You are here
Home > Koppal News > ನಿವೇದಿತಾ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಾರ್ಷಿಕೊತ್ಸವ

ನಿವೇದಿತಾ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಾರ್ಷಿಕೊತ್ಸವ

ನಿವೇದಿತಾ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶ್ರೀ ವಿಠಲ ಮಾದರಿ ನಗರ ಹಾಗೂ ಶ್ರೀ ಮಹೇಶ್ವರ ದೇವಾಸ್ಥಾನ ಕೊಪ್ಪಳದ ೧೩ನೇ ಶಾಲಾ ವಾರ್ಷಿಕೊತ್ಸವ ಸಮಾರಂಭ ದಿನಾಂಕ:೧೦/೦೧/೨೦೧೪ರಂದು ನಡೆಯಿತು. ವಾರ್ಷಿಕೊತ್ಸವದ ನಿಮಿತ್ಯ ಮಕ್ಕಳಿಗೆ ಕ್ರೀಡೆಗಳನ್ನು ಏರ್ಪಡಿಸಿ ಅದೆ ವಾರ್ಷಿಕೊತ್ಸವದ ದಿನದಂದು ಬೆಳಿಗ್ಗೆ ೦೯ಗಂಟೆಗೆ ಸರಸ್ವತಿ ಪೂಜಾ ಸಮಾರಂಭ ನೆರವೇರಿಸಿ ಮಕ್ಕಳಿಗೆ ಬಹುಮಾನ ವಿತರಣೆ ಮಾಡಳಾಯಿತು. ಬೆಳಗಿನ ಕಾರ್ಯಕ್ರಮದ ಅದ್ಯಕ್ಷತೆಯನ್ನು ಶ್ರೀಮತಿ ನಸೀಮಾಬೇಗಂ ಸೊಂಪುರ ಸದಸ್ಯರು ನಗರಸಭೆ ಕೊಪ್ಪಳ, ಉದ್ಘಾಟನೆಯನ್ನು  ವೆಂಕನಗೌಡ್ರ ಹಿರೇಗೌಡ್ರ ಸದಸ್ಯರು ಕೊಪ್ಪಳ ಜಿಲ್ಲಾ ಅನುದಾನ ರಹಿತ ಶಾಲಾ ಒಕ್ಕೂಟ ಕೊಪ್ಪಳ, ಮುಖ್ಯ ಅತಿಥಿಗಳಾಗಿ ಪಿ.ಡಿ.ಬಡಿಗೇರ ನಿವೃತ್ತ ಮುಖ್ಯೋಪಾದ್ಯಾಯರು ಶ್ರೀ.ಗ.ಪ್ರೌ.ಶಾಲೆ ಕೊಪ್ಪಳ ಹಾಗೂ ವೆಂಕಟೇಶ ಪುಲಸ್ಕರ ಸಂಸ್ಥಾಪಕ ಕಾರ್ಯದರ್ಶಿಗಳು ನಿವೇದಿತಾ ವಿದ್ಯಾಸಂಸ್ಥೆ ಕೊಪ್ಪಳ ಇವರು ವಹಿಸಿದ್ದರು.

                  ಸಾಯಂಕಾಲದ ಸಾಂಸ್ಕೃತಿಕ ಕಾರ್ಯಕ್ರಮಗಳ ಅದ್ಯಕ್ಷತೆಯನ್ನು ಶ್ರೀಮತಿ ಲತಾ ವೀರಣ್ಣ ಸಂಡೂರು ಅದ್ಯಕ್ಷರು ನಗರಸಭೆ ಕೊಪ್ಪಳ ಉದ್ಘಾಟಕರಾಗಿ ಅಮ್ಜದ್ ಪಟೇಲ್ ಉಪಾದ್ಯಕ್ಷರು ನಗರಸಭೆ ಕೊಪ್ಪಳ ಹಾಗೂ ಡಾ. ಮಹೇಶ ಗೋವನಕೊಪ್ ವೈದ್ಯರು ಅಕ್ಷಯ ಮೆಟರ್ನಿಟಿ ಆಸ್ಪತ್ರೆ ಕೊಪ್ಪಳ ಮುಖ್ಯ ಅತಿಥಿಗಳಾಗಿ ಶ್ರೀಮತಿ ರೇಣುಕಾ ಕಲ್ಲಾಕ್ಷೆಪ್ಪ ಪೂಜಾರ ಸದಸ್ಯರು ನಗರಸಭೆ ಕೊಪ್ಪಳ,  ರಾಘವೇಂದ್ರ ಪಾನಘಂಟಿ ಜಿಲ್ಲಾಧ್ಯಕ್ಷರು ಅನುದಾನ ರಹಿತ ಶಾಲಾ ಸಂಸ್ಥೆಗಳ ಒಕ್ಕೂಟ ಕೊಪ್ಪಳ,  ವಿ.ಎಂ.ಬೂಸನೂರಮಠ ಸರ್ಕಾರಿ ನಿಯೋಜಿತ ವಕೀಲರು, ಮತ್ತು ಶ್ರೀಮತಿ ಶಾರದಾ ಬಾಯಿ ವೆಂಕಟೇಶ ಪುಲಸ್ಕರ್ ಇವರು ಭಾಗವಹಿಸಿದ್ದರು, ಶಾಲೆಯ ಎಲ್.ಕೆ.ಜಿ. ಮಕ್ಕಳಿಂದ ೧೦ನೇ ತರಗತಿಯ ಮಕ್ಕಳವರೆಗೂ ನೃತ್ಯದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ಕೊಟ್ಟರು. ವಾರ್ಷಿಕೋತ್ಸವದ ಸಮಾರಂಭದ ಸಂತೋಷದಲ್ಲಿ ಮತ್ತೊಂದು ಸಂತೋಷದ ವಿಷಯವಾಗಿ ಸರ್ಕಾರ ನಡೆಸುವ ಪ್ರತಿಭಾ ಕಾರಂಜಿ ಸ್ಪರ್ದೆಯಲ್ಲಿ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಶಾಲೆಯ ವಿದ್ಯಾರ್ಥಿಗಳು ರಸಪ್ರಶ್ನೆ ಸ್ಪರ್ದೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

Leave a Reply

Top