ಖಾಸೀಂ ಅಲಿ, ಮುದ್ದಾಬಳ್ಳಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಕೆ. ದೊಡ್ಡವೀರಣ್ಣರವರ ಭಾವಚಿತ್ರಕ್ಕೆ ಪುಷ್ಪಾರಣೆಯನ್ನು ನೇರವೇರಿಸಿ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಾದ ಶ್ರೀ ಗೋವಿಂದರಾಜ ಬೊಮ್ಮಲಾಪುರವರ ಬಾನ್ಸುರಿ ಮಂಗಲವಾದ್ಯದೊಂದಿಗೆ ಸಂಗೀತ ಕಾರ್ಯಕ್ರಮ ಪ್ರಾರಂಭಗೊಂಡಿತು. ಸಹ ಬಾನ್ಸುರಿಯಲ್ಲಿ ನಾಗರಾಜ ಶ್ಯಾವಿ, ತಬಲಾದಲ್ಲಿ ರಾಘವೇಂದ್ರ ಗಂಗಾವತಿ ಸಾಥ್ ನೀಡಿದರು. ೨೦೧೫ ರ ಕರ್ನಾಟಕ ರಾಜೋತ್ಸವ ಪ್ರಶಸ್ತಿ ವಿಜೇತರಾದ ಶ್ರೀ ಸಂಜೀವಪ್ಪ ಗೊಬ್ಬೂರ ಇವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆರ್.ಎಸ್. ಉಜ್ಜನಕೊಪ್ಪ, ಮಹಾಬಳೇಶ್ವರ ಹಾಸಿನಾಳ, ವೆಂಕಟೇಶ ದಾಸನಾಳ, ಉಷಾ ರಾಘವೇಂದ್ರ, ಕೆ. ಗಂಗಾಶ್ರೀ, ರವಿ ಕಾಶೆಟ್ಟಿ, ಸುಗಮ ಸಂಗೀತವನ್ನು ಪ್ರಸ್ತುತ ಪಡಿಸಿದರು. ಹಾರ್ಮೊನಿಯಂ ಸಾಥಿ ಕನಕಪ್ಪ ಚಿತ್ರಗಾರ, ರಾಮು ಕಂಪ್ಲಿ ವಹಿಸಿದ್ದರು. ತಬಲಾ ವಾದನದಲ್ಲಿ ಶ್ರೀ ರಾಘವೇಂದ್ರ, ಮಾರುತಿ ಬಿನ್ನಾಳ, ಸಣ್ಣಪ್ಪ ಕಮ್ಮಾರ ಭಾಗವಹಿಸಿದ್ದರು. ಅಂಬಯ್ಯ ನೂಲಿಯವರು ಭೈರವಿ ಹಾಡಿನೊಂದಿಗೆ ಕಾರ್ಯಕ್ರಮ ಯಶಸ್ವಿಗೊಂಡಿತೆಂದು ಶ್ರೀ ಗುರು ಕುಮಾರೇಶ್ವರ ಸಂಗೀತ ಮತ್ತು ಲಲಿತಕಲಾ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವ ಸದಸ್ಯರು ಸಂತೋಷ ವ್ಯಕ್ತಪಡಿಸಿದ್ದಾರೆ.
ಮನಸೂರೆಗೊಂಡ ಅಂಬಯ್ಯ ನೂಲಿಯವರ ಗಾಯನ
ಕೊಪ್ಪಳ, ಡಿ.೦೪ ಶ್ರೀ ಗುರುಕುಮಾರೇಶ್ವರ ಸಂಗೀತ ಮತ್ತು ಲಲಿತ ಕಲಾ ಸಂಸ್ಥೆಯ ವತಿಯಿಂದ ಗಂಗಾವತಿಯ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಇದೇ ದಿ.೦೨ ಬುಧವಾರ ದಿ.ಶ್ರೀ ಕೆ.ಡೊಡ್ಡ ವೀರಣ್ಣನವರ ಪುಣ್ಯತಿಥಿಯ ಅಂಗವಾಗಿ ನಡೆದ ಸಂಗೀತ ಸಮಾರಾಧನೆಯಲ್ಲಿ ರಾಯಚೂರಿನ ಅಂತರಾಷ್ಟ್ರೀಯ ಕಲಾವಿದರಾದ ಶ್ರೀ ಅಂಬಯ್ಯ ನೂಲಿಯವರ ಗಾಯನ ಶೋತೃಗಳ ಮನಸೂರೆಗೊಂಡಿತು. ಬಸವಣ್ಣನವರು ಮತ್ತು ಶ್ರೀ ಗುರುಪುಟ್ಟರಾಜರ ವಚನಗಳನ್ನು ಹಾಡುವುದರ ಮೂಲಕ ಅವರು ಶೋತೃಗಳನ್ನು ಹಿಡಿದಿಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಎಂ.ಶಂಭುಲಿಂಗಪ್ಪ ವಹಿಸಿದ್ದು, ನಿಜಲಿಂಗಪ್ಪ ಮೆಣಸಗಿ, ಮಹಾಲಕ್ಷ್ಮೀ ಕೇಸರಹಟ್ಟಿ, ರಮೇಶ ಗಬ್ಬೂರ,
Please follow and like us: