ಬಸವ ಜಯಂತಿ ಅಂಗವಾಗಿ ಕುಡಗುಂಟಿ ೫೧ ಜೋಡಿ ಎತ್ತುಗಳ ಬೃಹತ್ ಮೆರವಣಿಗೆ

ಯಲಬುರ್ಗಾ, ಏ.೨೪: ಸಮೀಪದ ಕುಡಗುಂಟಿ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ೫೧ ಜೋಡಿ ಎತ್ತುಗಳ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಸವ ಜಯಂತಿ ಉತ್ಸವ ಸಮಿತಿಯವರು ಆಯೋಜಿಸಿದ್ದ ಮೆರವಣಿಗೆ ಕಾರ್ಯಕ್ರಮದಲ್ಲಿ ಸುಮಾರು ೫೧ ಜೋಡಿ ಎತ್ತುಗಳು ಭಾಗವಯಿಸಿದ್ದವು. ಎತ್ತಿನ ಬಂಡಿಯಲ್ಲಿ ವಿಶ್ವಗುರು ಬಸವಣ್ಣನ ಭಾವಚಿತ್ರವಿರಿಸಿ, ಸ್ಥಳೀಯ ಬಸವೇಶ್ವರ ದೇವಸ್ಥಾನ ಹಾಗೂ ಮಾರುತೇಶ್ವರ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಾರಂಭಗೊಂಡ ಮೆರವಣಿಗೆ ಕಾರ್ಯಕ್ರಮದಲ್ಲಿ ರೈತರು ತಮ್ಮ ತಮ್ಮ ಎತ್ತುಗಳನ್ನು ವಿಶಿಷ್ಟ ಹಾಗೂ ವಿನೂತನ ರಿತೀಯಲ್ಲಿ ವಸ್ತ್ರಾಲಂಕಾರ   ಮಾಡಿದ್ದ ದೃಶ್ಯ ನೋಡುಗರ ಗಮನ ಸೆಳೆಯಿತು. ಗ್ರಾಮದ ನೂರಾರು ಮಹಿಳೆಯರು ಕಳಸ-ಕನ್ನಡಿಗಳನ್ನು ಹಿಡಿದು ಮೆರಣಿಗೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಶೋಭೆ ತಂದು ಕೊಟ್ಟರು. ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಶಂಕ್ರಪ್ಪ ಗುಡಗೇರಿ, ಗೌಸುಸಾಬ ಜಕ್ಕಲಿ, ಶರಣಪ್ಪ ಬೊಮ್ಮನಾಳ, ಶಿವಪ್ಪ ದೊಡ್ಡಮನಿ, ಮುಖಂಡರಾದ ಬಸವಂತಪ್ಪ ಸಂಗಟಿ, ಮಲ್ಲಿಕಾರ್ಜುನಗೌಡ ಪಾಟೀಲ್, ರಾಮಣ್ಣ ಚಿಲವಾಡಗಿ, ಶರಣಪ್ಪ ಮೇಟಿ, ಪತ್ರಕರ್ತ ಭೀಮಣ್ಣ ಕೆ.ನಾಯ್ಕರ್, ಯಮನೂರಪ್ಪ ಬೊಮ್ಮನಾಳ, ಹನುಮಂತಪ್ಪ ಲಗಳೂರ, ದೇವಪ್ಪ ಲಗಳೂರ, ಬಸಣ್ಣ ಹೊಂಬಳ, ನಿಂಗಯ್ಯಾ ಮಠದ, ಡಾ.ಗದ್ದೆಪ್ಪ ಚಲವಾದಿ ಸೇರಿದಂತೆ ಬಸವ ಜಯಂತಿ ಉತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply