ಕ್ರೇತ್ರದ ಮತದಾರರ ಆಶಿರ್ವಾದವೇ ನನ್ನ ಗೆಲುವಿನ ಶ್ರೀ ರಕ್ಷೆ – ಕೆ. ರಾಘವೇಂದ್ರ ಹಿಟ್ನಾಳ

ಕೊಪ್ಪಳ: ಮೇ-೦೨, ನಗರದ ೧೫ ಮತ್ತು ೧೬ ನೆ ವಾರ್ಡಗಳಲ್ಲಿ ಕಾಂಗ್ರೆಸ ಪಕ್ಷದ ಅಭ್ಯರ್ಥಿಪರ ಪ್ರಚಾರ ಮತ್ತು ಮತ ಯುಆಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೊಪ್ಪಳ ವಿಧಾನಸಭಾ ಕ್ಷೇತದ ಅಷ್ಟದಿಕ್ಕುಗಳಲ್ಲಿ ಅನೇಕ ಪಕ್ಷಗಳನ್ನು ತೊರೆದು. ಕಾಂಗ್ರೆಸ ಪಕ್ಷಕ್ಕೆ ಸಾಗರೋಪಾದಿಯಲ್ಲಿ ಕಾಂಗ್ರೆಸ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿರುವುದು ನೋಡಿದರೆ ಈ ಬಾರಿ ನನ್ನ ಗೆಲು

ವು ಖಚಿತ. ಬ್ರಷ್ಟ ಬಿಜೆಪಿ ಆಡಳಿತದಿಮದ ಬೇಸತ್ತ ಜನತೆ ಕಾಮಗ್ರೇಸ ಪಕ್ಷದ ಕಡೆ ಹೆಚ್ಚಿನ ಒಲವು ತೋರುತ್ತಿದ್ದು ಈ ನಾಡಿನಲ್ಲಿ ಮತ್ತೆ ಕಾಂಗ್ರೆಸ ಪಕ್ಷದ ಆಡಳಿತ ನಿಶ್ಚಿತ. ಕೊಪ್ಪಳ ಶಾಸಕರ ೨ ದಶಕಗಳ ಅಭಿವೃದ್ಧಿ ಸೂನ್ಯವಾಗಿದ್ದು ಕೇವಲ ಸ್ವಜನ ಪಕ್ಷಪಾತ, ಬ್ರಷ್ಟಾಚಾರ, ಲೂಟಿ ಇವರ ಅಭಿವೃದ್ಧಿಯ ಕನ್ನಡಿಯಾಗಿದೆ. ಕೊಪ್ಪಳದ ಶಾಸಕರು ಸೋಲಿನ ಬೀತಿಯಿಂದ ಭ್ರಮ ನಿರಶನವಾಗಿರುತ್ತದೆಂದು ಹರಿಹಾಯ್ದರು.

ಈ ಸಂದರ್ಬದಲ್ಲಿ ಕೆ. ಬಸವರಾಜ ಹಿಟ್ನಾಳ, ಎಸ್.ಬಿ. ನಾಗರಳ್ಳಿ, ಜುಲ್ಲು ಖಾದರಿ, ಹೆಚ್. ಎಲ್ ಹೀರೆಗೌಡರ, ಈಶಪ್ಪ ಮಾದಿನೂರ, ಮಹೇಂದ್ರ ಚೋಪ್ರಾ, ಸುರೇಶ ದೇಸಾಯಿ, ಗುರುರಾಜ ಹಲಗೇರಿ, ಅಮ್ಜದ್ ಪಟೇಲ್, ಮೌಲಾಹುಸೇನ್ ಜಮಾದಾರ, ಮಲ್ಲಪ್ಪ ಕವಲೂರ, ಖಾಟನ್ ಪಾಷಾ, ದ್ಯಾಮಣ್ಣ ಚಿಲವಾಡಗಿ, ನಾಗರಾಜ ಬಳ್ಳಾರಿ, ಪಾಷಾ ಮಾನ್ವಿ, ಮುತ್ತುರಾಜ, ರಾಮಣ್ಣ ಹದ್ದಿನ, ಯಮನೂರಪ್ಪ ಕಲ್ಲಣ್ಣವರ,  ಮುಂತಾವರು ಉಪಸ್ಥಿತರಿದ್ದರೆಂದು ಕಾಂಗ್ರೆಸ ವಕ್ತಾರ ಅಕ್ಬರ ಪಾಷಾ ಪಲ್ಟನ್ ತಿಳಿಸಿದ್ದಾರೆ. 

Related posts

Leave a Comment