fbpx

ದೊಡ್ಡೇಶ ಯಲಿಗಾರಗೆ ಹೈ.ಕ.ಪತ್ರಕರ್ತ ಪ್ರಶಸ್ತಿ ಪ್ರದಾನ

ಕೊಪ್ಪಳ: ಜಿಲ್ಲಾ ಸುವರ್ಣ ನ್ಯೂಸ್ ವರದಿಗಾರ ದೊಡ್ಡೇಶ ಯಲಿಗಾರಗೆ ಬೊಮ್ಮಳ್ಳಿ ಪ್ರತಿಷ್ಠಾನ ವತಿಯಿಂದ ಹೈ ಪತ್ರಕರ್ತ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಗುಲಬುರ್ಗಾ ಜಿಲ್ಲೆಯ ಸೇಡಂನ ಕೊತ್ತಲ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೆಶಕ ಜಿ.ಎನ್.ಶಿವಮೂರ್ತಿ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಗುಲಬುರ್ಗಾದ ಶ್ರೀ ಚವದಾಪುರಿ ಹಿರೇವ್ಮಠದ ಶ್ರೀ ಷ.ಬ್ರ.ರಾಜಶೇಖರ ಶಿವಾಚಾರ್ಯರು, ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್, ಬೊಮ್ಮಳ್ಳಿ ಸುದ್ದಿ ಪ್ರತಿಷ್ಠಾನದ ಅಧ್ಯಕ್ಷ ಶಿವಯ್ಯಸ್ವಾಮಿ,ಪ್ರಧಾನ ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ್, ಸಂಚಾಲಕ ನಾಗಯ್ಯಸ್ವಾಮಿ ಉಪಸ್ಥಿತರಿದ್ದರು.   
Please follow and like us:
error

Leave a Reply

error: Content is protected !!