ಮಂಜುನಾಥ ಡೊಳ್ಳಿನ್‌ಗೆ ಪ್ರೊ.ಕೆ.ರಾಮದಾಸ್ ಲೇಖನ ಪ್ರಶಸ್ತಿ

ಕೊಪ್ಪಳ-ಮೈಸೂರಿನ ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯು ಪ್ರೊ.ಕೆ.ರಾಮದಾಸ್ ಲೇಖನ ಪ್ರಶಸ್ತಿ -೨೦೧೧ ನ್ನು ನೀಡಲು
ಏರ್ಪಡಿಸಿದ್ದ ರಾಜ್ಯ ಮಟ್ಟದ ವೈಚಾರಿಕ ಲೇಖನಗಳ ಸ್ಪರ್ಧೆಯಲ್ಲಿ ಕೊಪ್ಪಳದ ಮಂಜುನಾಥ.ಡಿ.ಡೊಳ್ಳಿನ ಅವರು
ಬರೆದ ಭಾರತದಲ್ಲಿ ಮತೀಯ ಆತಂಕಗಳು ಎಂಬ ಲೇಖನ ಪ್ರಥಮ ಬಹುಮಾನ ಪಡೆಯುವ ಮೂಲಕ
ಪ್ರಶಸ್ತಿಯನ್ನು ತಂದು ಕೊಟ್ಟಿದೆ.
ಇತ್ತೀಚೆಗೆ ಮೈಸೂರಿನ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ , ನಗದು,ಹಾಗೂ ಫಲ ಪುಷ್ಪಗಳನ್ನು ನೀಡಿ ಗೌರವಿಸಲಾಯಿತು. ಕೊಪ್ಪಳದವರಾಗಿರುವ ಮಂಜುನಾಥ.ಡಿ.ಡೊಳ್ಳಿನ
ಸದ್ಯ ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ ಪ್ರಸಾರ ನಿರ್ವಾಹಕರಾಗಿ ಕೆಲಸ ಮಡುತ್ತಿದ್ದಾರೆ.
ಮೈಸೂರು ವಿ.ವಿ.ಯ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿರುವ ಡಾ.ಮುಜಾಫರ್ ಅಸ್ಸಾದಿ,ಡಾ.ಸಿ.ನಾಗಣ್ನ,
ಪ್ರೊ.ಶಿವರಾಮು ಕಾಡನಕುಪ್ಪೆ,ಕಾಳೇಗೌಡ ನಾಗವಾರ. ಪತ್ರಕರ್ತ ರಾಜಶೇಕರ ಕೋಟಿ, ಡಾ.ಬಂಜಗೆರೆ ಜಯಪ್ರಕಾಶ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಲೇಖನ ಸ್ಪರ್ಧೆಯ ಕುರಿತು ಮಾತನಾಡಿದರು.

Please follow and like us:
error