ನಾಳೆ ೯ ರಂದು ಶ್ರೀ ಕನ್ಯಕಾಪರಮೇಶ್ವರಿ ಅಮ್ಮನವರ ಜಯಂತ್ಯೋತ್ಸವ

 ನಗರದ ಪ್ರಸಿದ್ದ ಶ್ರೀ ಕನ್ಯಾಕಾಪರಮೇಶ್ವರಿ ದೇವಸ್ಥಾನದಲ್ಲಿ ೯ ರಂದು ಶುಕ್ರವಾರದಂದು ಶ್ರಿ ಕನ್ಯಾಕಾಪರಮೇಶ್ವರಿ ಅಮ್ಮನವರ ಜಯಂತ್ಯೋತ್ಸವ ಸಮಾರಂಭ ಜರುಗಲಿದೆ. 
ಆರ್ಯವೈಶ್ಯ ಸಂಘ ಕೊಪ್ಪಳ ಇವರು ಕಾರ್ಯಕ್ರಮ ಆಯೋಜಿಲಾಗಿದ್ದು. ಅಂದು ಅಮ್ಮನವರಿಗೆ ವಿಶೇಷ ಅಲಂಕಾರ ನೈವೆದ್ಯ ಇತರ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಬೆಳಿಗ್ಗೆ ಗಂಗಾಪೂಜೆ, ಸುಮಂಗಲಿಯರಿಂದ ಪೂರ್ಣ ಕುಂಭ ತರುವುದು ದೇವಸ್ಥಾನದವರೆಗೆ ಶ್ರೀ ಗೋವಿಂದರಾಜ ದೇವಸ್ಥಾನದಿಂದ ಕಳಸದ ಮೆರವಣಿಗೆ ನಂತರ ಶ್ರೀ ಅಮ್ಮನವರ ಸ್ತೋತ್ರ ನಾಮಾವಳಿ ನಂತರ ಅಷ್ಟೋತ್ತರ ಅಭಿಷೇಕ ಇತರ ಕಾರ್ಯಕ್ರಮ ಜರುಗಲಿವೆ.
ಮೆರವಣಿಗೆ: ಜಯಂತ್ಯೋತ್ಸವದ ಅಂಗವಾಗಿ ಬೆಳಿಗ್ಗೆ ೯ ಕ್ಕೆ ಶ್ರೀ ಅಮ್ಮನವರ ಭಾವಚಿತ್ರದೊಂದಿಗೆ ನಗರದ ಶ್ರೀ ಮಹೇಶ್ವರ ದೇವಸ್ಥಾನದಿಂದ ಗಡಿಯಾರ ಕಂಬದ ಮುಖಾಂತರ ವಿವಿಧ ವಾದ್ಯ ಹಾಗೂ ಭಜನೆ ಮುಖಾಂತರ ಮೆರವಣಿಗೆ ಜರುಗಲಿದೆ,
ನಗೆಹಬ್ಬ: ಸಂಜೆ ೫ ಕ್ಕೆ ದೂರದರ್ಶಿನ ಕಲಾವಿದ ಬಸವರಾಜ ಪಾಗಡ ಇವರಿಂದ ನಗೆಹಬ್ಬ ಕಾರ್ಯಕ್ರಮ ಜರುಗಲಿದ್ದುನ ನಂತರ ಪಲ್ಲಕ್ಕಿ ಸೇವೆ ಜರುಗಲಿದ್ದು ೨೦೧೩-೧೪ ರಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಇತರ ಕಾರ್ಯಕ್ರಮಗಳು ಜರುಗಲಿದ್ದು ಕಾರ್ಯಕ್ರಮಕ್ಕೆ ಸರ್ವರು ಆಗಮಿಸಿ ಯಶಸ್ವಿಗೊಳಿಸುವಂತೆ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಪುಣ್ಯಮೂರ್ತಿ ಹಾಗೂ ಅಂಗ ಸಂಸ್ಥೆಗಳು ಮನವಿ ಮಾಡಿದ್ದಾರೆ. 
Please follow and like us:
error