You are here
Home > Koppal News > ಅಬುಧಾಬಿ ಕರ್ನಾಟಕ ಸಂಘದ ರಾಜ್ಯೋತ್ಸವ…

ಅಬುಧಾಬಿ ಕರ್ನಾಟಕ ಸಂಘದ ರಾಜ್ಯೋತ್ಸವ…

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಮಾತೃ ಸ್ಥಾನದಲ್ಲಿರುವ ಅಬುಧಾಬಿ ಕರ್ನಾಟಕ ಸಂಘ ೧೯೮೧ ರಲ್ಲಿ ಸ್ಥಾಪನೆಯಾಗಿ ಕೊಲ್ಲಿನಾಡಿನಲ್ಲಿ ಕನ್ನಡ ಭಾಷೆ,ಕಲೆ,ಸಂಸ್ಕೃತಿಯನ್ನು ಹಸಿರಾಗಿರಿಸಿದೆ. ೨೦೧೧ ನೇ ಸಾಲಿನ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ನವೆಂಬರ್ ೪ ನೇ ತಾರೀಕು ಶುಕ್ರವಾರ ಬೆಳಗಿನಿಂದ ಸಂಜೆಯವರೆಗೆ ಕರ್ನಾಟಕದ ಕಲಾ ವೈಭವವನ್ನು ಅನಾವರಣಗೊಳಿಸಿ ವೈಶಿಷ್ಟ್ಯಪೂರ್ಣವಾಗಿ ನಡೆಸಿ ಐತಿಹಾಸಿಕ ದಾಖಲೆಯಾಯಿತು.
 ಅನಂತ್ ರವರು ಕನ್ನಡದ ಹಿರಿಮೆ ಗರಿಮೆಗಳ ಮಾಹಿತಿಯನ್ನು ನೀಡುತ್ತಾ ಜನಮನ ಸೆಳೆದರು.ಇಂಡಿಯಾ ಸೋಶಿಯಲ್ ಸೆಂಟರ್ ಭವ್ಯ ಸಭಾಂಗಣದಲ್ಲಿ ಆಸೀನರಾಗಿದ್ದ ಅಭಿಮಾನಿ ಕನ್ನಡಿಗರ ಸಮ್ಮುಖದಲ್ಲಿ ಉದ್ಘಾಟನಾ ಸಮಾರಂಭಕ್ಕೆ ಬೆಳಿಗ್ಗೆ ೧೧ ಗಂಟೆಗೆ ಅರಬ್ ಸಂಯುಕ್ತ ಸಂಸ್ಥಾನಕ್ಕೆ ಭಾರತೀಯ ರಾಯಬಾರಿಯಾಗಿರುವ ಕನ್ನಡಿಗರಾದ  ಎಂ.ಕೆ.ಲೋಕೇಶ್ ರವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಯು.ಎ.ಇ.ಹಿರಿಯ ಉಧ್ಯಮಿ ಎನ್.ಎಂ.ಸಿ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಅಬುಧಾಬಿ ಕರ್ನಾಟಕ ಸಂಘದ ಮಹಾ ಪೋಷಕರಾದ ಡಾ.ಬಿ.ಆರ್.ಶೆಟ್ಟಿಯವರು,ಇಂಡಿಯಾ ಸೋಶಿಯಲ್ ಸೆಂಟರ್ ಅಧ್ಯಕ್ಷರಾದ  ರಮೇಶ್ ವಿ.ಪಣಿಕರ್,ಮುಖ್ಯ ಕಾರ್ಯದರ್ಶಿ  ಎಂ.ಎ.ಸಲಾಂ,ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾದ ಉಧ್ಯಮಿ   ಶ್ರೀನಿವಾಸ್ ಶ್ರೀರಂಗಂ,ಅರಬಿಯನ್ ಫರ್ಫ್ಯೂಮ್ಸ್ ಸಂಸ್ಥೆಯ ಡಿವಿಜನಲ್ ಮ್ಯಾನೆಜರ್   ಶಿವಾನಂದ್ ಹೆಬ್ಬಾರ್,ಐ.ಎಸ್.ಸಿ.ಯ ನಿಕಟ ಪೂರ್ವ ಅಧ್ಯಕ್ಷರಾದ  ಸುಧೀರ್ ಕುಮಾರ್ ಶೆಟ್ಟಿ,ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ   ಸರ್ವೋತ್ತಮ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ವೇದಿಕೆಯಲ್ಲಿ ಉಪಸ್ತಿತರಿದ್ದರು.
 ಮನೋಹರ್ ತೋನ್ಸೆಯವರು ಸಾಂಸ್ಕೃತಿಕ ಭಾಗದ ನಿರೂಪಣೆಯನ್ನು ತಮ್ಮದೇ ಆದ ಶೈಲಿಯಲ್ಲಿ ಪ್ರಾರಂಭಿಸಿದರು.ಪ್ರಾರ್ಥನೆ ಶ್ರೀಮತಿ ದಿವ್ಯ ಶರ್ಮಾ ಮತ್ತು ತಂಡದವರಿಂದ ನಡೆದು ನಂತರ ಮಕ್ಕಳ ತಂಡದಿಂದ ಸ್ವಾಗತ ನೃತ್ಯದಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭವಾಯಿತು.ಶ್ರೀಮತಿ ಜಸಿಂತಾ ರಸ್ಕ್ವಿನ್ನ ನಿರ್ದೇಶನದಲ್ಲಿ ಚಿಲಿಪಿಲಿ ಹಕ್ಕಿಗಳು ಮಕ್ಕಳ ಸಮೂಹ ನೃತ್ಯ,ಶ್ರೀ ಡೊನಾಲ್ಡ್ ಪಿಂಟೋ ನಿರ್ದೇಶನದಲ್ಲಿ ತಂಡದ ಗೀತಾ ನೃತ್ಯ,ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಮಕ್ಕಳ ನೃತ್ಯ,ಶ್ರೀಮತಿ ದಿವ್ಯಾ ತಂಡದ ನಾಡಗೀತೆ,ಬಾರಿಸು ಕನ್ನಡ ಡಿಂಡಿಮ ಸಮೂಹ ಗಾಯನ  ಚಂದ್ರಕಾಂತ್ ಕಿಣಿ ಮತ್ತು ನರಸಿಂಹ ಕುಡ್ವ ತಂಡದಿಂದ,ರೊನಾಲ್ಡ್ ಡಿ’ಸೋಜ ತಂಡದಿಂದ ಜೈ ಕರ್ನಾಟಕ,ಶ್ರೀಮತಿ ಸೌಜನ್ಯ ಚಂದ್ರಶೇಖರ್ ನಿರ್ದೇಶನದಲ್ಲಿ ಮಕ್ಕಳ ಸಮೂಹ ಗಾಯನ ಜೋಗದ ಸಿರಿ ಬೆಳಕಿನಲ್ಲಿ,ಶ್ರೀಮತಿ ಅಶ್ವಿನಿ ಸತೀಶ್ ನಿರ್ದೇಶನದ ಮಕ್ಕಳ ಸಮೂಹ ಗಾಯನ ಚೆಂದದ ತೋಟವಿದು ಗಾಯನದ ಮೂಲಕ ನೀಡಿದ ಕಾರ್ಯಕ್ರಮ ಕನ್ನಡದ ಬಗ್ಗೆ ಅಭಿಮಾನವನ್ನು ಪ್ರೇಕ್ಷಕರಲ್ಲಿ ಜಾಗೃತಿ ಮೂಡಿಸಿತು.
ಸಮಾರಂಭಕ್ಕೆ ಆಗಮಿಸಿದ ಮುಖ್ಯ ಅತಿಥಿಗಳಲ್ಲಿ ಒರ್ವರಾದ ಇಂಡಿಯನ್ ಸೊಶಿಯಲ್ ಸೆಂಟರ್ ಅಧ್ಯಕ್ಷರಾದ  ರಮೇಶ್ ವಿ.ಪಣಿಕರ್ ರವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಿ ಗೌರವಿಸಲಾಯಿತು.ಸನ್ಮಾನಕ್ಕೆ ಉತ್ತರವಾಗಿ ಕೃತಜ್ಞತೆಯನ್ನು ಸಲ್ಲಿಸಿ ಅಬುಧಾಬಿ ಕರ್ನಾಟಕ ಸಂಘದ ಕಾರ್ಯಕ್ರಮವನ್ನು ಮನಸಾರೆ ಶ್ಲಾಘಿಸಿ ಶುಭವನ್ನು ಹಾರೈಸಿದರು.
