fbpx

ಎಂ.ತಾಹೀರ್ ಅಲಿಗೆ ಭಾರತ ಜ್ಯೋತಿ ಅವಾರ್ಡ್ ಮತ್ತು ಚಿನ್ನದ ಪದಕ ಪ್ರಧಾನ

  ಕೊಪ್ಪಳದ ಲ್ಯಾಂಡ್ ಡೆವಲಫರ್ ಮೈಸೂರಿನ ಸಮಾಜ ಸೇವಕ ಎಂ.ತಾಹೀರ್ ಅಲಿಯವರಿಗೆ ನವದೆಹಲಿಯಲ್ಲಿಂದು ಇಂಡಿಯಾ ಇಂಟರ್ ನ್ಯಾಷನಲ್ ಪ್ರೆಂಡಶಿಫ್ ಸೊಸೈಟಿಯಿಂದ ಕೊಡಮಾಡಿದ ಭಾರತ ಜ್ಯೋತಿ ಅವಾರ್ಡ್ ಮತ್ತು ಚಿನ್ನದ ಪದಕವನ್ನು ಪ್ರಧಾನ ಮಾಡಲಾಯಿತು. 
ಐಐಎಫ್‌ಎಸ್ ಹಾಗೂ ಐಐಎಸ್‌ಎ ನವದೆಹಲಿ ವತಿಯಿಂದ ರಾಷ್ಟ್ರದ ವಿವಿಧ ರಾಜ್ಯಗಳಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ವಿಜ್ಞಾನಿ, ತಂತ್ರಜ್ಞಾನಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸೇವೆಗೈದವರಿಗೆ ಈ ಪ್ರಶಸ್ತಿ ಮತ್ತು ಚಿನ್ನದ ಪದಕ ಪ್ರದಾನ ಮಾಡಲಾಯಿತು.
ತಮಿಳುನಾಡು ಹಾಗೂ ಅಸ್ಸಾ ರಾಜ್ಯದ ಮಾಜಿ ರಾಜ್ಯಪಾಲರಾದ ಡಾ|| ಭೀಸ್ಮ ನಾರಾಯಣಸಿಂಗ್ ಹಾಗೂ ಪಂಜಾಬ್ ರಾಜ್ಯದ ಮಾಜಿ ರಾಜ್ಯಪಾಲರಾದ ವಿಶ್ರಾಂತ ನ್ಯಾಯಮೂರ್ತಿ ಒ.ಪಿ.ವರ್ಮ ಅವರು ಈ ಮಹತ್ವದ ಪ್ರಶಸ್ತಿ ಮತ್ತು ಚಿನ್ನದ ಪದಕವನ್ನು ಎಂ.ತಾಹೀರ್ ಅಲಿ ಅವರಿಗೆ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. 
ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಘಟಕ ಕಾರ್ಯನಿರ್ವಾಹಕ ನಿರ್ದೇಶಕ ಜಿ.ಎಂ.ಸಿಂಗ್ ಸೇರಿದಂತೆ ರಾಷ್ಟ್ರದ ವಿವಿಧ ರಾಜ್ಯದ ಪ್ರಶಸ್ತಿ ಪುರಸ್ಕೃತರು ಹಾಗೂ ಎಂ.ತಾಹೀರ್ ಅಲಿಯವರ ಪತ್ನಿ ಶ್ರೀಮತಿ ಯಾಸ್ಮೀನಾ ಬೇಗಂ ಉಪಸ್ಥಿತರಿದ್ದರು. 
ಅಭಿನಂದನೆ : ಮೈಸೂರಿನ ಹಾಲಿ ನಿವಾಸಿ, ಸಮಾಜ ಸೇವಕ ಹಾಗೂ ಲ್ಯಾಂಡ್ ಡೆವಲಪರ್ ಆದ ಕೊಪ್ಪಳದ ಎಂ.ತಾಹೀರ್ ಅಲಿಯವರಿಗೆ ಈ ಪ್ರಶಸ್ತಿ ಮತ್ತು ಚಿನ್ನದ ಪದಕ ಲಭಿಸಿರುವುದಕ್ಕೆ ಹಾಜಿ ಅಬ್ದುಲ್ ರಜಾಕ್ ಪಟೇಲ್, ಗುತ್ತಿಗೆದಾರ ಮೈಸೂರಿನ ಎಂ.ಹೆಚ್.ಜಾಗೀರದಾರ, ಅಕ್ಬರ್‌ಷಾ ಮೈಸೂರು, ಎಂ.ಸಜ್ಜದ್ ಅಲಿ ಕೊಪ್ಪಳ, ಅಜ್ಮಲ್ ಷರೀಪ್, ಅಲಿಂ ಅಹ್ಮದ್, ಫಜಲುರ್ ರಹೇಮಾನ, ಸಯ್ಯದ್ ಅಬರಾರ್ ಸೇರಿದಂತೆ ಕೊಪ್ಪಳ ಜಿಲ್ಲೆಯ ಮತ್ತು ಮೈಸೂರು ಜಿಲ್ಲೆಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
Please follow and like us:
error

Leave a Reply

error: Content is protected !!