You are here
Home > Koppal News > ೩೦ ರಂದು ನಿಜಸುಖಿ ಹಡಪದ ಅಪ್ಪಣ್ಣನವರ ಹಾಗೂ ನಿಜಮುಕ್ತ ಲಿಂಗಮ್ಮನವರ ದೇವಸ್ಥಾನದ ಅಡಿಗಲ್ಲು ಸಮಾರಂಭ

೩೦ ರಂದು ನಿಜಸುಖಿ ಹಡಪದ ಅಪ್ಪಣ್ಣನವರ ಹಾಗೂ ನಿಜಮುಕ್ತ ಲಿಂಗಮ್ಮನವರ ದೇವಸ್ಥಾನದ ಅಡಿಗಲ್ಲು ಸಮಾರಂಭ

 ತಾಲೂಕಿನ ಭಾಗ್ಯನಗರದ ಗ್ರಾಮದಲ್ಲಿ ನಿಜಸುಖ ಹಡಪದ ಅಪ್ಪಣ್ಣನವರ ಹಾಗೂ ನಿಜಮುಕ್ತಿ ಲಿಂಗಮ್ಮನವರ ದೇವಸ್ಥಾನದ ಅಡಿಗಲ್ಲು ಸಮಾರಂಭವನ್ನು ದಿ. ೩೦ ರಂದು ಶುಕ್ರವಾರ ಬೆಳಿಗ್ಗೆ ೧೦-೩೦ಕ್ಕೆ ಜರುಗಲಿದೆ.
ಸಾನಿಧ್ಯವನ್ನು ಸಂಸ್ಥಾನ ಗವಿಮಠದ ಶ್ರೀ ಮ.ನಿ.ಪ್ರ.ಸ್ವ.ಜ. ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಶ್ರೀ ಅಪ್ಪಣ್ಣ ದೇವರ ಮಹಾಸಂಸ್ಥಾನ ತಂಗಡಗಿ ಪೂಜ್ಯ ಶ್ರೀ ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು, ಭಾಗ್ಯನಗರದ ಶ್ರೀ ಶಂಕರಾಚಾರ್ಯ ಮಠ ಪರಮಹಂಸ ಶ್ರೀ ಶಿವಪ್ರಕಾಶಾನಂದ ಸ್ವಾಮಿಗಳು, ದದೇಗಲ್ ಶ್ರೀ ಸಿದ್ಧಾರೂಢಮಠ ಶ್ರೀ ಶ್ರೂ.ಬ್ರ.ನಿ. ಆತ್ಮಾನಂದ ಭಾರತಿ ಸ್ವಾಮಿಗಳು, ಬೇಳೂರು ಶ್ರೀ ಶಿವಶರಣೆ ಗಂಗಾಮಾತೆ ವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಸಂಗಣ್ಣ ಕರಡಿ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ರಾಘವೇಂದ್ರ ಹಿಟ್ನಾಳ ವಹಿಸಲಿದ್ದಾರೆ. 
ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಅಧ್ಯಕ್ಷ ಹೊನ್ನೂರಸಾಬ ಭೈರಾಪೂರ, ಉಪಾಧ್ಯಕ್ಷೆ ಶ್ರೀಮತಿ ಹುಲಿಗೆಮ್ಮ ಹನುಮಂತಪ್ಪ ನಾಯಕ, ಜಿ.ಪಂ. ಸದಸ್ಯೆ ಶ್ರೀಮತಿ ವನಿತಾ ಗಡಾದ, ತಾ.ಪಂ. ಸದಸ್ಯರಾದ ದಾನಪ್ಪ ಕವಲೂರ, ಶ್ರೀನಿವಾಸ ಹ್ಯಾಟಿ, ಉದ್ಯಮಿದಾರರಾದ ಶ್ರೀನಿವಾಸ ಗುಪ್ತಾ, ಗ್ಯಾನಪ್ಪ ಹ್ಯಾಟಿ, ವಕೀಲ ರಾಘವೇಂದ್ರ ಪಾನಘಂಟಿ, ಹ.ಅ.ಸಂಘದ ರಾಜ್ಯಾಧ್ಯಕ್ಷ ಅಣ್ಣಾರಾವ್ ನರಿಗೋಳ, ಹ.ಅ.ಕ್ಷೌ.ಪ.ಸ.ಸಂಘದ ಅಧ್ಯಕ್ಷ ಮಂಜುನಾಥ ಹಂದ್ರಾಳ, ಜಿ.ಹ.ಸ.ಕ್ಷೌ.ಹಿ.ವೇ.ಜಿಲ್ಲಾಧ್ಯಕ್ಷ ಬಸವರಾಜ ಸಾಹುಕಾರ, ಗ್ರಾ.ಪಂ. ಸದಸ್ಯರಾದ ಶ್ರೀಮತಿ ಹುಲಿಗೆಮ್ಮ ಮಹಾಂತಪ್ಪ ತಟ್ಟಿ, ಬಸವರಾಜ ಹಟ್ಟಿ, ಶಂಕ್ರಪ್ಪ ನಾರಾಯಣಪ್ಪ ಮತ್ತಿತರರರು ಆಗಮಿಸಲಿದ್ದಾರೆ ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಿ ಯಶಸ್ವಿಗೊಳಿಸುವಂತೆ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸಂಘದ ಸದಸ್ಯ ಸುಭಾಸ ಹೆಚ್.ಕೆ.  ತಿಳಿಸಿದ್ದಾರೆ. 
a

Leave a Reply

Top