“ಕನ್ನಡ ನಾಡಿ” ಕನ್ನಡ ನಾಡಿನ ವೈಭವ ವಿದುಷಿ ಡಾ. ಶ್ರೀವಿದ್ಯಾ ಮುರಳಿದರ್ ರವರ ನಿರ್ದೇಶನದಲ್ಲಿ   ಮುರಳಿದರ್ ಕುಮಾರ್,ಮಾ||ಅಬ್ಯುದಯ ಕೃಷ್ಣರವರ ಪ್ರದರ್ಶನ ನೃತ್ಯರೂಪಕ ಕಾವ್ಯಲಹರಿ,ಪ್ರಾಕೃತಿಕ ಪರಿ,ಕನ್ನಡ ನೆಲದ ಜಲಧಾರೆಯ ಝರಿ,ಸಾಂಸ್ಕೃತಿಕ ಸಿರಿ, ಕನ್ನಡಿಗರ ಐಕ್ಯತೆಯ ಒಳ್ನುಡಿ ಇವೆಲ್ಲದರ ಸಾರವು ನೃತ್ಯರೂಪದಲ್ಲಿ ಸರ್ವರ ಮನ ಸೆಳೆಯಿತು.
ವಿದುಷಿ ಡಾ.ಶ್ರೀವಿದ್ಯಾ ಮುರಳಿದರವರನ್ನು ಅವರ ಪತಿ ಮತ್ತು ಮಗನನ್ನು,ಡಾ.ಬಿ.ಆರ್. ಶೆಟ್ಟಿಯವರು ಶಾಲು ಹೊದಿಸಿ ಪಲಕ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಯು.ಎ.ಇ.ಗೆ ಭಾರತೀಯ ರಾಯಬಾರಿಯಾಗಿರುವ ಕನ್ನಡಿಗರಾದ ಮಾನ್ಯ ಎಂ.ಕೆ.ಲೋಕೇಶ್ ರವರನ್ನು ಡಾ.ಬಿ.ಆರ್.ಶೆಟ್ಟಿಯವರು ಶಾಲು ಹೊದಿಸಿ ಪಲಕ ನೀಡಿ ಸನ್ಮಾನಿಸಿ ಗೌರವಿಸಿದರು. ಮುಖ್ಯ ಅತಿಥಿಗಳು ಕರ್ನಾಟಕದಿಂದ ಬಹಳ ವರ್ಷದಿಂದ ವಿಶ್ವದಾದ್ಯಂತ ಹಲವಾರು ದೇಶಗಳಲ್ಲಿ ಸೇವೆ ಸಲ್ಲಿಸುತ್ತಿದರೂ ಅಚ್ಚ ಕನ್ನಡದಲ್ಲಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು ತಮ್ಮ ಭಾಷಾಭಿಮಾನಕ್ಕೆ ಸಾಕ್ಷಿಯಾದರು.
ಯು.ಎ.ಇ.ಕನ್ನಡಿಗರ ಮಹಾಪೋಷಕರಾದ ಡಾ.ಬಿ.ಆರ್.ಶೆಟ್ಟಿಯವರು ಶಿಸ್ತುಬದ್ಧವಾಗಿ ಕನ್ನಡ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವ ಅಬುಧಾಬಿ ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಶ್ಲಾಘಿಸಿದರು.ಎಲ್ಲಾ ಪ್ರೇಕ್ಷಕರಿಗೆ ರಾಜ್ಯೋತ್ಸವದ ಶುಭಾಶಗಳನ್ನು ನೀಡಿದರು.
ಮಧ್ಯಾಹ್ನ ಭೋಜನ ವಿರಾಮದ ದ್ವಿತೀಯ ಹಂತದ ಕಾರ್ಯಕ್ರಮ ಪ್ರಾರಂಭವಾಯಿತು.
