ಭರ್ಜರಿ ಸಾಹಿತ್ಯ ಸಮ್ಮೇಳನ : ಸ್ಮರಣ ಸಂಚಿಕೆಯೂ ಬಿಡುಗಡೆ !

ಕುಷ್ಟಗಿ : ಜಿಲ್ಲೆಯ ಕೊನೆಯ ಭಾಗದಲ್ಲಿರುವ ಹನುಮನಾಳದಲ್ಲಿ ನಡೆದ 5ನೇ ಕುಷ್ಟಗಿ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ ಭರ್ಜರಿಯಾಗಿ ನಡೆಯಿತು. ಊರಿಗೆ ಊರೇ ಸಂಭ್ರಮದಲ್ಲಿ ಪಾಲ್ಗೊಂಡಿತ್ತು. ಸಂಭ್ರಮವನ್ನು ಹೆಚ್ಚಿಸುವುದಕ್ಕೆ ನಟ ಬಿ.ಸಿ.ಪಾಟೀಲ್ ಸಾಥ್ ನೀಡಿದರು.
ಸಾಹಿತಿ ಸಂಗಮೇಶ್ ಬಾದವಾಡಗಿಯವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನ ಆಕರ್ಷಕ ಮೆರವಣಿಗೆಯೊಂದಿಗೆ ಆರಂಭಗೊಂಡಿತು. ಊರಿನ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ಶಾಲಾ,ಕಾಲೇಜುಗಳ ಮಕ್ಕಳು, ವಿವಿಧ ಸಂಘಟನೆಗಳವರು, ವಿವಿಧ ವೇಷತೊಟ್ಟು ಗಮನ ಸೆಳೆದ ಮಕ್ಕಳು, ಕುಂಭದಾರಿ ಯುವತಿಯರು, ಭಾಜಾ ಭಜಂತ್ರಿಗಳು ಗಮನ ಸೆಳೆದವು.
ಉದ್ಘಾಟನಾ ಕಾರ್ಯಕ್ರಮವು ತಡವಾಗಿಯೇ ಪ್ರಾರಂಭಗೊಂಡರೂ ನಟ ಬಿ.ಸಿ.ಪಾಟೀಲ್ ರ ಆಕರ್ಷಣೆಯಿಂದ ಸಭೆ ತುಂಬಿ ತುಳುಕಿತು. ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಸಮ್ಮೇಳನವನ್ನು ಉದ್ಘಾಟಿಸಿದರು.ಬಿ.ಸಿ.ಪಾಟೀಲ್ ಕನ್ನಡಿಗರಿಗೆ ಸ್ವಾಭಿಮಾನ ಕಡಿಮೆ ಇದೆ ಎಂದು ಹೇಳಿ ತಮ್ಮ ಸಿನೆಮಾದ ಡೈಲಾಗ್ ಹೇಳಿದರು. ಸಮ್ಮೇಳನಾಧ್ಯಕ್ಷ ಸಂಗಮೇಶ ಬಾದವಾಡಗಿ ಮಾತನಾಡಿದರು. ವೇದಿಕೆಯೂ ಅತಿಥಿಗಳಿಂದ ತುಂಬಿ ತುಳುಕುತ್ತಿತ್ತು. ಸ್ವಾಗತ ಸಮಿತಿಯ ಅಧ್ಯಕ್ಷ ಶಾಸಕ ಅಮರೇಗೌಡ ಬಯ್ಯಾಪೂರ, ಶೇಖರಗೌಡ ಮಾಲಿಪಾಟೀಲ್, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಹಾಗೂ ಜನಪ್ರತಿನಿಧಿಗು ಉಪಸ್ಥಿತರಿದ್ದರು. ವಿಜಯ ಮಹಾಂತ ಸ್ವಾಮಿಜಿ, ಸಯ್ಯದಶಹಾ ಅಬ್ದುಲ್ ಖಾದರ್ ಖಾದ್ರಿ ಸಾನಿದ್ಯ ವಹಿಸಿದ್ದರು.
ನಂತರ ಗೋಷ್ಠಿಗಳು ನಡೆದವು.

Please follow and like us:
error