ಕಂಬಾರರ ಬಗ್ಗೆ ಬಾಳಠಾಕ್ರೆ ಅವಹೇಳನಕಾರಿ ಹೇಳಿಕೆ ಸರಿಯಲ್ಲ- ಶಿವರಾಮಗೌಡ

Koppal mp shivaramegouda
ರಾಷ್ಟ್ರ ಮಟ್ಟದ ಪ್ರಶಸ್ತಿಯಾಗಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾಗಿರುವ ಡಾ. ಚಂದ್ರಶೇಖರ ಕಂಬಾರ ಅವರ ಬಗ್ಗೆ ಬಾಳಠಾಕ್ರೆಯವರು ತಮ್ಮ ಸಾಮ್ನಾ ಪತ್ರಿಕೆಯಲ್ಲಿ ಅವಹೇಳನಕಾರಿ ಹೇಳಿಕೆ ಪ್ರಕಟಿಸಿರುವುದು ಅವರ ಘನತೆಗೆ ತಕ್ಕುದಾದುದಲ್ಲ ಎಂದು ಸಂಸದ ಶಿವರಾಮಗೌಡ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
  ನವದೆಹಲಿಯಿಂದ ದೂರವಾಣಿ ಮೂಲಕ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಅವರು ಜ್ಞಾನಪೀಠ ಪ್ರಶಸ್ತಿ ಒಂದು ರಾಷ್ಟ್ರಮಟ್ಟದ ಅತ್ಯುನ್ನತ ಗೌರವಯುತ ಪ್ರಶಸ್ತಿಯಾಗಿದ್ದು, ಈ ಪ್ರಶಸ್ತಿಯನ್ನು ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಮಾಡಿರುವುದನ್ನು ಗುರುತಿಸಿಯೇ ಪ್ರಶಸ್ತಿ ನೀಡಿರುತ್ತಾರೆ.  ಅಂತಹ ಗೌರವಾನ್ವಿತ ಪ್ರಶಸ್ತಿ ಪುರಸ್ಕೃತರಾಗಿರುವ ರಾಜ್ಯದ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರ ಬಗ್ಗೆ ಮಹಾರಾಷ್ಟ್ರದ ಬಾಳಠಾಕ್ರೆಯವರು ತಮ್ಮ ಸಾಮ್ನಾ ಪತ್ರಿಕೆಯಲ್ಲಿ ಕೀಳು ಮಟ್ಟದ ಭಾಷೆಯಲ್ಲಿ ಹೇಳಿಕೆ ಪ್ರಕಟಿಸಿರುವುದು ತರವಲ್ಲ.  ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಹೇಳಿಕೆಯನ್ನು ನೀಡುವ ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದರೂ, ಅದನ್ನು ಸಂದರ್ಭೋಚಿತವಾಗಿ ಸೂಕ್ತ ರೀತಿಯಲ್ಲಿ ವ್ಯಕ್ತಪಡಿಸಬೇಕೆ ಹೊರತು, ಕೀಳು ಮಟ್ಟದ ಭಾಷೆಯನ್ನು ಉಪಯೋಗಿಸಿ, ಒಬ್ಬರನ್ನು ಟೀಕಿಸುವುದು ಅವರ ಘನತೆಗೆ ತಕ್ಕುದಾದುದಲ್ಲ ಎಂದು ಸಂಸದ ಶಿವರಾಮಗೌಡ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related posts

Leave a Comment