ಕರ್ನಾಟಕದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲುವ ರಾಜಕೀಯ ದೊಂಬರಾಟದಿಂದ ಮನನೊಂದ ಭೂಗತ ದೊರೆ ಆಡಳಿತ ವ್ಯವಸ್ಥೆಯನ್ನು ತನ್ನಾದಾಗಿಸಿಕೊಳ್ಳುವ ಪ್ರಹಸನ ಗಣೇಶ್ ರೈ ಸಾಹಿತ್ಯ ಸಂಭಾಷಣೆಯಲ್ಲಿ ಎಂಟು ಮಂದಿ ನಟನಾ ತಂಡದಿಂದ ಮಿತ್ರಂಪಾಡಿ ಜಯರಾಂ ರೈ ಯವರ ಪರಿಕಲ್ಪನೆ ನಿರ್ದೇಶನದಲ್ಲಿ ಮೂಡಿ ಬಂದು ಜನ ಮೆಚ್ಚುಗೆಯನ್ನು ಪಡೆಯಿತು.
ಯು.ಎ.ಇ.ಯಲ್ಲಿ ನಡೆಯುತ್ತಿರುವ ಮಹಿಳಾ ಥ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನಗಳಿಸಿದ ಅಬುಧಾಬಿ ಕರ್ನಾಟಕ ಸಂಘ ಮಹಿಳಾ ಥ್ರೋಬಾಲ್ ತಂಡವನ್ನು ವೇದಿಕೆಗೆ ಬರಮಾಡಿಕೊಂಡು ಸನ್ಮಾನಿಸಿ ಗೌರವಿಸಿದರು.
ಅಬುಧಾಬಿ ಕರ್ನಾಟಕ ಸಂಘ ಪ್ರತಿವರ್ಷ ಕನ್ನಡ ಭಾಷೆಗೆ ಕೊಲ್ಲಿ ನಾಡಿನಲ್ಲಿ ಭದ್ರಬುನಾದಿಯನ್ನು ಹಾಕಿ ಕನ್ನಡ ಕಲೆ ಸಂಸ್ಕೃತಿಯನ್ನು ಎತ್ತಿ ಹಿಡಿದು ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದೆ.ಈ ಬಾರಿಯ ಕಾರ್ಯಕ್ರಮದಲ್ಲಿ ಯು.ಎ.ಇ.ಯಲ್ಲಿರುವ ಕರ್ನಾಟಕಪರ ಸಂಘಟನೆಗಳಿಗೆ,ತಂಡಗಳಿಗೆ ಕರ್ನಾಟಕ ಜಾನಪದ ನೃತ್ಯ ಸ್ಪರ್ಧೆಯನ್ನು ಏರ್ಪಡಿಲಾಗಿದ್ದು,ಸುಮಾರು ಒಂಬತ್ತು ತಂಡಗಳು ಭಾಗವಹಿಸಿದ್ದು ಅತ್ಯಂತ ಅಕರ್ಷಕವಾಗಿ ನಡೆದು ಹರ್ಷೊದ್ಘಾರದೊಂದಿಗೆ ಪ್ರೇಕ್ಷಕರು ಸಂಭ್ರಮಿಸಿದರು.
ಬಂಟ್ಸ್ ದುಬಾಯಿ “ರಾಣಿ ಅಬ್ಬಕ್ಕ”ತಂಡ   ರಾಜೇಶ್ ಕುತ್ತಾರ್ ನಿರ್ದೇಶನದಲ್ಲಿ ಪುರುಷರು ಮತ್ತು ಮಹಿಳೆಯರ ತಂಡ ಅಕರ್ಷಕ ಕಂಸಾಳೆ ನೃತ್ಯ ತೀರ್ಪುಗಾರರ ಆಯ್ಕೆಯಲ್ಲಿ ಪ್ರಥಮ ಸ್ಥಾನ ಪಡೆದು ಬಹುಮಾನ ೨೦೦೦ ದಿರಾಂಸ್ ನಗದು ಮತ್ತು ಕಪ್ ತನ್ನದಾಗಿರಿಸಿ ಕೊಂದರು.
