ಕುವೆಂಪು ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಕನಕದಾಸರ ಜಯಂತಿ

 ಕೊಪ್ಪಳ : ತಾಲೂಕಿನ ಬೂದುಗುಂಪ  ಕುವೆಂಪು ಶಾಲೆಯಲ್ಲಿ  ಮಕ್ಕಳ ದಿನಾಚರಣೆ ಹಾಗೂ ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
 ಅಧ್ಯಕ್ಷತೆಯನ್ನು  ಕುವೆಂಪು ಶಾಲೆಯ ಶಾಲಾ ಸಂಸತ್ತಿನ ಪ್ರಧಾನ ಮಂತ್ರ್ರಿಯಾದ ಕುಮಾರಿ ವಿಜಯಲಕ್ಷ್ಮಿ ಕರಡಿ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಮಕ್ಕಳು ವಿವಿಧ ಮಹಾನ ವ್ಯಕ್ತಿಗಳ ವೇಷಧರಿಸಿ ಗಮನ  ಸೆಳೆದರು. ಗಾಂಧೀಜಿ ವೇಷದಲ್ಲಿ ಕಿರಣ ಹೊಸೂರು ಕನಕದಾಸರ ವೇಷದಲ್ಲಿ ಮಂಜುನಾಥ ಹೊಳೆಯಾಚೆ, ರೈತನ ವೇಷದಲ್ಲಿ ರಮೇಶ  ಗುರಿಕಾರ, ಅಕ್ಕಮಹಾದೇವಿ ವೇಷದಲ್ಲಿ ಲಕ್ಷ್ಮಿ ಕುಂಬಾರ, ಶಕುಂತಲೆ ವೇಷದಲ್ಲಿ ಶ್ರೀದೇವಿ ಹೊಸೂರು, ರಾಧಾಕೃಷ್ಣಾ ವೇಷದಲ್ಲಿ  ಸಿಮ್ರಾನ್ ಬೆಳಗುರ್ಕಿ, ಕಾರ್ತಿಕಗೌಡ ಪಾಟೀಲ, ಲಂಬಾಣಿ ವೇಷದಲ್ಲಿ ಪೂಜಾ ಗೊಬ್ಬಿ,  ಭುವನೇಶ್ವರಿ ವೇಷದಲ್ಲಿ ಭೂಮಿಕಾ ಶ್ಯಾವಿ, ಸ್ವಾಮಿವಿವೇಕಾನಂದರ ವೇಷದಲ್ಲಿ ಕಾರ್ತಿಕ ಹಿರೇಮಠ, ಅಂಬೇಡ್ಕರ ವೇಷದಲ್ಲಿ ನವಿನ ಶಿವಪೂರ,  ಚಂದ್ರಶೇಖರ ಅಜಾದ ವೇಷದಲ್ಲಿ ಅಜಯ್  ಚನ್ನದಾಸರು ಕಿತ್ತೂರ ಚನ್ನಮ್ಮ ವೇಷದಲ್ಲಿ ನಂದಿನಿ ಕರಡಿ, ಒಣಕೆ ಓಬವ್ವ ವೇಷದಲ್ಲಿ ಭೂಮಿಕಾ ಹೆಮ್ಮಿ, ಬಸವೇಶ್ವರ ವೇಷದಲ್ಲಿ ರವಿ ಕೆಂಗೇರಿ, ಚಾರ್‍ಲಿ ಚಾಪ್ಲಿನ್ ವೇಷದಲ್ಲಿ ಮಂಜುನಾಥ ಪೂಜಾರ, ಸರದಾರ ವಲ್ಲಬಬಾಯಿ ಪಟೇಲ್ ವೇಷದಲ್ಲಿ ಕಿರಣ ಈಳಿಗೇರ, ಕುವೆಂಪು ವೇಷದಲ್ಲಿ ಅಕ್ಷಯ  ಜವಾಹರಲಾಲ್ ನೇಹರು ವೇಷದಲ್ಲಿ  ಮಂಜುನಾಥ ಜಬ್ಬಲಗುಡ್ಡ  ಹೀಗೆ  ಮಕ್ಕಳು ವಿವಿಧ ಮಹಾನ ವ್ಯಕ್ತಿಗಳ ವೇಷಧರಿಸಿ ಗಮನ  ಸೆಳೆದರು.
  ನಾಗೇಶನಹಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ  ಮುಖ್ಯೋಪಾಧ್ಯಾಯರಾದ ರಾಚಪ್ಪ ಹಾಲಬಾವಿ ಸಂಸ್ಥೆಯ ಮುಖ್ಯಸ್ಥರಾದ ಶಿವನಗೌಡ ಪಾಟೀಲ ಮುಂತಾದವರು  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Please follow and like us:

Related posts

Leave a Comment