ಬಡ್ಡಿ ಮಾಫಿಯಾ ನಿಯಂತ್ರಿಸಲು ಆಗ್ರಹ : ಸಿಪಿಐಎಂಎಲ್

 ಗಂಗಾವತಿ ನಗರದಲ್ಲಿ ಬೃಹತ್ತಾಗಿ ಬೆಳೆದ ಬಡ್ಡಿ ಮಾಫಿಯಾ ವಿರುದ್ಧ ಕಾನೂನು ಕ್ರಮ ಜರುಗಿಸಿ ನಿಯಂತ್ರಿಸಿ ದುಡಿಯುವ ವರ್ಗವನ್ನು ಕಾಪಾಡಬೇಕೆಂದು ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಗಂಗಾವತಿ ತಾಲೂಕಿನಲ್ಲಿ ಅಕ್ರಮ ಬಡ್ಡಿ ವ್ಯವಹಾರ ಬೃಹತ್ತಾಕಾರದಲ್ಲಿ ಬೆಳೆದಿದ್ದು, ಇದರ ಜಾಲಕ್ಕೆ ಮಧ್ಯಮ ವರ್ಗ, ಕೆಳಮಧ್ಯಮ ವರ್ಗ, ದುಡಿಯುವ ವರ್ಗಗಳ ಜನರು ಬಲಿಯಾಗುತ್ತಿದ್ದಾರೆ. ಇವರನ್ನು ರಕ್ಷಿಸಲು ಪೊಲೀಸ್ ಇಲಾಖೆ ಮತ್ತು ಆದಾಯ ತೆರಿಗೆ ಇಲಾಖೆಗಳು ಸುಮೋಟೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಬೇಕೆಂದಿದ್ದಾರೆ. 
ಬಡ್ಡಿ ಮಾಫಿಯಾದ ಮುಖಂಡರು ಸಾಲಗಾರರಿಂದ ಅನಧಿಕೃತವಾಗಿ ಆಸ್ತಿಗಳನ್ನು ನೋಂದಾಯಿಸಿಕೊಳ್ಳುತ್ತಿದ್ದಾರೆ. ಕೆಲವರು ಕನ್ನಡಕ್ಕಾಗಿ ಹೋರಾಟ ಮಾಡುವವರು ಕನ್ನಡಿಗರನ್ನೇ ಬೀದಪಾಲು ಮಾಡುತ್ತಿದ್ದಾರೆ. ಈ ಅಕ್ರಮ ಬಡ್ಡಿಕೋರರಿಂದ ಸಾರ್ವಜನಿಕರನ್ನು ಮತ್ತು ಕಾರ್ಮಿಕರನ್ನು ಎಚ್ಚರಿಸಲು ಸಿಪಿಐಎಂಎಲ್ ಪಕ್ಷ ಶೀಘ್ರದಲ್ಲಿಯೇ ಜನಾಂದೋಲನ ರೂಪದಲ್ಲಿ ಜನರ ಮಧ್ಯೆ ಬರಲಿದೆ ಎಂದು ಸಿಪಿಐಎಂಎಲ್ ಪಕ್ಷ   ತಿಳಿಸಿದೆ.
Please follow and like us:
error

Related posts

Leave a Comment