ಅಬುಧಾಬಿ ಕರ್ನಾಟಕ ಸಂಘದ ತಂಡ “ಕಿತ್ತೂರು ರಾಣಿ ಚೆನ್ನಮ್ಮ”ಶ್ರೀಮತಿ ಮಂಗಳಾ ಶೆಟ್ಟಿಯವರ ನಿರ್ದೇಶನದಲ್ಲಿ ತಮ್ಮ ಕಲಾಕೌಶಲ್ಯವನ್ನು ಪ್ರದರ್ಶಿಸಿ ದ್ವಿತೀಯ ಸ್ಥಾನ ೧೫೦೦ ದಿರಾಂಸ್ ನಗದು ಮತ್ತು ಕಪ್ ಪಡೆದು ಕೊಂಡರು.
ಅಲ್ ಐನ್ ಬಂಟ್ಸ್ “ಶಿಶುನಾಳ ಶರೀಫ್”ತಂಡ ಭಾಗ್ಯದ ಬಳೆಗಾರ ಶ್ರೀಮತಿ ರಜನಿ ಶೆಟ್ಟಿ ಮತ್ತು ಶ್ರೀ ನಿತ್ಯಾನಂದ ಶೆಟ್ಟಿಯವರ ನಿರ್ದೇಶನದಲ್ಲಿ ಬಳೆಗಾರ ಚೆನ್ನಯ್ಯನ ಹಳ್ಳಿಯಲ್ಲಿನ ಪರಿಸರದ ಚಿತ್ರಣದೊಂದಿಗೆ ಉತ್ತಮ ಪ್ರದರ್ಶನ ನೀಡಿ ತೃತಿಯ ಸ್ಥಾನ ೧೦೦೦ ದಿರಾಂಸ್ ನಗದು ಮತ್ತು ಕಪ್ ತನ್ನಾದಾಗಿರಿಸಿಕೊಂಡರು.
ಅತ್ಯುತ್ತಮ ನೃತ್ಯ ಸಂಯೋಜಕ ಪ್ರಶಸ್ತಿ ರಾಣಿ ಅಬ್ಬಕ್ಕ ತಂಡದ  ರಾಜೇಶ್ ಕುತ್ತಾರ್ ಪ್ರಥಮ,ಕಿತ್ತೂರು ರಾಣಿ ಚೆನ್ನಮ್ಮ ತಂಡದ ಶ್ರೀಮತಿ ಮಂಗಳಾ ಶೆಟ್ಟಿ ದ್ವಿತೀಯಾ,ಮದಕರಿ ತಂಡದ ರಿತೇಶ್ ತೃತಿಯ ಸ್ಥಾನವನ್ನು ಪಡೆದುಕೊಂಡರು.
ತೀರ್ಪುಗಾರರಾಗಿ   ಸುಪ್ರಿತ್ ಕುಮಾರ್,ಶ್ರೀಮತಿ ನಮಿತಾ ಅನಂತ್,ಶ್ರೀ ಭವಾನಿ ಶಂಕರ್ ಶರ್ಮಾ,ಡಾ.ಶ್ರೀವಿದ್ಯಾ ಮುರುಳಿದರ್ ತಮ್ಮ ತೀರ್ಪು ನೀಡಿದರು.ಇವರನ್ನು ವೇದಿಕೆಗೆ ಬರಮಾಡಿಕೊಂಡು ಗೌರವಿಸಲಾಯಿತು.
ತಮ್ಮ ತಾಯಿನಾಡಿನಿಂದ ಅಬುಧಾಬಿ ರಾಜ್ಯೋತ್ಸವಕ್ಕೆ ಅತಿತಿಗಳಾಗಿ ಆಗಮಿಸಿ ಕಾರ್ಯಕ್ರಮದಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿದ  ಅನಂತ್ ಮತ್ತು ಶ್ರೀಮತಿ ನಮಿತ ಅನಂತ್ ದಂಪತಿಗಳನ್ನು ತಮ್ಮ ಪುತ್ರಿಯರೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ಮಾದ್ಯಮ ಸೇವೆಯನ್ನು ಸಲ್ಲಿಸುತ್ತಿರುವ  ಶೋಧನ್ ಪ್ರಸಾದ್,ಶ್ರೀ ತೋಮಸ್ ಸಿಕ್ವೇರಾ, ವಿನಯ್ -ನಮ್ಮ ಟಿ.ವಿ.  ವಿವೇಕ್ ಮತ್ತು ಶೋಬನ್ ಸಮೀಹಾ ಸ್ಟುಡಿಯೋ ಇವರುಗಳಿಗೆ ಗೌರವ ಸಮರ್ಪಿಸಲಾಯಿತು.
