ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಮನವಿ

ಕೊಪ್ಪಳ : ಸರಕಾರದಿಂದ ೧ನೇ ತರಗತಿಯಿಂದ ೧೦ನೇ ತರಗತಿಯವರೆಗೆ ಓದುತ್ತಿರುವ ಅಲ್ಪಸಂಖ್ಯಾತರ ಮುಸ್ಲಿಂ ಜನಾಂಗದ ಮಕ್ಕಳಿಗೆ ನೀಡಲಾಗುವ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಈ ತಿಂಗಳ ೩೧ರವರೆಗೆ ಅವಕಾಶ ಇರುವುದರಿಂದ ಅದರ ಲಾಭ ಪಡೆದುಕೊಳ್ಳಲು ಕೊಪ್ಪಳದ ಸೈಯದ್ ಪೌಂಡೇಶನ್ ಕೋರಿದೆ. ಅರ್ಜಿ ಸಲ್ಲಿಕೆಗೆ ತಗಲುವ ಎಲ್ಲ ವೆಚ್ಚವನ್ನು ಸೈಯದ್ ಪೌಂಡೇಶನ್ ಭರಿಸಲಿದೆ. ಹೀಗಾಗಿ ಪಾಲಕರು ತಮ್ಮ ಮಕ್ಕಳ,ಶಾಲೆಯ ವಿವರಗಳೊಂದಿಗೆ ಸೈಯದ್ ಪೌಂಡೇಶನ್ ನ ಹಜ್ಜುಖಾದ್ರಿ-೯೩೪೩೧೨೧೨೩೭ ಇವರನ್ನು ಹಾಗೂ ಮುನಿರಾಬಾದ್ ಭಾಗದ ಪಾಲಕರು ಸೈಯದ್ ಗೌಸ್ ಪಾಷಾ – ೯೮೪೫೪೨೧೯೯೬ ಇವರನ್ನು ಸಂಪರ್ಕಿಸಲು ಕೋರಲಾಗಿದೆ.
Please follow and like us:
error