ನಾಳೆಯಿಂದ ಹೈದ್ರಾಬಾದ್ ಕರ್ನಾಟಕ ಸಾಹಿತ್ಯ ಸಮಾವೇಶ

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗಂಗಾವತಿ ನಾಳೆಯಿಂದ 2 ದಿನಗಳ ಹೈದ್ರಾಬಾದ್ ಕರ್ನಾಟಕ ಸಾಹಿತ್ಯ ಸಮಾವೇಶ ಹಮ್ಮಿಕೊಂಡಿದೆ. ಕೊಪ್ಪಳ ಹಾಗೂ ಗಂಗಾವತಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್  ಘಟಕಗಳು ನಿಷ್ಕ್ರೀಯವಾಗಿವೆ. ಕೆಲಸ ಮಾಡುತ್ತಿಲ್ಲ ಎನ್ನುವ ಆರೋಪ ಇತ್ತು. ಪದಾಧಿಕಾರಿಗಳ ಮುಸುಕಿನ ಗುದ್ದಾಟದಿಂದಾಗಿ ತಾಲೂಕ ಸಮ್ಮೇಳನಕ್ಕಾಗಿ ಬಂದಿದ್ದ ಹಣ ವಾಪಸ್ ಹೋಗಿದೆ ಎನ್ನಲಾಗುತ್ತಿದೆ.
ಇವೆಲ್ಲವನ್ನೂ ಮೀರಿ ಗಂಗಾವತಿ ಕಸಾಪ ಘಟಕ ಹೈದ್ರಾಬಾದ್ ಕರ್ನಾಟಕ ಸಾಹಿತ್ಯ ಸಮಾವೇಶ ಹಮ್ಮಿಕೊಂಡಿದೆ
ಬನ್ನಿ ಪಾಲ್ಗೊಳ್ಳಿ …

Leave a Reply