ಯೋಗ ಶಿಬಿರ ನಿಜವಾದ ಸಾಮಾಜಿಕ ಕಳಕಳಿ-ಹಿರೇಮಠ

ಕೊಪ್ಪಳ. ನ. ೨೪. ಉಚಿತವಾಗಿ ಯೋಗ ಶಿಬಿರ ನಡೆಸುತ್ತಿರುವದು ನಿಜವಾದ ಸಾಮಾಜಿಕ ಕಾಳಜಿಯನ್ನು ತೋರಿಸುತ್ತದೆ, ಪತಂಜಲಿ ಸಮಿತಿ ಸದಸ್ಯರು ಅಬಿನಂದನಾರ್ಹರು ಎಂದು ವಿನೂತನ ಶಿಕ್ಷಣ ಸೇವಾ ಸಂಸ್ಥೆ ಅಧ್ಯಕ್ಷ ಸಿದ್ದಲಿಂಗಯ್ಯ ಹಿರೇಮಠ ಅಭಿಪ್ರಾಯಪಟ್ಟರು.
ಅವರು ಕೊಪ್ಪಳ ನಗರದ ಕಿತ್ತೂರ ಚನ್ನಮ್ಮ ವೃತ್ತದಲ್ಲಿರುವ ಶ್ರೀ ಪ್ಯಾಟಿ ಈಶ್ವರ ದೇವಸ್ಥಾನದಲ್ಲಿ ನವೆಂಬರ್ ೨೪ ರಿಂದ ಸಂಜೆ ೫.೩೦ ರಿಂದ ೭ ಗಂಟೆವರೆಗೆ ಮಹಿಳೆಯರಿಗಾಗಿ ನಡೆಯುತ್ತಿರುವ ಉಚಿತ ಪತಂಜಲಿ ಯೋಗ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಆನರಿಗೆ ಆರೋಗ್ಯ ಕಾಪಾಡಿಕೊಳ್ಳಲು, ಉಚಿತವಾಗಿ ಸಲಹೆ ಸೂಚನೆ ನೀಡುವ ಜೊತೆಗೆ ಯೋಗ ಕಲಿಸುವದು ಉತ್ತಮ ಕಾರ್ಯ, ಇಂಥಹ ಶಿಬಿರಗಳಿಗೆ ಸಹಾಯ ಸಹಕಾರ ನೀಡುವದಾಗಿ ಹೇಳಿದರು. ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೆಇಬಿ, ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ಉಪಾಧ್ಯಕ್ಷ ಮಲ್ಲಪ್ಪ ಬೇಲೂರ, ನಗರಸಭೆ ಮಾಜಿ ಸದಸ್ಯ ಅಶೋಕ ಬಜಾರಮಠ, ಪತ್ರೆಪ್ಪ ಪಲ್ಲೇದ, ಭೀಮಸೇನ ಮೇಘರಾಜ, ದೇವೇಂದ್ರಸಾ, ಉಮಾ ಕೊರ್ಲಹಳ್ಳಿ, ವೆಂಕಟೇಶ ಜೋಷಿ, ಶಾರದಾ ಪಲ್ಲೇದ, ಪ್ರೇಮಾ ಪಲ್ಲೇದ, ಹಂಪಮ್ಮ ಮೈನಳ್ಳಿ ಇತರರಿದ್ದರು.    ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್‌ಗಳ ಆಶ್ರಯದಲ್ಲಿ ಐದು ದಿನಗಳ ಕಾಲ ಹೊಸಪೇಟೆಯ ಪತಂಜಲಿ ಮಂಡಲ ಪ್ರಭಾರಿ ದಾಕ್ಷಾಯಣಿಯವರು ಮಹಿಳೆಯರಿಗೆ ಯೋಗ ತರಬೇತಿ ನೀಡುವರು. ಮಹಿಳೆಯರಿಗೆ ಇರುವ ಸಾಮಾನ್ಯ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಂಡು ಉತ್ತಮ ಜೀವನ ನಡೆಸುವ ಸೂತ್ರಗಳನ್ನು ಹೇಳಿಕೊಡಲಿದ್ದಾರೆ. ಶಿಬಿರ ಸಂಪೂರ್ಣ ಉಚಿತವಾಗಿದ್ದು, ಶಿಬಿರಾರ್ಥಿಗಳು ಆಸನ ಮಾಡಲು ಬೆಡ್‌ಶೀಟ್ ಮಾತ್ರ ತರಬೇಕು.

Please follow and like us:
error