fbpx

ನಮೋ ಅಲೆಯಿಂದ ಬಿಜೆಪಿಗೆ ವ್ಯಾಪಕ ಬೆಂಬಲ-ಸಂಗಣ್ಣ ಕರಡಿ

 ದೇಶಾಧ್ಯಂತ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಲೆಯಿಂದ ಇಂದು ವ್ಯಾಪಕ ಬೆಂಬಲ ಬಿಜೆಪಿ ದೊರೆಯುತ್ತಿದ್ದು ಇದರಿಂದ ಈ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಹೆಚ್ಚು ಅನುಕೂವಾಗಿ ಕೇಂದ್ರ ದಲ್ಲಿ ಬಿಜೆಪಿ ನೇತೃತ್ವದಲ್ಲಿ ಸರಕಾರ ರಚನೆಗೊಂಡು ನರೇಂದ್ರ ಮೋದಿಯವರು ಪ್ರಧಾನಿಯಾಗುವುದು ಶತಸಿದ್ಧ ಎಂದು ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಅಭಿಪ್ರಾಯಪಟ್ಟರು. 

   ಅವರು ಶುಕ್ರವಾರದಂದು ರೇಲ್ವೆ ಸ್ಟೇಶನ್ ಏರಿಯಾದಲ್ಲಿ ಕೆಲ ಮುಖಂಡರಗಳ ಮನೆಗೆ ಭೇಟಿ ನೀಡಿ ನಂತರ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದ  ಅವರು ಮೋದಿ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇದು ಒಳ್ಳೆಯ ಬೆಳವಣಿಗೆಯಾಗಿದೆ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಂದ ಈ ರಾಜ್ಯವನ್ನು ಮುಂದುವರೆಸಿಕೊಂಡು ಹೋಗಲು ಸಾಧ್ಯವಿಲ್ಲ ಕೇವಲ ೯ ತಿಂಗಳ ಅವಧಿಯಲ್ಲಿಯೇ ನಾಡಿನ ಸಾಮಾನ್ಯ ವರ್ಗದ ಜನರ ವಿಶ್ವಾಸ ಗಳಿಸುವಲ್ಲಿ ವಿಫಲ ಗೊಂಡಿದೆ ಎಂದರು. 
ಸೇರ್ಪಡೆ : ಇದೇ ಸಂದರ್ಭದಲ್ಲಿ ಕಿನ್ನಾಳ ಕಾಂಗ್ರೆಸ್ ಧುರೀಣೆ ಬಸಮ್ಮ ಪೂಜಾರ್ ಅವರ ಅಪಾರ ಬೆಂಬಲಿಗರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು.
 ಈ ಸಂದರ್ಭದಲ್ಲಿ ಕೊಪ್ಪಳ ನಗರಸಭೆ ಮಾಜಿ ಅಧ್ಯಕ್ಷ ಗವಿಸಿದ್ದಪ್ಪ ಕಂದಾರಿ, ವಿರೂಪಾಕ್ಷಯ್ಯ ಗದಗಿನಮಠ, ಸಿದ್ಧಲಿಂಗಯ್ಯಸ್ವಾಮಿ ಹಿರೇಮಠ,ಮಲ್ಲಪ್ಪ ಬೇಲೇರಿ, ಹಾಲೇಶ ಕಂದಾರಿ,ಸಹ ಮಾಧ್ಯಮ ವಕ್ತಾರ ಪರಮಾನಂದ ಯಾಳಗಿ ,ಗವಿಸಿದ್ದಪ್ಪ ಕರ್ಕಿಹಳ್ಳಿ, ಲಲಿತಾ ನಾಯಕ್, ಮರ್ದಾನಸಾಬ ಕಾತರಿಕಿ, ಚಂದ್ರಶೇಖರ ಪ್ರಭುಶೆಟ್ಟರ್, ಬಸಪ್ಪ ಹಡಪದ ಹಲಗೇರಿ, ಬಸವರಾಜ್ ನೀರಲಗಿ,ರಮೇಶ ಹೂಗಾರ್, ದೊಡ್ಡ ಯಲ್ಲಪ್ಪ, ನಿಂಗೇಶ ಗೊಂಡಬಾಳಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.
Please follow and like us:
error

Leave a Reply

error: Content is protected !!