fbpx

ಕೊಪ್ಪಳ : ೧೪೭೮. ೯೭ ಕೋಟಿ ರೂ. ಗಳ ವಾರ್ಷಿಕ ಸಾಲ ಯೋಜನೆ ಬಿಡುಗಡೆ

ಕೊಪ್ಪಳ ಮಾ. ೨೫  : ಕೊಪ್ಪಳದ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಜಿಲ್ಲಾ ಲೀಡ್ ಬ್ಯಾಂಕ್‌ನಿಂದ ೨೦೧೫-೧೬ ನೇ ಸಾಲಿಗಾಗಿ ೧೪೭೮. ೯೭ ಕೋಟಿ ರೂ. ಮೊತ್ತದ ವಾರ್ಷಿಕ ಸಾಲ ಯೋಜನೆಯನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಬುಧವಾರದಂದು ಬಿಡುಗಡೆ ಮಾಡಿದರು.
  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಲೀಡ್ ಬ್ಯಾಂಕ್ ವಾರ್ಷಿಕ ಸಾಲ ಯೋಜನೆ ಬಿಡುಗಡೆ ಸಮಾರಂಭದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬಿಡುಗಡೆ ಮಾಡಿದರು.  
  ಜಿಲ್ಲಾ ಲೀಡ್ ಬ್ಯಾಂಕಿನ ೨೦೧೫-೧೬ ನೇ ಸಾಲಿನ ವಾರ್ಷಿಕ ಸಾಲ ಯೋಜನೆಯ ಬಗ್ಗೆ ಮಾಹಿತಿ ನೀಡಿದ, ಸ್ಟೇಟ್‌ಬ್ಯಾಂಕ್ ಆಫ್ ಹೈದ್ರಾಬಾದ್ ಬಳ್ಳಾರಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಅಬೀದ್ ಹುಸೇನ್ ಅವರು, ೨೦೧೫-೧೬ ನೇ ಸಾಲಿಗೆ ಒಟ್ಟು ೧೪೭೮. ೯೭ ಕೋಟಿ ರೂ. ಗಳಿಗೆ ವಾರ್ಷಿಕ ಸಾಲ ಯೋಜನೆ ರೂಪಿಸಲಾಗಿದ್ದು, ಇದು ಕಳೆದ ವರ್ಷಕ್ಕಿಂತ ೩೦೫. ೦೧ ಕೊಟಿ ರೂ. ಅಂದರೆ ಶೇ. ೨೬ ರಷ್ಟು ಹೆಚ್ಚಾಗಿದೆ.  ೧೪೭೮. ೯೭ ಕೋಟಿ ರೂ. ಗಳ ಪೈಕಿ ಕೃಷಿ ಕ್ಷೇತ್ರಕ್ಕೆ ಸಿಂಹಪಾಲು ನೀಡಲಾಗಿದ್ದು, ಕೃಷಿ ಅಲ್ಪಾವಧಿ ಸಾಲಕ್ಕೆ ೫೯೫. ೭೦ ಕೋಟಿ, ದೀರ್ಘಾವಧಿ ಸಾಲಕ್ಕೆ ೩೫೫. ೧೬ ಕೋಟಿ ರೂ. ನಿಗದಿಪಡಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಕಳೆದ ಸಾಲಿಗಿಂತ ಈ ಬಾರಿ ಶೇ. ೧೮. ೬೩ ರಷ್ಟು ಕೃಷಿ ಕ್ಷೇತ್ರಕ್ಕೆ ಹೆಚ್ಚಳ ಮಾಡಲಾಗಿದ್ದು, ಈ ಬಾರಿ ಒಟ್ಟು ೯೫೦. ೮೬ ಕೋಟಿ ರೂ. ನಿಗದಿಪಡಿಸಲಾಗಿದೆ. ಸರ್ಕಾರದ ನೂತನ ಕೈಗಾರಿಕಾ ನೀತಿ ಜಾರಿಯಿಂದಾಗಿ, ಜಿಲ್ಲೆಯಲ್ಲಿ ಕೈಗಾರಿಕಾ ಕ್ಷೇತ್ರ ಅಭಿವೃದ್ಧಿಯಾಗುವ ಸಾಧ್ಯತೆಗಳಿದ್ದು, ಈ ಕ್ಷೇತ್ರಕ್ಕೆ ೧೮೩. ೮೮ ಕೋಟಿ ರೂ. ಹಂಚಿಕೆ ಮಾಡಲಾಗಿದೆ.  ಉಳಿದಂತೆ ಗೃಹ ನಿರ್ಮಾಣ, ಶಿಕ್ಷಣ, ನಾನಾ ಆರ್ಥಿಕ ಚಟುವಟಿಕೆಗಳೂ ಸೇರಿದಂತೆ ಸೇವಾ ವಲಯಕ್ಕೆ ೩೪೪. ೨೩ ಕೋಟಿ ರೂ. ನಿಗದಿಪಡಿಸಿದೆ.  ಕೊಪ್ಪಳ ತಾಲೂಕಿಗಾಗಿ ಕೃಷಿ ಅಲ್ಪಾವಧಿ ಸಾಲಕ್ಕೆ ೧೨೩. ೭೩ ಕೋಟಿ ರೂ., ದೀರ್ಘಾವಧಿ ಸಾಲಕ್ಕೆ ೭೯. ೬೩ ಕೋಟಿ.  ಕೈಗಾರಿಕೆ ವಲಯ- ೭೮. ೭೬ ಕೊಟಿ.  ಸೇವಾ ವಲಯ- ೧೪೭. ೧೨ ಕೋಟಿ ರೂ. ಸೇರಿದಂತೆ ೪೨೯. ೨೪ ಕೋಟಿ ರೂ. ನಿಗದಿಪಡಿಸಲಾಗಿದೆ.  ಗಂಗಾವತಿ ತಾಲೂಕಿಗೆ ಕೃಷಿ ಅಲ್ಪಾವಧಿ ಸಾಲಕ್ಕೆ ೩೬೯. ೬೭ ಕೋಟಿ ರೂ., ದೀರ್ಘಾವಧಿ ಸಾಲಕ್ಕೆ ೨೩೧. ೨೧ ಕೋಟಿ.  ಕೈಗಾರಿಕೆ ವಲಯ- ೯೩. ೬೧ ಕೊಟಿ.  ಸೇವಾ ವಲಯ- ೧೪೫. ೨೨ ಕೋಟಿ ರೂ. ಸೇರಿದಂತೆ ೮೩೯. ೭೧ ಕೋಟಿ ರೂ. ನಿಗದಿಪಡಿಸಲಾಗಿದೆ.  ಕುಷ್ಟಗಿ ತಾಲೂಕಿಗೆ ಕೃಷಿ ಅಲ್ಪಾವಧಿ ಸಾಲಕ್ಕೆ ೪೪. ೮೮ ಕೋಟಿ ರೂ., ದೀರ್ಘಾವಧಿ ಸಾಲಕ್ಕೆ ೨೯. ೭೨ ಕೋಟಿ.  ಕೈಗಾರಿಕೆ ವಲಯ- ೮. ೦೯ ಕೊಟಿ.  ಸೇವಾ ವಲಯ- ೨೯. ೭೮ ಕೋಟಿ ರೂ. ಸೇರಿದಂತೆ ೧೧೨. ೪೭ ಕೋಟಿ ರೂ. ನಿಗದಿಪಡಿಸಲಾಗಿದೆ.  ಯಲಬುರ್ಗಾ ತಾಲೂಕಿಗೆ ಕೃಷಿ ಅಲ್ಪಾವಧಿ ಸಾಲಕ್ಕೆ ೫೭. ೪೨ ಕೋಟಿ ರೂ., ದೀರ್ಘಾವಧಿ ಸಾಲಕ್ಕೆ ೧೪. ೬೦ ಕೋಟಿ.  ಕೈಗಾರಿಕೆ ವಲಯ- ೩. ೪೨ ಕೊಟಿ.  ಸೇವಾ ವಲಯ- ೨೨. ೧೧ ಕೋಟಿ ರೂ. ಸೇರಿದಂತೆ ೯೭. ೫೫ ಕೋಟಿ ರೂ. ನಿಗದಿಪಡಿಸಲಾಗಿದೆ ಎಂದರು.
       ರಿಸರ್ವ್ ಬ್ಯಾಂಕ್ ಬೆಂಗಳೂರಿನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ವಿ. ಶ್ರೀನಿವಾಸ, ನಬಾರ್ಡ್ ಬೆಂಗಳೂರಿನ ಡೆವಲಪ್‌ಮೆಂಟ್ ಮ್ಯಾನೇಜರ್ ಟಿ. ಸುಧೀರ್, ಬಳ್ಳಾರಿಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಚಂದ್ರಶೇಖರಯ್ಯ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ರವೀಂದ್ರ ಢಾಣಕ ಶಿರೂರ ಉಪಸ್ಥಿತರಿದ್ದರು. 
Please follow and like us:
error

Leave a Reply

error: Content is protected !!