೨೫ ರಂದು ಕೊಪ್ಪಳದಲ್ಲಿ ರೋಟರಿ ಕ್ಲಬನಿಂದ ಆಯೋಜಿಸಲಾಗಿರುವ ೨ ದಿನದ ತರಬೇತಿ ಕಾರ್ಯಾಗಾರ.

ದಿನಾಂಕ ೨೫ರಂದು ಕೊಪ್ಪಳದಲ್ಲಿ ರೋಟರಿ ಕ್ಲಬನಿಂದ ಆಯೋಜಿಸಲಾಗಿರುವ ರೋಟರಿ ಇಂಟರನ್ಯಾಷನಲ್ ೩೧೬೦  ವತಿಯಿಂದ ಜಿಲ್ಲಾ ತಂಡಕ್ಕೆ ೨ ದಿನದ ತರಬೇತಿ ಕಾರ್ಯಾಗಾರವನ್ನು ಬೆಳಿಗ್ಗೆ ೧೦:೦೦ ಗಂಟೆಗೆ ಶ್ರೀ ಕೃಷ್ಣ ಊದುಪುಡಿ. ಸಿ.ಈ.ಓ. ಜಿ.ಪಂ. ಕೊಪ್ಪಳ ಇವರು ಉದ್ಘಾಟಿಸುವರು ಹಾಗೂ ಶ್ರೀ ಪಿ.ಎಸ್. ಮಂಜುನಾಥ ಉಪವಿಭಾಗಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಹಾಗೂ ಅನಂತಪುರದಿಂದ ರೋಟರಿ ಜಿಲ್ಲಾ ಗವರ್ನರ್ ರೋಟರೆರಿಯನ್ ಜಿ.ಎಸ್.ಮನ್ಸೂರು, ಗುಲಬರ್ಗಾದಿಂದ ರೋಟರೆರಿಯನ್ ಜಿಲ್ಲಾ ಗವರ್ನರ್ ಗೌತಮ್ ಜಾಹಗೀರದಾರ, ಬಳ್ಳಾರಿಯಿಂದ ಮಾಜಿ ಜಿಲ್ಲಾ ಗವರ್ನರ್ ಬಿ.ಎಲ್. ಆನಂದರಾವ್, ಹಾಗೂ ಕೊಪ್ಪಳದಿಂದ ಮಾಜಿ ಜಿಲ್ಲಾ ಗವರ್ನರ್ ಡಾ.ಕೆ.ಜಿ.ಕುಲಕರ್ಣಿ ಪಾಲ್ಗೊಳ್ಳುವರು. ಈ ಸಮಾರಂಭದ ಅಧ್ಯಕ್ಷತೆಯನ್ನು ಕೊಪ್ಪಳ ರೋಟರಿ ಕ್ಲಬ್ ಅಧ್ಯಕ್ಷರಾದ ರೊಟರಿಯನ್ ವೀರಣ್ಣ ಕಮತರ್ ವಹಿಸುವರು ಈ ಸಮಾರಂಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿಯಾದ ಡಾ.ಶ್ರೀನಿವಾಸ ಹ್ಯಾಟಿ, ಕೊಪ್ಪಳ ರೋಟರಿ ಮೆಂಬರ್‍ಸ್ ಮತ್ತು ಬೀದರ್, ರಾಯಚೂರು, ಗುಲಬರ್ಗಾ, ಬಳ್ಳಾರಿ, ದಾವಣಗೇರೆ, ಚಿತ್ರದುರ್ಗಾ, ಯಾದಗಿರಿ, ಕೊಪ್ಪಳ ಮತ್ತು ಆಂಧ್ರಪ್ರದೇಶದ ಅನಂತಪುರ, ಕರ್ನುಲ್, ನೆಲ್ಲೂರು, ಮತ್ತು ಕಡಪ ಜಿಲ್ಲೆಗಳಿಂದ ಸುಮಾರು ೪೦೦ ರೋಟರಿ ಸದಸ್ಯರುಗಳು ಈ ತರಬೇತಿಯಲ್ಲಿ ಪಾಲ್ಗೊಳ್ಳುವವರೆಂದು ಜಿಲ್ಲಾ ತಂಡಕ್ಕೆ  ತರಬೇತಿ ಕಾರ್ಯಾಗಾರದ ಚೆರಮನ್‌ರಾದ ಚಂದ್ರಶೇಖರಗೌಡ ಪಾಟೀಲ್, ಹಲಗೇರಿ  ತಿಳಿಸಿದ್ದಾರೆ.

Leave a Reply