ಸರ್ಕಾರದ ಅನುದಾನದಿಂದ ನಿರ್ಮಾಣಗೊಂಡ ಸಾರ್ವಜನಿಕ ಆಸ್ತಿಗಳ ಸದ್ಬಳಕೆ ಮಾಡಿಕೊಳ್ಳಿ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ.

 ಕೊಪ್ಪಳ- ೦೩, ಅಳವಂಡಿ ಜಿಲ್ಲಾ ಪಂಚಾಯತಿ ಕ್ಷೇತ್ರದ ಗ್ರಾಮಗಳಾದ ನೀರಲಗಿ, ಮತ್ತೂರು, ಹನಕುಂಟಿ, ತಿಗರಿ, ಬೆಟಗೇರಿ, ಮೂರನಹಳ್ಳಿ, ಬೈರಾಪುರ, ಬೋಚನಹಳ್ಳಿ, ನೇಲೋಗಿಪುರ, ಹಲವಾಗಲಿ, ಗ್ರಾಮಗಳಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ಯೋಜನೆಯಡಿಯಲ್ಲಿ ಅಂದಾಜು ಮೊತ್ತ ರೂ.೨ ಕೋಟಿಗಳ ಸಮುದಾಯ ಭವನ ಹಾಗೂ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಸರ್ಕಾರ ಕೊಡುವ ಅನುದಾನವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದು ಪ್ರತಿಯೊಬ್ಬರ ಅದಮ್ಯಕರ್ತವ್ಯ. ಸರ್ಕಾರವು ಗ್ರಾಮವಿಕಾಸನ ಯೋಜನೆಯಡಿಯಲ್ಲಿ ಪ್ರತಿಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದು, ಗ್ರಾಮಗಳ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಕೊಪ್ಪಳ ಕ್ಷೇತ್ರದ ಗ್ರಾಮಗಳಲ್ಲಿ ಎಸ್.ಪಿ.ಟಿ.ಎಸ್.ಪಿ ಯೋಜನೆಯಡಿಯಲ್ಲಿ ರೂ.೨೦ ಕೋಟಿಯ ಸಿಸಿ ರಸ್ತೆ ಮತ್ತು ಸಮುದಾಯ ಭವನಗಳ ಕಾಮಗಾರಿ ನಿರ್ಮಾಣಗೊಂಡಿವೆ ಗ್ರಾಮಗಳ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ಪಿ.ಡ್ಬ್ಲೂ.ಡಿ ಯೋಜನೆಯಡಿಯಲ್ಲಿ ರೂ.೪೮ ಕೋಟಿ ಮಂಜೂರಾಗಿವೆ. ಬೆಟಗೇರಿ-ಅಳವಂಡಿ ಏತ ನೀರಾವರಿ ಯೋಜನೆಗೆ ರೂ. ೯೦.೩೮ ಕೋಟಿ ಮೊತ್ತದ ಕಾಮಗಾರಿಯ ಟೆಂಡರನ್ನು ಕರೆಯಲಾಗಿದ್ದು, ಬರುವ ದಿನಗಳಲ್ಲಿ ಸುಮಾರು ೧೦ ಸಾವಿರ ಏಕರೆ ಭೂಮಿ ನೀರಾವರಿಗೆ ಒಳಪಡಲಿದೆ. ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಬಡವರ ಹಾಗೂ ರೈತರ ಸಲುವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಭಾಗ್ಯಜ್ಯೋತಿ ವಿದ್ಯುತ್ ಬಾಕಿಯನ್ನು ಮನ್ನಾಮಾಡಿದ್ದು ಸರ್ಕಾರದ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮತ್ತೂರು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮವ್ವ ಚುಕುಣಿ, ತಾ,ಪಂ, ಸದಸ್ಯರಾದ ಸಂಗಪ್ಪ ಕವಲೂರು, ಜಯಪ್ಪ ಪೂಜಾರ, ಪಕ್ಷದ ಮುಖಂಡರಾದ ಕೆ.ಎಮ್.ಸಯ್ಯದ್, ಗಾಳೇಪ್ಪ ಪೂಜಾರ, ನೀಲಪ್ಪ ಹಟ್ಟಿ, ಶರಣಯ್ಯ ಗುರುವಿನ್, ಹನುಮಂತಪ್ಪ ಮತ್ತೂರು, ಮಲ್ಲನಗೌಡ್ರು, ಬಸವರಾಜ ಕತ್ತಿ, ತಾ.ಪಂ, ಇ.ಯೋ ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಉಮೇಶ ಪೂಜಾರ, ಕನಕರಾಜ ಹೊಸಗೇರಿ, ವಕ್ತಾರ ಅಕ್ಬರಪಾಷಾ ಪಲ್ಟನ ಉಪಸ್ಥಿತರಿದ್ದರು.

Please follow and like us:
error