ಜಾನಪದ ತಂಡದ ನಿರ್ದೇಶಕರು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ತಂಡದ ನಿರ್ದೇಶಕರು ಮತ್ತು ಕಲಾವಿದರಿಗೆ ಗೌರವ ಸಮರ್ಪಣೆ.ಅಬುದಾಬಿ ಕರ್ನಾಟಕ ಸಂಘದ ಕಿತ್ತೂರು ರಾಣಿ ಚೆನ್ನಮ್ಮ ತಂಡದ ಶ್ರೀಮತಿ ಮಂಗಳಾ ಶೆಟ್ಟಿ,ಬಂಟ್ಸ್ ದುಬಾಯಿ-ರಾಣಿ ಅಬ್ಬಕ್ಕ ತಂದದ ರಾಜೇಶ್ ಕುತ್ತಾರ್,ಬಂಟ್ಸ್ ಅಲ್ ಐನ್ ಶಿಶುನಾಳ್ ಶರೀಫ್ ತಂಡದ ಶ್ರೀಮತಿ ರಜನಿ ಶೆಟ್ಟಿ,ಬಿಲ್ಲವರ ಬಳಗ ಅಬುಧಾಬಿ ಮದಕರಿ ನಾಯಕ ತಂಡದ ಪವನ್,ಬಿಲ್ಲವಾಸ್ ದುಬಾಯಿ ಅಯಂಡ್ ನಾರ್ಥ್ರನ್ ಏಮಿರೇಟ್ಸ್-ಜಗನ್ನಾಥ್ ಬೆಳ್ಳಾರೆ,ಶಾರ್ಜಾ ಕರ್ನಾಟಕ ಸಂಘ-ರೋಹಿಣಿ ಅನಂತ್,ಮೊಗವೀರ್ಸ್ ಯು.ಎ.ಇ -ದೀಪಕ್ ರಾಜ್ ಕೋಟ್ಯಾನ್,ಅಬುಧಾಬಿ ಬ್ರಾಹ್ಮಣ ಸಂಘ-ಶ್ರೀಮತಿ ಶುಷ್ಮಾ ಜಿತೇಂದ್ರ,ಬಿಲ್ಲವ ಬಳಗ ದುಬಾಯಿ- ಅಶೋಕ್ ಬೈಲೂರ್,ಸಾಂಸ್ಕೃತಿಕ ವಿಭಾಗದಲ್ಲಿ ಶ್ರೀಮತಿ ದಿವ್ಯಾ ಶರ್ಮಾ,ಜಸಿಂತಾ ರಸ್ಕ್ವಿನ್ನ,ಡಾ.ಶ್ರೀವಿದ್ಯಾ,ಶ್ರೀ ಡೊನಾಲ್ಡ್ ಪಿಂಟೊ, ರೋನಾಲ್ಡ್ ಡಿ’ಸೋಜಾ,ಶ್ರೀಮತಿ ಸೌಜನ್ಯ ಚಂದ್ರಶೇಖರ್,  ಚಂದ್ರಕಾಂತ್ ಕಿಣಿ ಮತ್ತು ನರಸಿಂಹ ಕುಡ್ವ, ಶ್ರೀಮತಿ ಅಶ್ವಿನಿ ಸತೀಶ್ ಮತ್ತು   ಜಯರಾಮ್ ರೈ.
ಕೊನೆಯಲ್ಲಿ ಅದೃಷ್ಟ ಚೀಟಿ ಡ್ರಾ ನಡೆದು ವಿಜೇತರಿಗೆ ಬಹುಮಾನ ನೀಡಲಾಯಿತು.
ಸಮಾರಂಭ ಸಂಜೆ ೬.೩೦ ಕ್ಕೆ ಮುಕ್ತಾಯವಾಗಿ ಸರ್ವ ಅಭಿಮಾನಿ ಕನ್ನಡಿಗರು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ್ ಶೆಟ್ಟಿಯವರು ಮತ್ತು ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರನ್ನು ಅಭಿನಂದಿಸಿ ತೆರಳಿದರು

Leave a Reply

Top