ಜೂ.೨೦ ರಂದು ಅಂಬೇಡ್ಕರ್ ಸಮುದಾಯ ಭವನಕ್ಕೆ ಶಂಕುಸ್ಥಾಪನೆ

 ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ೨೦೧೨-೧೩ನೇ ಸಾಲಿನ ಯೋಜನೆ ಅಡಿಯಲ್ಲಿ ತಾಲೂಕಿನ ತಿಗರಿ ಗ್ರಾಮದಲ್ಲಿ ಜೂ.೨೦ ರಂದು ಡಾ|| ಬಿ.ಆರ್.ಅಂಬೇಡ್ಕರ್ ಸಮೂದಾಯ ಭವನದ ಶಂಕು ಸ್ಥಾಪನೆ ಜರುಗಲಿದೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಇಟಗಿಯ ಶ್ರೀ ಶಿವಶರಣ ಗದಿಗೆಪ್ಪ ಅಜ್ಜನವರ ಅವರು ವಹಿಸಲಿದ್ದಾರೆ.   ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಶಂಕುಸ್ಥಾಪನೆ ನೆರವೇರಿಸುವರು.  ಕಾಯಕ್ರಮದ ಅಧ್ಯಕ್ಷತೆಯನ್ನು ಮತ್ತೂರು ಗ್ರಾ.ಪಂ. ಅಧ್ಯಕ್ಷೆ ಸಾವಿತ್ರಿದೇವಿ ಮಾರುತೆಪ್ಪ ಅಂಬಿಗೇರ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾ.ಪಂ. ಅಧ್ಯಕ್ಷ ದೇವಪ್ಪ ಮೇಕಾಳಿ, ಜಿ.ಪಂ.ಸದಸ್ಯರಾದ ನಾಗನಗೌಡ ಮಾಲಿ ಪಾಟೀಲ್, ತಾ.ಪಂ.ಸದಸ್ಯ ಸಂಗಪ್ಪ ಕವಲೂರು, ಗ್ರಾ.ಪಂ.ಸದಸ್ಯರಾದ ಸೋಮಣ್ಣ ಅಗಸಿಮನಿ, ಮಾರುತಿ ಕುಂಟಮ್ಮನವರ, ಅಂಬೇಡ್ಕರ್ ಯುವಜನ ಕಲಾ ಸಂಘದ ಅಧ್ಯಕ್ಷ ದೇವಪ್ಪ ಹರಿಜನ ಅವರು ಆಗಮಿಸಲಿದ್ದಾರೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಎನ್.ಘಾಡಿ ತಿಳಿಸಿದ್ದಾರೆ.
Please follow and like us:
error