ರಾಜ್ಯ ಯುವ ಪ್ರಶಸ್ತಿ : ಅರ್ಜಿ ಆಹ್ವಾನ


  ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ಕ್ರೀಡೆ, ಸಂಸ್ಕೃತಿ ಹಾಗೂ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಿರುವ ಯುವಕ/ಯುವತಿಯರಿಗೆ ಹಾಗೂ ಯುವಕ/ಯುವತಿ ಸಂಘಗಳಿಂದ ೨೦೧೧-೧೨ನೇ ಸಾಲಿನ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ದಿನಾಂಕ ೦೧-೦೪-೨೦೧೧ ರಿಂದ ೩೧-೦೩-೨೦೧೨ ರವರೆಗೆ ಯುವಕ, ಯುವತಿ ಮಂಡಲ ಹಾಗೂ ಯುವಕ ಯುವತಿಯರು ಕೈಗೊಂಡಿರುವ ಸಾಧನೆಗಳ ಕುರಿತು ದ್ವಿಪ್ರತಿಯಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸುವ ಯುವಕ, ಯುವತಿಯರು ೧೫ ರಿಂದ ೩೫ ವಯೋಮಿತಿ ಒಳಗಿರಬೇಕು. ವಯಕ್ತಿಕ ಪ್ರಶಸ್ತಿಗೆ ಅರ್ಜಿದಾದರರು ಯುವಕ/ಯುವತಿ ಮಂಡಳಿ ಸದಸ್ಯರಾಗಿರತಕ್ಕದ್ದು, ಯುವ ಸಂಘ ಪ್ರಶಸ್ತಿಗೆ ಅರ್ಜಿದಾರರು ಅಥವಾ ಸಂಘ ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಲ್ಲಿ ನೊಂದಣಿಯಾಗಿರಬೇಕು.
ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ ಕೊಪ್ಪಳ ಇವರಿಂದ ಪಡೆದು ಡಿ.೨೦ ರೊಳಗಾಗಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ ೦೮೫೩೯-೨೦೧೪೦೦ಗೆ ಸಂಪರ್ಕಿಸುವಂತೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಎನ್.ಘಾಡಿ   ತಿಳಿಸಿದ್ದಾರೆ.

Leave a Reply