ನಾಳೆ ಡಾ||ಅಬ್ದುಲ್‌ಕಲಾಂ ಪತ್ತಿನ ಸೌಹಾರ್ಧ ಸಹಕಾರಿ ನಿಯಮಿತ ಉದ್ಘಾಟನೆ.

ಕೊಪ್ಪಳ ಜು,೦೩: ಸಯ್ಯದ್ ಫೌಂಡೇಶನ್ಸ್ ಅಧ್ಯಕ್ಷ ಹಾಗೂ ಸಮಾಜ ಸೇವಕ ಕೆ.ಎಂ.ಸಯ್ಯದ್ ನೇತೃತ್ವದ ಡಾ|| ಅಬ್ದುಲ್ ಕಲಾಂ ಪತ್ತಿನ ಸೌಹಾರ್ಧ ಸಹಕಾರಿ ನಿಯಮಿತ ನೂತನ ಸಂಘ ಶಾಖೆಯ ಉದ್ಘಾಟನೆ ಸಮಾರಂಭ ದಿ.೫ರರವಿವಾರ ಬೆಳಿಗ್ಗೆ ೧೧ ಗಂಟೆಗೆ ನಗರದ ತಹಶೀಲ್ ಕಚೇರಿ ರಸ್ತೆ ಕೆಇಬಿ ಎದುಗಡೆ ಡಾ|| ಕುಮಾರಸ್ವಾಮಿ ಬಿಲ್ಡಿಂಗ್‌ನಲ್ಲಿರುವ ಕಟ್ಟಡದಲ್ಲಿ ಉದ್ಘಾಟನಾ ಸಮಾರಂಭ ಪ್ರಾರಂಭೋತ್ಸವ ಜರುಗಲಿದೆ. ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಗವಿಮಠದ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳು, ಕೌತಾಳಂ ದರ್ಗಾ ಶರೀಫ್‌ನ ಜಗದ್ಗುರು ಶ್ರೀಖಾದರಲಿಂಗ ಬಾಬಾ ಸಾಹೇಬ ರವರು ವಹಿಸಿ ಆಶೀರ್ವಚನ ನೀಡಲಿದ್ದಾರೆ. ಪ್ರಾರಂಭೋತ್ಸವದ ಉದ್ಘಾಟನೆಯನ್ನು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ನೆರವೇರಿಸಲಿದ್ದು, ಸಂಸದ ಸಂಗಣ್ಣ ಕರಡಿ ವೆಬ್‌ಸೈಟ್‌ಗೆ ಚಾಲನೆ ನೀಡಲಿದ್ದಾರೆ. ಡಾ|| ಅಬ್ದುಲ್ ಕಲಾಂ ಪತ್ತಿನ ಸೌಹಾರ್ಧ ಸಹಕಾರಿ ನಿಯಮಿತದ ಅಧ್ಯಕ್ಷ ಕೆ.ಎಂ.ಸಯ್ಯದ್ ರವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ,ಬಸವರಾಜ್ ಹಿಟ್ನಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಜುಲ್ಲು ಖಾದರ ಖಾದ್ರಿ, ತಾಲೂಕಾ ಕಾಂಗ್ರೆಸ್ ಅಧ್ಯಕ್ಷ ಎಸ್,ಬಿ,ನಾಗರಳ್ಳಿ, ನಗರಸಭೆ ಅಧ್ಯಕ್ಷೆ ಬಸಮ್ಮ ರಾಮಣ್ಣ ಹಳ್ಳಿಗುಡಿ, ಉಪಾಧ್ಯಕ್ಷ ಬಾಳಪ್ಪ ಬಾರಕೇರ, ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್, ಹಿರಿಯ ನ್ಯಾಯವಾದಿಗಳಾದ ಎಸ್.ಆಸೀಫ್ ಅಲಿ ಹಾಗೂ ಪೀರಾ ಹುಸೇನ್ ಹೊಸಳ್ಳಿ, ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟದೂರ, ಡಾ| ಮಹಾಂತೇಶ್ ಮಲ್ಲನಗೌಡರ್, ನಗರಸಭೆಯ ಸದಸ್ಯರಾದ ಖಾಜಾವಲಿ ಬನ್ನಿಕೊಪ್ಪ, ಮುತ್ತುರಾಜ್ ಕುಷ್ಟಗಿ ಮೌಲಾಹುಸೇನ್ ಜೇಮೆದಾರ ಮತ್ತು ಭಾಗ್ಯನಗರ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಬೊಮ್ಮಣ್ಣ ಅಕ್ಕಸಾಲಿಗ ಅತಿಥಿಗಳಾಗಿ ಪಲ್ಗೊಳಲಿದ್ದಾರೆಂದು ಡಾ||ಅಬ್ದುಲ್ ಕಲಾಂ ಪತ್ತಿನ ಸೌಹಾರ್ಧ ಸಹಕಾರಿ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಯ್ಯದ್ ಗೌಸ್ ಮೊಹಿಯುದ್ದೀನ್  ಹುಸೇನಿ ಮತ್ತು ನಿಯಮಿತದ ನಿದೇಶಕ ಮಂಡಳಿ ಜಂಟಿ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.

Leave a Reply