ಮಾಸ್ತಿ ಶಾಲೆ ಒಂದು ಮಾದರಿ ಶಿಕ್ಷಣ ಸಂಸ್ಥೆ- ವೆಂಕನಗೌಡ್ರು.

ಪ್ರಾರಂಭಗೊಂಡು ಐದು ವರ್ಷಗಳಲ್ಲಿ ಮಾಸ್ತಿ ಪಬ್ಲಿಕ್ ಸ್ಕೂಲ್ ಜಿಲ್ಲೆಯ ಕೆಲ ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದು ನಿಂತಿದೆ ಎಂದು ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಕೆ.ಎಂ.ಎಫ್ ಅಧ್ಯಕ್ಷ ವೆಂಕನಗೌಡ್ರು ಹಿರೇಗೌಡ್ರು ಹೇಳಿದರು.
 ಅವರು ಸೋಮವಾರ ರಾತ್ರಿ ಯಶಸ್ವಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸೇವಾ ಸಂಸ್ಥೆಯ ಮಾಸ್ತಿ ಪಬ್ಲಿಕ್ ಸ್ಕೂಲ್‌ನ ಶಾಲಾ ಐದನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡುತ್ತಿದ್ದರು. ದೇಶದ ಭವಿಷ್ಯ ನಮ್ಮ ಮಕ್ಕಳಲ್ಲಿ ಅಡಗಿದೆ. ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ಉತ್ತಮ ಶಿಕ್ಷಣ ಅತ್ಯವಶ್ಯ. ಪಾಲಕರು ಮಕ್ಕಳಿಗೆ ಉತ್ತಮ ನಡೆ-ನುಡಿ, ಶಿಕ್ಷಣ ಕೊಡಿಸಿ ಎಂದು ಕರೆ ನೀಡಿದರು.
Please follow and like us:
error