fbpx

ಶುದ್ದ ಕುಡಿಯುವ ನೀರಿನ ಘಟಕದ ಉದ್ಘಾಟನೆ

ಕೊಪ್ಪಳ ನಗರದ ಪದಕಿಲೇಔಟ ೨೧ನೇ ವಾರ್ಡಿನಲ್ಲಿ ಇಂದು ದಿ. ೨೮.೦೩.೨೦೧೫ ಶನಿವಾರ ಬೆಳಿಗ್ಗೆ ೦೯:೩೦ ಗಂಟೆಗೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಕುಡಿಯುವ ನೀರಿನ ಘಟಕದ ಉದ್ಘಾಟನೆಯನ್ನು  ನೆರವೇರಿಸಿದರು.

ಈ ಸಂದರ್ಬದಲ್ಲಿ ವಾರ್ಡಿನ ಸದಸ್ಯರಾದ ಶ್ರೀಮತಿ ಸುವರ್ಣ ಬಸವರಾಜ ನೀರಲಗಿ, ನಗರಾಸಭಾ ಅಧ್ಯಕ್ಷೆ ಶ್ರೀಮತಿ ಬಸವ್ವ ರಾಮಣ್ಣ ಹಳ್ಳಿಗುಡಿ, ಉಪಾಧ್ಯಕ್ಷರಾದ ಬಾಳಪ್ಪ ಬಾರಕೇರ, ಪೌರಾಯುಕ್ತರು ಪಟ್ಟೆದಾರ, ವಾರ್ಡಿನ ಮುಖಂಡರಾದ ರಾಜು ಬಾಕಳೆ, ಮದುರಾ ಕರಣಂ, ವಿಜಯ ನಾಲವಾಡ, ಹಾಗೂ ಇನ್ನಿತರರು ಪಾಲ್ಗೊಂಡಿದ್ದರು. ಶ್ರೀಮತಿ ಸುವರ್ಣ ಬಸವರಾಜ ನೀರಲಗಿ ಮಾತನಾಡುತ್ತಾ ಯೋಜನೆಯ ಬಗ್ಗೆ ವಿವರವಾಗಿ ಸಭೆಗೆ ತಿಳಿಸುತ್ತಾ ಸದ್ರಿ ಕೆಲಸಕ್ಕೆ ಸಹಕರಿಸಿದ ನಗರಸಭಾ ಎಲ್ಲಾ ಅಧಿಕಾರಿ ವರ್ಗದವರಿಗೆ ಸಾರ್ವಜನಿಕರು ಇದರ ಲಾಭವನ್ನು ಪಡೆದುಕೊಳ್ಳಬೇಕು ಕೇವಲ ೫ ರೂ.ಗಳಿಗೆ ೨೦ ಲೀ ಶುದ್ದ ನೀರನ್ನು ಎಲ್ಲರು ಬಳಸಿಕೊಳ್ಳಬೆಕು ವಾರ್ಡಿನ ಹಿರಿಯರು ಸದ್ರಿ ಕೆಲಸಕ್ಕೆ ಶ್ರಮಿಸಿದ ವಾರ್ಡಿನ ಸದಸ್ಯರಾದ ಶ್ರೀಮತಿ ಸುವರ್ಣ ಬಸವರಾಜ ನೀರಲಗಿ ಅಭಿನಂದನೆ ಸಲ್ಲಿಸಿದರು. 
ನಗರಸಭೆ ಹಾಗೂ ರಕ್ಷಣ್ ಚಾರಿಟೆಬಲ್ ಟ್ರಸ್ಟ್ (ರಿ) ನ ಸಹಭಾಗುತ್ವದೊಂದಿಗೆ ಸದ್ರಿ ಯೋಜನೆ ಪ್ರಾರಂಭಗೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಇದರ ಲಾಭವನ್ನು ಪಡೆದುಕೊಳ್ಳಬೇಕು. ಇದರೊಂದಿಗೆ ಅಶೋಕಕುಮಾರ ಬೆಲ್ಲದ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು.  
Please follow and like us:
error

Leave a Reply

error: Content is protected !!