You are here
Home > Koppal News > ರಕ್ತದಾನ ಶಿಬಿರ

ರಕ್ತದಾನ ಶಿಬಿರ

       ಕೊಪ್ಪಳ. ದಿನಾಂಕ ೨೧/೦೪/೨೦೧೫  ಮಂಗಳವಾರದಂದು ಯಲಬುರ್ಗ ತಾಲೂಕಿನ ಬಂಡಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಸಕಲ ಸದ್ಭಕ್ತಾದಿಗಳು ಇವರ ಸಹಯೋಗದಲ್ಲಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೊಪ್ಪಳದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
     ಯಲಬುರ್ಗ ತಾಲೂಕಿನ ಬಂಡಿ ಗ್ರಾಮದ ಗ್ರಾಮ ಪಂಚಾಯಿತಿ ಕಾಂಪ್ಲೇಕ್ಸ್‌ನಲ್ಲಿ ದಿನಾಂಕ ೨೧/೦೪/೨೦೧೫   ಬೆಳೆಗ್ಗೆ ೧೦:೦೦ ರಿಂದ ೫:೦೦ ರವರೆಗೆ ಶಿಬಿರ ಜರುಗಲಿದ್ದು ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ಆಗಮಿಸಿ ರಕ್ತದಾನ ಮಾಡಬೇಕೆಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಡಾ. ಶ್ರೀನಿವಾಸ ಹ್ಯಾಟಿ ಕೋರಿದ್ದಾರೆ.

Leave a Reply

Top