ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾಮೂಹಿಕ ಧರಣಿ ಸತ್ಯಾಗ್ರಹ

ಕ.ರಾ.ಸ.ದಿ.ನಗೌ. ಮಹಾಮಂಡಲ ಜಿಲ್ಲಾ ಘಟಕದಿಂದ 
ಕೊಪ್ಪಳ, ಜೂ, ೨೫: ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ಅಧ್ಯಕ್ಷ ಡಾ. ಕೆ.ಎಸ್. ಶರ್ಮಾರವರ ಕರೆಯ ಮೇರೆಗೆ ಇಂದು ಬುಧವಾರ ನಗರದ ಜಿಲ್ಲಾಢಳಿತ ಭವನದ ಏದಿರು ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ಮಹಾಮಂಡಲ ಜಿಲ್ಲಾ ಘಟಕ ಒಂದು ದಿನದ ಸಾಮೂಹಿಕ ಧರಣಿ ಸತ್ಯಾಗ್ರಹ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮುಖ್ಯಮಂತ್ರಿಗಳಿಗೆ ಬರೆದ ಮನವಿಯಲ್ಲಿ ಮಹಾಮಂಡಲ ಮೂರು ಪ್ರಧಾನ ಬೇಡಿಕೆಗಳನ್ನು ಮಂಡಿಸಿದೆ. ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ ೨೦೧೨ ರನ್ವಯ ಅರ್ಹ ದಿನಗೂಲಿ ನೌಕರರೆಲ್ಲರ ಹೆಸರುಗಳನ್ನು ನಾಲ್ಕು ತಿಂಗಳ ಹಿಂದೆಯೇ ಪ್ರಕಟಿಸುವಂತೆ ಅಧಿನಿಯಮದಲ್ಲಿ ನಿಗಧಿ ಮಾಡಿದ್ದರು. ಈ ವರೆಗೂ ಪ್ರಕಟಿಸದೆ. ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಇದು ಸರ್ಕಾರವೇ ತನ್ನ ಕಾನೂನುನ್ನು ತಾನೇ ಉಲ್ಲಂಘನೇ ಮಾಡಿದಂತಾಗಿದೆ. ಕೂಡಲೇ ಸರ್ಕಾರ ಎಚ್ಛೇತ್ತು ಆದಷ್ಟು ತೀವ್ರಗತಿಯಲ್ಲಿ ಎಲ್ಲಾ ನೌಕರರ ಹೆಸರುಗಳನ್ನು ಪ್ರಕಟಿಸುವಂತೆ ಒತ್ತಾಯಿಸಿದರು. 
ಅಧಿನಿಯಮ ೨೦೧೨ ಹಾಗೂ ನಿಯಮಗಳನ್ವಯ ಬಿಸಿಡಿ ದಿನಗೂಲಿ ನೌಕರರಿಗೆ ಕಳೆದ ೨೦೧೩ ರ ಫೆ.೧೩ ರಿಂದ ಜಾರಿಗೆ ಬರಬೇಕಾದ ಮೂಲ ವೇತನ, ತುಟ್ಟಿ ಭತ್ಯೆ, ಹಾಗೂ ಇತರೆ ಸೌಲಭ್ಯ ಹಾಗೂ ಬಾಕಿ ವೇತನ ವಿಳಂಬವಾಗಿದ್ದು ಅದರಲ್ಲಿ ಪಾರದರ್ಶಕತೆ ತಂದು ಆದಷ್ಟು ಬೇಗ ಪಾವತಿಗೆ ಕ್ರಮಕೈಗೊಳ್ಳಬೇಕೆಂದರು. ಅಲ್ಲದೇ ಸವೋಚ್ಛ ನ್ಯಾಯಾಲಯದ ತೀರ್ಪಿನ ಮೇರೆಗೆ ದಿನಗೂಲಿ ನೌಕರರಿಗೆ ಕಾಯಂಗೊಳ್ಳುವ ಪೂರ್ವದಲ್ಲಿ ಸಲ್ಲಿಸಿದ ೧೦ ವರ್ಷದ ಸೇವೆಗೆ ನಿವೃತ್ತ ಸೌಲಭ್ಯಗಳಿಗೆ ಪರಿಗಣನೆಗೆ ತೆಗೆದುಕೊಳ್ಳಬೇಕು ಈ ಎಲ್ಲಾ ಬೇಡಿಕೆಗಳನ್ನು ಬರುವ ಜು.೭ ರ ಓಳಗಾಗಿ ಈಡೇರಿಸದಿದ್ದಲ್ಲಿ ಮಹಾಮಂಡಲ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟಕ್ಕೆ ಮುಂದಾಗುವದಲ್ಲದೇ ಲಕ್ಷಾಂತರ ದಿನಗೂಲಿ ನೌಕರರೊಂದಿಗೆ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮಹಾಮಂಡಲ ಎಚ್ಚರಿಸಿದೆ. ಧರಣಿಯ ನೇತೃತ್ವನ್ನು ಮಹಾಮಂಡಲದ ಜಿಲ್ಲಾಧ್ಯಕ್ಷ ಶರಣಪ್ಪ ಈಳಿಗೇರಿ, ಜಿಲ್ಲಾ ಪ್ರ. ಕಾರ್ಯದರ್ಶಿ ಬಸವರಾಜ ಬೇವಿನಗಿಡ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಇಲಾಖೆಯ ದಿನಗೂಲಿ ನೌಕರರು ಧರಣಿಯಲ್ಲಿ ಭಾಗವಿಸಿದ್ದರು. 
Please follow and like us:

Leave a Reply