You are here
Home > Koppal News > ಅನೈರ್ಮಲ್ಯ ವೃತ್ತಿಯಲ್ಲಿರುವ ತೊಡಗಿರುವ ಮಕ್ಕಳಿಗೆ ಶಿಷ್ಯವೇತನ ಅರ್ಜಿ ಆಹ್ವಾನ.

ಅನೈರ್ಮಲ್ಯ ವೃತ್ತಿಯಲ್ಲಿರುವ ತೊಡಗಿರುವ ಮಕ್ಕಳಿಗೆ ಶಿಷ್ಯವೇತನ ಅರ್ಜಿ ಆಹ್ವಾನ.

ಕೊಪ್ಪಳ,
ಆ.೦೬ ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ, ಕೊಪ್ಪಳ
ಇವರಿಂದ ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಬರುವ ಅನೈರ್ಮಲ್ಯ ವೃತ್ತಿಯಲ್ಲಿ ತೊಡಗಿರುವ
ಮೆಟ್ರಿಕ್ ಪೂರ್ವ ಪರಿಶಿಷ್ಟ ಜಾತಿ ಮಕ್ಕಳಿಗೆ ಶಿಷ್ಯ ವೇತನ ನೀಡಲು ಅರ್ಜಿ
ಆಹ್ವಾನಿಸಲಾಗಿದೆ.
       ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕೊಪ್ಪಳ ನಗರಸಭೆ
ವ್ಯಾಪ್ತಿಯಲ್ಲಿ ಬರುವ ಅನೈರ್ಮಲ್ಯ ವೃತ್ತಿಯಲ್ಲಿ ತೊಡಗಿರುವ ಮೆಟ್ರಿಕ್ ಪೂರ್ವ
ಪರಿಶಿಷ್ಟ ಜಾತಿ ಮಕ್ಕಳ ಶಿಷ್ಯ ವೇತನ ಮಂಜೂರು ಮಾಡಬೇಕಾಗಿದ್ದು, ನಗರಸಭೆ ಪೌರಾಯುಕ್ತರು,
ತಮ್ಮ ವ್ಯಾಪ್ತಿಯಲ್ಲಿ ಬರುವ ಅನೈರ್ಮಲ್ಯ ವೃತ್ತಿಯಲ್ಲಿ ಕೆಲಸ ಮಾಡುವವರ ಮಕ್ಕಳ
ಮಾಹಿತಿಯನ್ನು ತಿತಿತಿ.sತಿ.ಞಚಿಡಿ.iಟಿ
www.sw.kar.in
ವೆಬ್‌ಸೈಟ್‌ನ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಲು ತಮ್ಮ ವ್ಯಾಪ್ತಿಯ ಪೌರ ಕಾರ್ಮಿಕ
ಸಿಬ್ಬಂದಿಗೆ ಸೂಚಿಸಬೇಕು.  ಹೆಚ್ಚಿನ ವಿವರಗಳಿಗೆ ದೂರವಾಣಿ ಸಂ: ೦೮೫೩೯-೨೨೦೫೯೦ ಕ್ಕೆ
ಸಂಪರ್ಕಿಸಬಹುದು ಎಂದು ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳು 
ಕೋರಿದ್ದಾರೆ.
ಆ.೧೧ ರಂದು ಕೊಪ್ಪಳ ಜಿಲ್ಲಾ ಪಂಚಾಯತಿ ಕೆ.ಡಿ.ಪಿ ಸಭೆ
ಕೊಪ್ಪಳ,
ಆ.೦೬ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (೨೦ ಅಂಶಗಳ ಕಾರ್ಯಕ್ರಮ
ಸೇರಿದಂತೆ) ಗಳ ಕೆ.ಡಿ.ಪಿ. ಮಾಸಿಕ ಪ್ರಗತಿ ಪರಿಶೀಲನಾ ಸಭೆ ಆ.೧೧ ರಂದು ಬೆಳಿಗ್ಗೆ ೧೧
ಗಂಟೆಗೆ ಜಿಲ್ಲಾ ಪಂಚಾಯಿತಿಯ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ನಡೆಯಲಿದೆ.
    
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಅಮರೇಶ ಕುಳಗಿ ಅವರು ಸಭೆಯ ಅಧ್ಯಕ್ಷತೆ ವಹಿಸುವರು.
ಸಂಬಧಪಟ್ಟ ಅಧಿಕಾರಿಗಳು ೨೦೧೫ ರ ಜುಲೈ ಅಂತ್ಯಕ್ಕೆ ತಮ್ಮ ಇಲಾಖೆ ಸಾಧಿಸಿದ ಪ್ರಗತಿಯ
ಮಾಹಿತಿಯೊಂದಿಗೆ ಖುದ್ದಾಗಿ ಹಾಜರಾಗುವಂತೆ ಹಾಗೂ ಆ.೦೬ ರೊಳಗಾಗಿ ಪ್ರಗತಿ ವರದಿಗಳನ್ನು
ಯೋಜನಾ ಶಾಖೆಗೆ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು
ತಿಳಿಸಿದ್ದಾರೆ.
ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಗಳ ಉಚಿತ ತರಬೇತಿ ಶಿಬಿರ
ಕೊಪ್ಪಳ,
ಆ.೦೬ ಬಾಗಲಕೋಟೆಯ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರದ
ವತಿಯಿಂದ ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಗಳ ಬಗ್ಗೆ ಎರಡು ದಿನಗಳ ಉಚಿತ ತರಬೇತಿ
ಶಿಬಿರವನ್ನು ಆಗಸ್ಟ್ ತಿಂಗಳಿನಲ್ಲಿ ಏರ್ಪಡಿಸಲಾಗಿದೆ.
     ಶಿಬಿರದಲ್ಲಿ ಹಣ್ಣು
ಬೆಳೆಗಳ ಅಧಿಕ ಇಳುವರಿಗೆ ಅನುಸರಿಸಬೇಕಾದ ಆಧುನಿಕ ಬೇಸಾಯ ಕ್ರಮಗಳು, ಸಾವಯವ ಕೃಷಿ
ತಂತ್ರಜ್ಞಾನ, ಸೂಕ್ತ ನೀರಾವರಿ ಪದ್ಧತಿಗಳು, ಸಂಸ್ಕರಣಾ ಕ್ರಮಗಳು, ಹಣಕಾಸಿನ ನಿರ್ವಹಣೆ
ಇತ್ಯಾದಿ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸುವ
ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಆಸಕ್ತ ರೈತರು
ಸ್ವ-ಸಹಾಯ ಸಂಘದ ಸದಸ್ಯರು, ಯುವಕರು ತಮ್ಮ ಹೆಸರು, ವಿಳಾಸ, ದೂರವಾಣಿ ಅಥವಾ ಮೊಬೈಲ್
ಸಂಖ್ಯೆ ಇತ್ಯಾದಿ ವಿವರಗಳನ್ನು ಆ.೧೪ ರೊಳಗಾಗಿ ಕೇಂದ್ರದಲ್ಲಿ ನೊಂದಾಯಿಸಬಹುದಾಗಿದ್ದು,
ನೊಂದಾವಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ
ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ
ರೋಡ್, ಬಾಗಲಕೋಟೆ-೫೮೭೧೦೩, ಮೊಬೈಲ್ ಸಂಖ್ಯೆ: ೯೪೮೨೬೩೦೭೯೦ ಇವರನ್ನು
ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.   

Leave a Reply

Top