಲಿ ೨೦ ಲಕ್ಷದ ಓವರ್‌ಹೆಡ್‌ಟ್ಯಾಕ್ ಕಾಮಗಾರಿಗೆ ಭೂಮಿಪೂಜೆ ನೆರೆವೆರಿಸಿದರು.

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯೆ ಶ್ರೀಮತಿ ಡಾ|| ಸೀತಾ ಗೋಳಪ್ಪ ಹಲಗೇರಿ, ಗ್ರಾ.ಪಂ. ಅಧ್ಯಕ್ಷೆಯಾದ ಲಕ್ಷ್ಮಮ್ಮ ಪೂಜಾರ, ತಾ.ಪಂ. ಸದಸ್ಯರಾದ ನಾಗರಾಜ ಚಳ್ಳೋಳ್ಳಿ, ಗೋಳಪ್ಪ ಹಲಗೇರಿ, ಕರಿಯಪ್ಪ ಮೇಟಿ, ಸುಬ್ಬಣ್ಣ, ಮಾರುತೇಪ್ಪ ಹಲಗೇರಿ,ಬಸುವರಾಜ ಆಗೊಲಿ, ಮಲ್ಲಿಕಾರ್ಜುನ ಹಲಗೇರಿ, ರಾಮಚಂದ್ರಪ್ಪ ಕವಲೂರು, ಗುದ್ನೆಪ್ಪ ಹೊಸುರು, ಯಮನೂರಪ್ಪ ಕಟಗಿ, ಗಿಣಿಗೇರಾ ಗ್ರಾ.ಪಂ. ಸದಸ್ಯರು ಗ್ರಾಮ ಗುರುಹಿರಿಯರು ಉಪಸ್ಥಿತರಿದ್ದರು.

Leave a Reply