ಹೈದರಾಬಾದ್ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವರುಣನ ಆರ್ಭಟ

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯಾಹ್ನ ಸಿಡಿಲು ಬಡಿದು ರೈತ ನಂದಾಪೂರ ಗ್ರಾಮದ ಶಾಮಣ್ಣ ಹನುಮಪ್ಪ ಚಲುವಾದಿ (45) ಮೃತಪಟ್ಟರು. ಒಂದು ಎಮ್ಮೆಯೂ ಸ್ಥಳದಲ್ಲೇ ಸಾವಿಗೀಡಾಯಿತು.ಗುಲ್ಬರ್ಗದಲ್ಲಿ ಬೆಳಿಗ್ಗೆ 9ರಿಂದ 11 ಗಂಟೆಯವರೆಗೆ ಸತತವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಯಲ್ಲಿ ತುಂಬ ನೀರು ನಿಂತು ಕೆಲ ಹೊತ್ತು ಸಂಚಾರಕ್ಕೆ ಅಡ್ಡಿ ಉಂಟಾಯಿತು.ಬೀದರ್ ನಗರದಲ್ಲಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದರಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ಜಿಲ್ಲೆಯ ಹುಲಸೂರು ವ್ಯಾಪ್ತಿಯಲ್ಲಿ ಹೊಲಗಳಿಂದ ಹಳ್ಳಕ್ಕೆ ಹರಿದ ನೀರು, ಸೇತುವೆ ಕೆಳಗಿನಿಂದ ಹೋಗದೆ ರಸ್ತೆಯ ಮೇಲೆ ಹರಿದುದರಿಂದ ಸಂಚಾರಕ್ಕೆ ಅಡಚಣೆ ಉಂಟಾಯಿತು. ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಿದೆ.

Leave a Reply