Breaking News
Home / Koppal News / ಐ.ಎ.ಎಸ್ ಹಾಗೂ ಕೆ.ಎ.ಎಸ್ ಪೂರ್ವಭಾವಿ ಪರೀಕ್ಷೆಗೆ ತರಬೇತಿ

ಐ.ಎ.ಎಸ್ ಹಾಗೂ ಕೆ.ಎ.ಎಸ್ ಪೂರ್ವಭಾವಿ ಪರೀಕ್ಷೆಗೆ ತರಬೇತಿ

 ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ  ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ವತಿಯಿಂದ  ಐ.ಎ.ಎಸ್, ಐ.ಪಿ.ಎಸ್, ಕೆ.ಎ.ಎಸ್ ಪೂರ್ವಭಾವಿ ಪರೀಕ್ಷಾ  ಅಭ್ಯರ್ಥಿಗಳಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
  ಕೇಂದ್ರ ಲೋಕಸೇವಾ ಆಯೋಗದವರು ೨೦೧೫ರ ಆಗಸ್ಟ್‌ನಲ್ಲಿ ನಡೆಸಲಿರುವ ಐ.ಎ.ಎಸ್, ಐ.ಪಿ.ಎಸ್, ಪೂರ್ವಭಾವಿ ಪರೀಕ್ಷೆಗೆ ಹಾಗೂ ಕರ್ನಾಟಕ ಲೋಕಸೇವಾ ಆಯೋಗದವರು ಏಪ್ರಿಲ್ ೧೯ ರಂದು  ನಡೆಸಲಿರುವ  ಕೆ.ಎ.ಎಸ್ ಪೂರ್ವಭಾವಿ ಪರೀಕ್ಷೆಗೆ ಮತ್ತು ಸರ್ಕಾರ ನಡೆಸುವ ಇತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ತರಬೇತಿ ನೀಡಲು ಉದ್ದೇಶಿಸಲಾಗಿದೆ.  ಆಸಕ್ತರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ’ಮುಕ್ತಗಂಗೋತ್ರಿ’ ಆವರಣದಲ್ಲಿರುವ ’ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ ದ ಕಛೇರಿಯಲ್ಲಿ ಬೆಳಗ್ಗೆ ೧೦.೦೦ ಗಂಟೆಯಿಂದ ಸಂಜೆ ೫.೦೦ ಗಂಟೆಯವರೆಗೆ ತಮ್ಮ ಹೆಸರನ್ನು ಫೆ. ೧೪ ರ ಒಳಗಾಗಿ ನೋಂದಾಯಿಸಿಕೊಳ್ಳಬಹುದು.  ಹೆಚ್ಚಿನ ವಿವರಗಳಿಗೆ ೦೮೨೧-೨೫೧೫೯೪೪ ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ: ಪಿ.ಎಸ್. ನಾಯಕ್ ಅವರು  ತಿಳಿಸಿದ್ದಾರೆ. 

About admin

Leave a Reply

Scroll To Top