ಮುನಿರಾಬಾದ್ ಡ್ಯಾಂನಲ್ಲಿ ತಾಲೂಕ ೪ ನೆಯ ಕನ್ನಡ ಸಾಹಿತ್ಯ ಸಮ್ಮೇಳನ

 ಕೊಪ್ಪಳ ತಾಲೂಕ ೪ ನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬರುವ ಫೆಭ್ರುವರಿ ೧೬, ರವಿವಾರದಂದು ತಾಲೂಕಿನ ಹಿಟ್ನಾಳ ಹೋಬಳಿಯ ಮುನಿರಾಬಾದ್ ಡ್ಯಾಂನಲ್ಲಿ ಜರುಗಿಸಲು  ಕನ್ನಡ ಸಾಹಿತ್ಯ ಪರಿಷತ್ತಿನ  ಕಾರ್ಯ ಕಾರಿಣಿಮಂಡಳಿಯು ತಿರ್ಮಾನಿಸಿದೆ. ತಾಲೂಕ ಕಸಾಪ ಅಧ್ಯಕ್ಷ ಶಿ.ಕಾ. ಬಡಿಗೇರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡು, ತಾಲೂಕಿನ ಕಸಾಪದ ಆಜೀವ ಸದಸ್ಯರು, ಹಿರಿ- ಕಿರಿಯ ಸಾಹಿತಿಗಳು , ಪತೃಕರ್ತರು, ಕನ್ನಡ ಪರ ಸಂಘಟನೆಗಳು , ಸಾಹಿತ್ಯಾಸಕ್ತರು  ಭಾಗಿಯಾಗುವದರ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಪದಾಧಿಕಾರಿಗಳು  ಕೋರಿದ್ದಾರೆ.
                              ಸಭೆಯಲ್ಲಿ ಗೌರವ ಕಾರ್ಯದರ್ಶಿಗಳಾದ ಡಾ.ಪ್ರಕಾಶ ಬಳ್ಳಾರಿ, ಹುಸೇನ್ ಪಾಶಾ, ಗೌರವ ಕೋಶಾಧ್ಯಕ್ಷ ಮೈಲಾರಗೌಡ ಹೊಸಮನಿ,ಸಂಘ ಸಂಸ್ಥೆಯ ಪ್ರತಿನಿಧಿ ಪ್ರಹ್ಲಾದ ಅಗಳಿ, ಪ.ಜಾತಿ, ಪ.ಪಂಗಡ ಪ್ರತಿನಿಧಿ ವೀರಣ್ಣ ಬಂಡಿ, ಮಹಿಳಾ ಪ್ರತಿನಿಧಿ ಅಂಜನಾದೇವಿ, ಕಾರ್ಯಕಾರಿಣಿ ಮಂಡಳಿಯ ಸದಸ್ಯರಾದ ಬಸವರಾಜ ಪಾಟೀಲ, ಗವಿಸಿದ್ದಪ್ಪ ಬಾರಕೇರ, ಕಿಶನ್ ಗೋಪಾಲ ಜಾಜೂ , ಅರುಣಾ ನರೇಂದ್ರ, ಅನಸೂಯಾ ಜಾಗೀರ‍್ದಾರ ಹಾಗೂ ಪದಮ್‌ಚಂದ ಮೆಹತಾ ಇದ್ದರು. 

Leave a Reply