You are here
Home > Koppal News > ಭಾಷಣ ಹೋಳಿಗೆತರ ಸಿಹಿಯಾಗಿರಬೇಕು – ರಾಮಚಂದ್ರ

ಭಾಷಣ ಹೋಳಿಗೆತರ ಸಿಹಿಯಾಗಿರಬೇಕು – ರಾಮಚಂದ್ರ

  ಸಮಾಜದೊಂದಿಗೆ ಮಾತನಾಡುವಾಗ ಹಾಗೂ ಸಾರ್ವಜನಿಕವಾಗಿ ಭಾಷಣ ಮಾಡುವಾಗ ವಿಷಯಾಂತರಗೊಳಿಸದೆ ನಿರ್ಧಿಷ್ಟವಾದ ಮಾತುಗಳು ಹೋಳಿಗೆ ತರ ಸಿಹಿಯಾಗಿರಬೇಕೆಂದು ಜೆಸಿಐ ಸಂಡೂರ ವ್ಯಾಲಿಯ ವಲಯ ತರಬೇತುದಾರರಾದ ಜೆಸಿ. ಜೆಎಫ್‌ಡಿ ರಾಮಚಂದ್ರ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ದದೇಗಲ್ ಬಳಿ ಇರುವ ಆರ್‌ಡಿಟಿಇ ಸಂಸ್ಥೆಯ ಗುಳಗಣ್ಣವರ ಎಮ್.ಕಾಂ. ಕಾಲೇಜ್ ನಲ್ಲಿ ಜೆ.ಸಿ.ಆಯ್ ವತಿಯಿಂದ ಹಮ್ಮಿಕೊಂಡಿದ್ದ ಫ್ಯುಚರ್ ಎಂಬ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮದಲ್ಲಿ ತರಬೇತಿ ನೀಡಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಯು ಸೋಲಿಗೆ ಅಂಜದೆ ಅದನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡು ಮುಂದೆ ಸಾಗಲು ಬೇಕಾಗಿರುವ ಗುರಿ ನಿಗದಿ, ಸಮಯ ಪಾಲನೆ, ಸಾರ್ವಜನಿಕ ಭಾಷಣ ಹಾಗೂ ಅಭಿಪ್ರಾಯ ಮಂಡನೆ ಕುರಿತು ಸುಧೀರ್ಘವಾಗಿ ಮಾತನಾಡಿದರು. ಮಾತುಗಳಲ್ಲಿ ಅನಾವಶ್ಯಕ ಗೊಂದಲಗಳಿರಬಾರದು, ರಾಜಕೀಯ ರಹಿತವಾಗಿರಬೇಕು ಆಗ ಬಹುಜನರನ್ನು ತಲುಪಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇಸ್ಸಾರ್ ಎಂ ಎಸ್ ಡಬ್ಲ್ಯ ಕಾಲೇಜಿನ ನಿರ್ದೇಶಕ ವಿ. ಐ. ನಾಡಗೌಡ್ರ, ಉಪನ್ಯಾಸಕ ಕಿಲಾರಿ ಉಮೇಶಬಾಬು ಇತರರು ಇದ್ದರು.

Leave a Reply

Top