ಎ ಐ ಡಿ ವೈ ಓ ಜಿಲ್ಲಾ ಸಮಿತಿಯಿಂದ ನಗರದ ಅಶೋಕ ವೃತದ ಬಳಿ ಸಾಂಕೇತಿಕ ಪ್ರತಿಭಟನೆ.

ಕೊಪ್ಪಳ-02-

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎ ಐ ಡಿ ವೈ ಓ ಜಿಲ್ಲಾ ಸಮಿತಿ ಕಾರ್ಯದರ್ಶಿಗಳಾದ ರಮೇಶ ವಂಕಲಕುಂಟಿ ಮಾತನಾಡಿ  ದೇಶದ ಜನತೆ ಇಂದು ಎದುರಿಸುತ್ತಿರುವ ಬೆಲೆಏರಿಕೆ, ನಿರುದ್ಯೋಗ, ಆರೋಗ್ಯ ಸಮಸ್ಯೆ ಮತ್ತು ಶಿಕ್ಷಣದ ವ್ಯಾಪಾರಿಕರಣ, ಕೃಷಿ ಮೇಲಿನ ಸಬ್ಸಿಡಿ ಕಡಿತ, ಕಾರ್ಮಿಕ ಹಕ್ಕುಗಳ ಹರಣದಂತಹ ಕಡು ಜನವಿರೋಧಿ ನೀತಿಗಳ ವಿರುದ್ದ ಸಪ್ಟಂಬರ್ ೨ ರಂದು ಎಲ್ಲಾ ಎಡ ಪಕ್ಷಗಳು ಕೇಂದ್ರ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಸಂಘಟಿಸುತ್ತಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಎ ಐ ಡಿ ವೈ ಓ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಜಾಗತೀಕರಣ ಉದಾರೀಕರಣ ಖಾಸಗೀಕರಣ ನೀತಿಗಳ ಫಲವಾಗಿ ಇಮ್ಮಡಿಗೊಂಡ ಎಲ್ಲ ಸಮಸ್ಯೆಗಳ ವಿರುದ್ದ ದೇಶಾದಾದ್ಯಂತ ವಿದ್ಯಾರ್ಥಿ-ಯುವಜನರು ಹೋರಾಟದಲ್ಲಿ ಧುಮುಕಿದರು.  ಭ್ರಷ್ಟಾಚಾರ, ನಿರ್ಭಯ ಪ್ರಕರಣ, ಮತ್ತು ಸರ್ಕಾರದ ಬಂಡವಾಳಶಾಹಿ ಪರ ನೀತಿಗಳ ವಿರುದ್ದ ನಡೆದ ಬೃಹತ್ ಚಳುವಳಿಗಳಲ್ಲಿ ಸ್ಪೂರ್ತಿದಾಯಕವಾಗಿ ಪಾಲ್ಗೊಂಡರು. ಈ ಹೋರಟ ಗಳಿಂದ ಉಂಟಾದ ಕಾಂಗ್ರೆಸ್ ವಿರೋಧಿ ಭಾವನೆಯ ಲಾಭವನ್ನು ಕಬಳಿಸಿದ ಬಿಜೆಪಿಯು ಬಂಡವಾಳಶಾಯಿ ವರ್ಗದ ಬೆಂಬಲದೋಂದಿಗೆ ನರೇಂದ್ರ ಮೋದಿಯವರನ್ನು ಬದಲಾವಣೆಯ ಹರಿಕಾರರೆಂದು ಬಿಂಬಿಸಿತು. ಆದರೆ ಬಿಜೆಪಿ ಆಳ್ವಿಕೆಯಿರುವ ಮಧ್ಯಪ್ರದೇಶದಲ್ಲಿ ವ್ಯಾಪಂ ಹಗರಣ ಪಂಕಜ ಮುಂಡೆಯವರ  ಚಿಕ್ಕಿ ಹಗರಣ ಮಾಹಾರಾಷ್ಟ್ರದಲ್ಲಿ. ರಾಜಸ್ಥಾನದ ಮುಖ್ಯಮಂತ್ರಿ ಮತ್ತು ಅವರ ಪುತ್ರನ ಹಾಗೂ ಲಲಿತ ಮೋದಿ ಸಖ್ಯ, ಸುಳ್ಳು ಪದವಿ ಪ್ರಮಾಣ ಪತ್ರಗಳ ಹಗರಣ, ಕೇಂದ್ರ ಸರಕಾರದ ನೆಲೆಯಿಂದ ಲಲಿತ್ ಗೇಟ ಹಗರಣ, ಮುಂತಾದ ಹಗರಣಗಳು ಬಿಲದ ಇಲಿಗಳಂತೆ ಹೋರಬರುತ್ತಿವೆ. ಎಂದು ಆಪಾದಿಸಿದರು.  ಸಭೆಯನ್ನು ಎ ಐ ಡಿ ವೈ ಓ ಜಿಲ್ಲಾ ಸಮಿತಿ ಸದಸ್ಯೆರಾದ ಶರಣು ಗಡ್ಡಿ ಉದ್ದೇಶಿಸಿ ಮಾತನಾಡಿ ಇದೇ ಸಮಯದಲ್ಲಿ ಪದವಿ ಸ್ನಾತಕೋತ್ತರ ಡಿಎಡ್, ಬಿಎಡ್, ಐಟಿಐ ಡಿಪ್ಲೋಮಾ ಇಂಜಿನಿಯರಿಂಗ, ನರ್ಸಿಂಗ ಇತ್ಯಾದಿ ವೃತ್ತಿ ಕೌಶಲ್ಯ ಪಡೆದ ಕೋಟ್ಯಾಂತರ ಯುವಜನರು ಉದ್ಯೋಗವಿಲ್ಲದೆ ಅಥವಾ ಅರೇ ಉದ್ಯೋಗಿಗಳಾಗಿ ಜೀವನದ ಅಭಧ್ರತೆಯಲ್ಲಿ ಕಾಲ ಕಳೆಯುತ್ತಿದಾರೆ ಆದರೆ ನಮ್ಮ ಪ್ರಧಾನಿಗಳು ದೇಶದ ಯುವಜನರು ‘ಕೌಶಲ್ಯದ ಕೋರತೆಯಿಂದಾಗಿ’ ನಿರುಧ್ಯೋಗ ಸಮಸ್ಯೆ ಬೆಳೆಯುತ್ತಿದೆ ಎಂದು  ಹೋಸ ವಿಶ್ಲೇಷಣೆ ಮಾಡುತ್ತಿದ್ದಾರೆ. ಎಂದು ಅಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ರಾಯಪ್ಪ ಗಡ್ಡಿ, ವೀರೆಶ, ಮೌಲಾಸಾಬ, ತುಘಲಕ್, ಮತ್ತಿತರರು ಭಾಗವಹಿಸಿದ್ದರು.

Please follow and like us:
error