You are here
Home > Koppal News > ಉತ್ತಮ ಪಲಿತಾಂಶ ಪಡೆದು ಸರ್ಕಾರದ ಋಣ ತೀರಿಸಿ – ಅಮರೇಶ ಕುಳಗಿ

ಉತ್ತಮ ಪಲಿತಾಂಶ ಪಡೆದು ಸರ್ಕಾರದ ಋಣ ತೀರಿಸಿ – ಅಮರೇಶ ಕುಳಗಿ

ಕೊಪ್ಪಳ – ೨೧ ಸರ್ಕಾರವು ಮಕ್ಕಳು ವಿಧ್ಯಾಭ್ಯಾಸದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ವಿಧ್ಯಾರ್ಥಿUಳು ಶಿಕ್ಷಣ ಪಡೆಯಲಿಕ್ಕಾಗಿ ಅನೇಕ ಮೂಲಭೂತ ಯೋಜನೆಗಳನ್ನು ಜಾರಿಗೆ ತಂದಿದ್ದು  ಅದರ ಸದುಪಯೋಗ ಪಡೆದುಕೊಂಡು ವಿಧ್ಯಾರ್ಥಿಗಳು ಉತ್ತಮ ಪಲಿತಾಂಶ ಪಡೆದು  ಸರ್ಕಾರ ಋಣ ತೀರಿಸಬೇಕೆಂದು ಜಿಲ್ಲಾ ಪಂಚಾಯತ ಅಧ್ಯಕ್ಷ ಅಮರೇಶ ಕುಳಗಿ ಹೇಳಿದರು.
ಅವರು ಶುಕ್ರವಾರ ನಗರದ ಬನ್ನಿಕಟ್ಟಿ ಸರ್ಕಾರಿ ಪ್ರೌಡ ಶಾಲೆ ಮತ್ತು ಆದರ್ಶ ವಿಧ್ಯಾಲಯದ ಸಂಯುಕ್ತ ಆಶ್ರಯದಲ್ಲಿ ನಡೆದ ೨೦೧೪-೧೫ ಸಾಲಿನ ಸರ್ಕಾರದ ಉಚಿತ ಸೈಕಲ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಧ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತನಾಡುತ್ತ ಸರ್ಕಾರವು ಗ್ರಾಮೀಣ ಮಟ್ಟದಲ್ಲಿ ವಿಧ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲೆಗೆ ಬರಲು ಆಗುತ್ತಿರುವ ತೊಂದರೆಗಳನ್ನು ಗಮನಿಸಿ ವಿದ್ಯಾರ್ಥಿಗಳಿಗೆ ಸೈಕಲ್ ಯೋಜನೆ ಜಾರಿಗೆ ತಂದಿದೆ ವಿಧ್ಯಾರ್ಥಿಗಳು ಪಡೆದ ಸೈಕಲ್‌ನ್ನು  ಉತ್ತಮವಾಗಿ ಬಳೆಸಿಕೊಳ್ಳಬೇಕು ವಿಧ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಶಿಕ್ಷಕರಿಗೆ ಪಾಲಕರಿಗೆ ಮಾದರಿ ವಿಧ್ಯಾರ್ಥಿಗಳಾಗಬೇಕು ದೇಶದಲ್ಲಿ ನಡೆಯುತ್ತಿರುವ ಸ್ವಚ್ಛತಾ ಅಭಿಯಾನ ಕ್ರಾರ್ಯಕ್ರಮದಲ್ಲಿ ಪಾಲ್ಗೊಂಡು ವ್ಯಯತ್ತಿಕ ಸ್ವಚ್ಛತೆ ಜೊತೆಗೆ ನಿಮ್ಮ ಸುತ್ತಮುತ್ತಾ ಇರುವ ಪರಿಸರ ಸ್ವಚ್ಛವಾಗಿಟ್ಟುಕೊಂಡು ವಿಧ್ಯಾರ್ಥಿಗಳು ಸಮಾಜಕ್ಕೆ ಮಾದರಿಯಾಗಬೇಕು  ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಅಲ್ಲದೇ ಜಿಲ್ಲಾ ಪಂಚಾಯತ್ ಕೈಗೊಂಡಿರುವ ಬಯಲು ಮುಕ್ತ ಶೌಚಾಲಯ ಅಭಿಯಾನದಲ್ಲಿ ಯಾರು ತಮ್ಮ ಮನೆಯಲ್ಲಿ ಶೌಚಾಲಯ ಹೊಂದಿಲ್ಲವೊ ಅಂತವರು ತಮ್ಮ ಪಾಲಕರ ಮನವೋಲಿಸಿ ಸರ್ಕಾರದ ಅನುಧಾನ ಪಡೆದು ಶೌಚಾಲಯ ನಿರ್ಮಿಸಿಕೊಳ್ಳಬೇಕು ಮಕ್ಕಳು ಉತ್ತಮ ಶಿಕ್ಷಣ ಪಡೆದು ಒಳ್ಳೆಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಪರಮಾನಂದ ಯಾಳಗಿ ಮಾತನಾಡಿ ವಿಧ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ೨೦೦೬ರಲ್ಲಿ ಈ ಯೋಜನೆ ಜಾರಿಗೆ ತಂದಿದ್ದು ಸರ್ಕಾರವು ವಿಧ್ಯಾರ್ಥಿಗಳಿಲ್ಲಿ ಶಿಕ್ಷಣ ಅಭಿವೃದ್ದಿಗಾಗಿ ಕ್ಷೀರಬಾಗ್ಯ, ಬಿಸಿಊಟ, ಸಮವಸ್ತ್ರ, ಉಚಿತ ಪಠ್ಯಪುಸ್ತಕ, ವಿಧ್ಯಾರ್ಥಿ ವೇತನ, ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಕೂಡ ಗ್ರಾಮೀಣ ಭಾಗದಲ್ಲಿ ಬಡತನದ ನೆಪದಲ್ಲಿ ಜನರು ಗುಳೆಹೊಗುತ್ತಿರುವದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿತ್ತಿದ್ದಾರೆ ಜನರಲ್ಲಿ ಜಾಗೃತಿ ಮೂಡಿಸಿ ಶಿಕ್ಷಣದ ಮಹತ್ವ ತಿಳಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಪಾಲಕರು ಮುಂದಾಗಬೇಕು ಎಂದು ಹೇಳಿ ಶಾಲೆಯಲ್ಲಿ ಅಪೂರ್ಣಗೊಂಡಿರುವ ಕಂಪೌಂಡನ್ನು  ಪೂರ್ಣಗೊಳಿಸಲು ಜಿಲ್ಲಾ ಪಂಚಾಯತನಿಂದ ಶಿಕ್ಷಣ ಇಲಾಖೆಗೆ ಒತ್ತಡ ತಂದು ಶಾಲೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಅಧ್ಯಕ್ಷರಲ್ಲಿ ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಪ್ರಾಣೇಶ ಮಹೇಂದ್ರಕರ್, ಜನಹಿತ ವೇದಿಕೆ ಅಧ್ಯಕ್ಷ ಬಸವರೆಡ್ಡಿ ಬೆಳವಿನಾಳ, ಶಿಕ್ಷಣ ಸಂಯೋಜಕ ಎಸ್.ಬಿ.ಕುರಿ, ಯಲಬುರ್ಗಾ ಕ್ಷೇತ್ರಶಿಕ್ಷಣಾಧೀಕಾರಿ ಬಸವರಾಜಸ್ವಾಮಿ, ಡಿ.ವೈ.ಪಿ.ಸಿ. ಶರಣಪ್ಪ ಗುಡ್ಲಾನೂರ, ಮುಖ್ಯೋಪಧ್ಯಾಯರಾದ ಕೆ.ಮಹಾಂತೇಶ, ತಾಹೇರಾ ಬೇಗಂ, ಶ್ರೀನಿವಾಸ ಕುಲಕರ್ಣಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು ಪ್ರಾರಂಭದಲ್ಲಿ ಸೌಜನ್ಯ ವಾಣಿಪ್ರದಾ ಸ್ವಾಗತಿಸಿದರು, ರೋಹಿಣಿ ಜಿ ಕಾರ್ಯಕ್ರಮ ನಿರೂಪಿಸಿದರೆ, ಜಯರಾಜ್ ಬೂಸದ್ ಕೊನೆಯಲ್ಲಿ ವಂದನೆಗೈದರು, ಕಾರ್ಯಕ್ರಮದ ನಂತರ ವಿಧ್ಯಾರ್ಥಿಗಳಿಗೆ ಸೈಕಲ್‌ಗಳನ್ನು ವಿತರಿಸಲಾಹಿತು

Leave a Reply

Top