ಮನುಷ್ಯನ ವಿಕಾಸದ ಸೆಲೆ ರಂಗಭೂಮಿ; ವಿಠ್ಠಪ್ಪ ಗೋರಂಟ್ಲಿ

ಘಾಸಿಗೊಂಡ ಹೃದಯಕ್ಕೆ ರಂಗಭೂಮಿ ಜೀವ ಸಂಜೀವಿನಿಯಾಗಿ ಮಿಡಿಯಬಲ್ಲದು ಅಲ್ಲದೆ ಮನುಷ್ಯನ ವಿಕಾಸದ ಸೆಲೆ ಇರುವುದೇ ರಂಗಭೂಮಿ ಶೋಧನೆಯಿಂದ ಎಂದು ವಿಠ್ಠಪ್ಪ ಗೋರಂಟ್ಲಿ ಅವರು ಕರ್ನಾಟಕ ನಾಟಕ ಅಕಾಡಮಿ ಬೆಂಗಳೂರು ಮತ್ತು ವಿಸ್ತಾರ್ ಥಿಯೇಟರ್ ಕೊಪ್ಪಳ ಸಹಯೋಗದಲ್ಲಿ  ವಿಶೇಷ ಘಟಕ ಮತ್ತು ಗಿರಿಜನ ಯೋನನೆಯಡಿ ೧೫ದಿನಗಳ ರಂಗತರಬೇತಿ ಶಿಬಿರವನ್ನು ವಿಸ್ತಾರ್ ಭಾಂಧವಿ ಕ್ಯಾಂಪಸ್ ನಲ್ಲಿ ಉದ್ಘಾಟಿಸಿ ಮಾತನಾಡುತಾ ಕರ್ನಾಟಕ ನಾಟಕ ಅಕಾಡಮಿಯು ಹರಿಜನ ದಲಿತರಿಗಾಗಿಯೇ ಈ ಶಿಬಿರವನ್ನು ಸಂಘಟಿಸಿ ಅವರಲ್ಲಿನ ಸುಪ್ತ ಪ್ರತಿಭೆಯನ್ನು ರಂಗಭೂಮಿಯ ಮೂಲಕ ಹೊರತರುವುದಾಗಿದೆ ಎಂದರು. ಕರ್ನಾಟಕ ನಾಟಕ ಅಕಾಡಮಿ ಸದಸ್ಯರಾದ ರಂಗವಿಜ್ಞಾನಿ ಹಾಲ್ಕುರಿಕೆಶಿವಶಂಕರ್ ಮಾತಾನಾಡುತ್ತಾ ಇಂದಿನ ಜಾಗತಿಕ ಜಗತ್ತು ಜನರನ್ನು ಗೊಂದಲಗೊಳಿಸುತ್ತಾ. ಹಿಂಸೆಯತ್ತ ಚಲಿಸುವಂತೆ ಮಾಡುತ್ತಿದೆ.ಆದರೆ ರಂಗಭೂಮಿಯು ಚಿಕಿತ್ಸೆಯ ರೂಪದಲ್ಲಿ   ಜನರ ಹೃದಯದೊಳಗೆ ಮನುಷ್ಯತ್ವದ ಕಿರಣಗಳನ್ನು ಚುಮುಕಿಸುತ್ತಿದೆ ಎಂದರು.ಶಿಬಿರದ ನಿರ್ದೇಶಕರಾದ ರೇಣುಕಾ ಮಾತಾನಾಡುತ್ತ ದಲಿತ ಕಲೆಯು ಪುರಾತನವಾದುದ್ದು.ಮತ್ತು ಜಾನಪದೀಯವಾದುದ್ದು,ಪ್ರತಿಗಾಮಿಗಳು ದಲಿತಕಲೆಯುನ್ನು ಕಬಳಿಸಿ ದಲಿತರನ್ನು ಬೀದಿಗೆ ಬಿಟ್ಟರು. ಸರ್ಕಾರದ ಯೋಜನೆಗಳಿಂದ ಈ ಕಲೆಯನ್ನು ಉಳಿಸಿ ಬೆಳಸುವ ಕೆಲಸ ಮಾಡಬೇಕಾಗಿದೆ ಎಂದರು. ಪಿಎಸ್‌ನಾಝರ್ ಮಾತಾಡುತ್ತ  ರಂಗಭೂಮಿಯೊಳಗಿನ ಜ್ಞಾನವು ಮನುಷ್ಯರಲ್ಲಿ ವಿನೂತನವಾದ ಕಾಲ್ಪನಿಕಶಕ್ತಿಯನ್ನು ವರ್ಧಿಸುತ್ತದೆ ಎಂದರು. ವಿಸ್ತಾರ ಥಿಯೇಟರ ಸಂಚಲಾಕಿ ಶೀಲಾ ಹಾಲ್ಕುರಿಕೆ, ಬಾಂಧವಿಯ ಶೈಲಾಜಗೋಪಿನಾಥ್, ಉಪಸ್ತಿತರಿದ್ದರು.ಯೋಸೆಪ್ ಢಣಾಪುರ ನಿರೂಪಿಸಿದರು, ಸುಂಕಪ್ಪ ಮೀಸೆ ಸ್ವಾಗತಿಸಿದರು. ಸುಭಾಸಚಂದ್ರಬಂಡಿ ವಂದಿಸಿದರು.

Leave a Reply