ಕನ್ನಡ ಭಾಷಾಭಿವೃದ್ದಿಯಲ್ಲಿ ಯುವಕರ ಪಾತ್ರ : ವಿಚಾರ ಸಂಕಿರಣ

ವಾರ್ತಾ ಇಲಾಖೆಯು ಸರ್ಕಾರಿ ಪದವಿ ಪೂರ್ವ ಕಾಲೇಜು, ಹಿರೇಸಿಂದೋಗಿ, ಗ್ರಾ.ಪಂ. ಹಿರೇಸಿಂದೋಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಭಾಷಾಭಿವೃದ್ದಿಯಲ್ಲಿ ಯುವಕರ ಪಾತ್ರ ಕುರಿತು ವಿಚಾರ ಸಂಕಿರಣವನ್ನು ನ.೩೦ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಹಿರೇಸಿಂದೋಗಿಯ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಹಮ್ಮಿಕೊಂಡಿದೆ.
      ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ನೆರವೇರಿಸಲಿದ್ದಾರೆ. ಹಿರೇಸಿಂದೋಗಿ ಸ.ಪ.ಪೂ. ಕಾಲೇಜಿನ ಪ್ರಾಚಾರ್ಯ ಡಿ.ಪಿ. ಶಂಕ್ರಪ್ಪ ಅವರು ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯೆ ಭಾಗೀರಥಿ ಶಂಕರಗೌಡ ಪಾಟೀಲ್, ತಾಲೂಕಾ ಪಂಚಾಯತಿ ಸದಸ್ಯೆ ಹುಲಿಗೆಮ್ಮ ಹೊನ್ನಪ್ಪ ಗದ್ದಿ, ಗ್ರಾ.ಪಂ. ಅಧ್ಯಕ್ಷೆ ಯಲ್ಲಮ್ಮ ಗುಡಿಸಲಮನಿ, ಉಪಾಧ್ಯಕ್ಷೆ ಹನುಮವ್ವ ತಳವಾರ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಯಲ್ಲಪ್ಪ ಮಾದಿನೂರ, ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ದಿನೇಶರೆಡ್ಡಿ ಮಾದಿನೂರು, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರುಗಳಾದ ಕೊಟ್ರಪ್ಪ ಉಳ್ಳಾಗಡ್ಡಿ, ಹನುಮಂತಪ್ಪ ಕವಳಕೇರಿ, ಮಾರುತಿ ನಾಯಕ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.  ಕಾರ್ಯಕ್ರಮದ ಅಂಗವಾಗಿ ಕನ್ನಡ ಉಪನ್ಯಾಸಕರಾದ ಶಂಕ್ರಯ್ಯ ಅಬ್ಬಿಗೇರಿಮಠ ಅವರು ವಿಶೇಷ ಉಪನ್ಯಾಸ ನೀಡುವರು ಎಂದು ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ.  ತಿಳಿಸಿದ್ದಾರೆ.

Please follow and like us:
error