ರಿಯಾಯಿತಿ ದರದಲ್ಲಿ ಹೆಲ್ಮೆಟ್ಟ ವಿತರಿಸಲು ನ್ಯಾಯವಾದಿಗಳಿಂದ ಮನವಿ.

ಕೊಪ್ಪಳ-01- ಜಿಲ್ಲೆಯ ನ್ಯಾಯಾಲಯದ ನ್ಯಾಯವಾದಿಗಳ ಸಂಘದ ಸದಸ್ಯರು  ರಿಯಾಯಿತಿ ದರದಲ್ಲಿ ಹೆಲ್ಮೆಟ್ಟ ವಿತರಿಸಲು ತಮ್ಮ ಸಂಘದ ಅಧುಯಕ್ಷರಿಗೆ ಮನವಿ ಸಲ್ಲಿಸಿದರು. ದೇಶದ ಸರ್ವೊಚ್ಛ ನ್ಯಾಯಾಲಯದ ಆದೇಶದಂತೆ ಎಲ್ಲರೂ ಕಡ್ಡಾಯವಾಗಿ ದ್ವಿಚರ್ಕವಾಹನ ಸವಾರರು ಹೆಲ್ಮೆಟ್ಟ ಧರಿಸಬೇಕು ಎಂದು ಆದೇಶ ಹೊರಡಿಸಿದನ್ವಯ ನಾವುಗಳು ಸದರ ಆದೇಶವನ್ನು ಕಡ್ಡಾಯವಾಗಿ ಅನುಸರಿಸಲೇ ಬೇಎಕಾಗಿದ್ದು, ಕಾರಣ ನಾವುಗಳು ಈ ನ್ಯಾಯಾಂಗ ವ್ಯವಸ್ಥೆ ಒಂದು ಭಾಗವಾಗಿದ್ದು ನಾವುಗಳು ಸದರಿ ಆದೇಶವನ್ನು ಪಾಲಿಸಿ ಸಮಾಜಕ್ಕೆ ನಾಡಿಗೆ ಮಾದರಿಯಾಗ ಇರುವ ಸಲುವಾಗಿ ಕಡ್ಡಾಐವಾಗಿ ನಾವು ಹೆಲ್ಮೆಟ್ಟು ಧರಿಸಬೇಕಾಗಿದ್ದು, ಈ ವಿಷಯಕ್ಕೆ ಸಂಬಂದಿಸಿದಂತೆ ಸಂಘದ ಅಧ್ಯಕ್ಷರು ನಮ್ಮ ಸಂಘದ ಸರ್ವ ಸದಸ್ಯರಿಗೆ ರಿಯಾಯಿತಿ ಧರದಲ್ಲಿ ಹೆಲ್ಮೆಟ್ಟಗಳನ್ನು ವಿತರಿಸಬೆಕೆಂದು ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. ಈ ಸಂಧರ್ಭದಲ್ಲಿ ಅಧ್ಯಕ್ಷ ಆರ್.ಬಿ. ಪಾನಘಂಟಿಗೆ ಸದಸ್ಯರುಗಳಾದ ಗ್ಯಾನಪ್ಪ ರವಿ, ಮಲಿಕ್, ಧರ್ಮರಾಜ, ಶರೀಫ್ ಇತರರು ಮನವಿ ಪತ್ರ ಸಲ್ಲಿಸಿದರು.
Please follow and like us:
error