ಮಹಾದೇವ ದೇವಾಲಯದ ಊರಿನವರು ಹೆಮ್ಮೆಯಿಂದ ಹೇಳಿಕೊಳ್ಳಬೇಕು -ಶಿರೂರ

ಕೊಪ್ಪಳ, ಡಿ. ೨೬ : ಗದಗ ಹೊಸಪೇಟೆ ಮಾರ್ಗದ ಬನ್ನಿಕೊಪ್ಪದ ಹತ್ತಿರ, ಭಾನಾಪುರ ಕ್ರಾಸ್, ಮೊದಲಾದ ಕಡೆಗೆ ದೇವಾಲಯಗಳ ಚಕ್ರವರ್ತಿ ಮಹಾದೇವ ದೇವಾಲಯದ ಭಿತ್ತಿ ಚಿತ್ರ ಪ್ರದರ್ಶಿಸಿ, ನಾವು ಇಟ್ಟಿಗೆಯವರೆಂದು ಹೇಳಿಕೊಳ್ಳಬೇಕು ಎಂದು ಡಾ.ಬಿ.ವಿ. ಶಿರೂರ ಹೇಳಿದರು.
ಇಟಿಗಿ ಉತ್ಸವದ ಎರಡನೇ ದಿನ ಹಮ್ಮಿಕೊಂಡಿದ್ದ ಇಟಗಿ ಶಾಸನಗಳು ವಿಚಾರಗೋಷ್ಠಿ ಅಧ್ಯಕ್ಷ ಸ್ಥಾನದಿಂದ ಕಿವಿಮಾತು ಹೇಳಿದರಲ್ಲದೆ, ಜಿಲ್ಲಾಡಳಿತ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕ್ರಿಯಾಶೀಲಗೊಳ್ಳಬೇಕು ಎಂದರು.
ಕೊಪ್ಪಳ ಪ್ರದೇಶವೆ ಕ್ರಿಯಾಶೀಲವಾದದ್ದು, ೫ ಸಾವಿರ ವರ್ಷಗಳಿಂದ ಆದಿಮಾನ ವಾಸಿಸಿದ್ದಾನೆ. ಶಿಲಾಯುಗದ ಆಯುಧ, ಗವಿವರ್ಣ ಚಿತ್ರಗಳು, ಕಲ್ಗೋರಿಗಳು, ಅಶೋಕನ ಶಾಸನಗಳು ಸಾಕ್ಷಿಹೇಳುತ್ತವೆ. ಕಲ್ಯಾಣ ಚಾಲುಕ್ಯರ ಚಕ್ರವರ್ತಿ ಆರನೇ ವಿಕ್ರಮಾದಿತ್ಯ ಸಾವಿರ ಶಾಸನಗಳನ್ನು  ಬರೆಯಿಸಿದ್ದಾನೆ. ಆತನ ದಂಡಾಧಿಪತಿ ಮಹಾದೇವ ದಂಡನಾಯಕ ದೇವಾಲಯ ಅಲ್ಲದೆ ತಂದೆ ತಾಯಿಯರಿಗಾಗಿ ದೇವಾಲಯ ಹಾಗೂ ಅಗ್ರಹಾರಕ್ಕಾಗಿ ಬೆಣ್ಣೆಕಲ್ಲು ಗ್ರಾಮ ದತ್ತಿ ಬಿಟ್ಟಿದ್ದಾನೆ ಎಂದು ಹಿಂದಿನ ಇತಿಹಾಸವನ್ನು ಶಾಸನಗಳ ಆಧಾರದಿಂದ ಎಚ್.ಎಸ್.ಪಾಟೀಲರು ವಿವರವಾಗಿ ತಿಳಿಸಿದರು.
ಶೈವಧರ್ಮದ ದೇವಾಲಯ ಮುಂದೆ ಮತಧರ್ಮಗಳ ಒತ್ತಡದಿಂದ ಅಗ್ರಹಾರ ಹಾಳಾಗಿ ವಿದ್ಯಾಕೇಂದ್ರ ನಶಿಸಿಹೋಗಿರಬೇಕೆಂದು ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿಯವರು ಅಭಿಪ್ರಾಯ ಮಂಡಿಸಿದರು.
ಸ್ಥಳೀಯ ನಿವೃತ್ತ ಶಿಕ್ಷಕ ಬಸವರಾಜ ಹಳ್ಳಿಯವರು ಮಹಾದೇವ ದೇವಾಲಯದ ಒಂದೊಂದು ಕುಸುರಿ ಕಲೆಯನ್ನು ಸ್ಪೂರ್ತಿಯಿಂದ ತಿಳಿಸಿಕೊಟ್ಟರು. ಪ್ರಾಚಾರ್ಯ ಸಿ.ವಿ. ಜಡಿಯವರು ನಿರೂಪಿಸಿ ವಂದನಾರ್ಪಣೆ ಸಲ್ಲಿಸಿದರು.
Please follow and like us:
error